ಕಾಸರಗೋಡು: ಕೃಷಿ ಅಭಿವೃದ್ಧಿ ಮತ್ತು ಕೃಷಿಕರ ಕಲ್ಯಾಣ ಇಲಾಖೆ ಅಧೀನದಲ್ಲಿರುವ ಕ್ಯಾಶ್ಯೂ ಪ್ರೋಜನಿ ಓರ್ಚಾರ್ಡ್‍ನಲ್ಲಿ ತೆಂಗಿನ ಸಸಿಗಳ ನರ್ಸರಿ ಆರಂಭಿಸಲಾಗುವುದು. ಊರತಳಿಯ ಗಿಡ್ಡ ತೆಂಗಿನ ಸಸಿಗಳನ್ನು ಬೆಳೆಸುವ ನಿಟ್ಟಿನಲ್ಲಿ ನರ್ಸರಿ ಆರಂಭಿಸಲಾಗುವುದು. ನರ್ಸರಿಗೆ ಬೇಕಾದ ಬೀಜಗಳನ್ನು ಕೃಷಿಕರಿಂದ ಸಂಗ್ರಹಿಸಲಾಗುವುದು. ಊರ ಗಿಡ್ಡ ತಳಿಯ ಬೀಜದ ತಲಾ ಒಂದು ತೆಂಗಿಗೆ ರೂ. 70ರಂತೆ ಖರೀದಿಸಲಾಗುವುದು. ಅಭಿರುಚಿಯುಳ್ಳವರು ಸನಿಹದ ಕೃಷಿಭವನದಲ್ಲಿ ತಮ್ಮ ಹೆಸರು ನೋಂದಾಯಿಸುವಂತೆ ಪ್ರಕಟಣೆ ತಿಳಿಸಿದೆ.




