ಕಾಸರಗೋಡು: ಸಾಮಾಜಿಕ-ಸಾಂಸ್ಕøತಿಕ-ಸಾಹಿತ್ಯಿಕ ಸಂಸ್ಥೆ ಕಾಸರಗೋಡಿಮ ರಂಗಚಿನ್ನಾರಿ (ರಿ.)ಯ 20ನೇ ವಾರ್ಷಿಕೋತ್ಸವ ಮತ್ತು ರಂಗಚಿನ್ನಾರಿ ಪ್ರಶಸ್ತಿ ಪ್ರದಾನ ಸಮಾರಂಭ 'ವಿಂಶತಿ ಹಬ್ಬ' ಮೇ 10 ರಂದು ಮಧ್ಯಾಹ್ನ 2 ರಿಂದ ಕಾಸರಗೋಡು ಬೀರಂತಬೈಲು ಲಯನ್ಸ್ ಸೇವಾ ಮಂದಿರದಲ್ಲಿ ಜರುಗಲಿದೆ.
ಕಳೆದ ಹಲವು ವರ್ಷಗಳಿಂದ ಕಾಸರಗೋಡಿನಲ್ಲಿ ನಾರಿ ಚಿನ್ನಾರಿ ಎಂಬ ಮಹಿಳಾ ಘಟಕ ಮತ್ತು ಸ್ವರಜಿನ್ನಾರಿ ಎಂಬ ಸಂಗೀತ ಘಟಕ ರಚಿಸಿ ಕನ್ನಡದ ಚಟುವಟಿಕೆ ನಡೆಸುವುದರ ಜತೆಗೆ ಹಿರಿಯ ಕಿರಿಯ ಪ್ರತಿಭೆಗಳಿಗೆ ಶ್ರೀ ಕೇಶವಾನಂದ ಭಾರತಿ ಸ್ವಾಮೀಜಿ ಸ್ವರ್ಣಾರ್ಧ ಪ್ರಶಸ್ತಿ, ರಂಗ ಚಿನ್ನಾರಿ ಪ್ರಶಸ್ತಿ, ರಂಗ ಚಿನ್ನಾರಿ ಯುವ ಪ್ರಶಸ್ತಿ ನೀಡಿ ಪ್ರತಿಭೆಗಳನ್ನು ಗೌರವಿಸುತ್ತಿದೆ.
2025-26 ನೇ ಸಾಲಿನ ಪ್ರಶಸ್ತಿಯನ್ನು ಘೋಷಿಸಲಾಗಿದ್ದು, ಶ್ರೀ ಕೇಶವಾನಂದ ಭಾರತಿ ಸ್ವಾಮೀಜಿ ಸ್ವರ್ಣಾರ್ಧ ಪ್ರಶಸ್ತಿಗೆ ಯಕ್ಷಗಾಣ ಕ್ಷೇತ್ರದ ಪದ್ಮನಾಭ ಶೆಟ್ಟಿ ಮಜಕಾರ್, ರಂಗ ಚಿನ್ನಾರಿ ಪ್ರಶಸ್ತಿಗೆ ಜಯಪ್ರಕಾಶ ತೂಮಿನಾಡು(ರಂಗಭೂಮಿ-ಚಲನಚಿತ್ರ ಕ್ಷೇತ್ರ) ಹಾಗೂ ಮಂಜುಳಾ ಗುರುರಾಜ್ ಇರಾ(ಹರಿಕತೆ ಕ್ಷೇತ್ರ), ರಂಗ ಚಿನ್ನಾರಿ ಯುವ ಪ್ರಶಸ್ತಿಗೆ ದೇವಾಂಶ ರೈ(ಕ್ರೀಡಾಕ್ಷೇತ್ರ) ಮತ್ತು ಅನ್ವಿತಾ ಟಿ(ಸಂಗೀತ ಕ್ಷೇತ್ರ) ಆಯ್ಕೆಯಾಗಿದ್ದಾರೆ.
ಮಧ್ಯಾಹ್ನ 2ಗಂಟೆಗೆ ನಡೆಯುವ ಸಮಾರಂಭದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಶಾರಾನಾಥ ಗಟ್ಟಿ ಕಾಪಿಕಾಡ್, ಖ್ಯಾತ ಪತ್ರಕರ್ತ ರವೀಂದ್ರ ಜೋಷಿ ಮೈಸೂರು,ಪ್ರಖ್ಯಾತ ವಿಮರ್ಶಕ ನಾಟಕ ನಿರ್ದೇಶಕ,ಚಿತ್ರ-ಸಾಹಿತಿ ವಿಜಯಕುಮಾರ್ ಕೋಡಿಯಾಲಬೈಲ್, ರಾಷ್ಟ್ರ ಪ್ರಶಸ್ತಿ ವಿಜೇತ, ಚಲನಚಿತ್ರ ಪತ್ರಕರ್ತ ಬಾ. ನಾ. ಸುಬ್ರಹ್ಮಣ್ಯ, ಕಾಸರಗೋಡು ನಗರಸಭಾ ಸದಸ್ಯ ಅರುಣ್ ಕುಮಾರ್ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.



