ಮಂಜೇಶ್ವರ: ನೆತ್ತಿಲಪದವಿನಲ್ಲಿ ವಾಸಿಸುವ ಬಡ ಕುಟುಂಬಕ್ಕಾಗಿ ಯೂನಿಟಿ ಹೌಸ್ ಯೋಜನೆಯನ್ವಯ ಕಾಸರಗೋಡು ಯೂನಿಟಿ ಚಾರಿಟೇಬಲ್ ಟ್ರಸ್ಟ್ ನಿರ್ಮಿಸಿದ ಮನೆಯ ಕೀಲಿಕೈ ಹಸ್ತಾಂತರ ಸಮಾರಂಭ ನೆರವೇರಿತು. ಮಂಜೇಶ್ವರ ಶಾಸಕ ಎ.ಕೆ.ಎಂ. ಅಶ್ರಫ್ ಸಮಾರಂಭ ಉದ್ಘಾಟಿಸಿ ಮಾತನಾಡಿ, ಸ್ವಂತ ಸೂರು ಪ್ರತಿಯೊಬ್ಬ ವ್ಯಕ್ತಿಯ ಕನಸಾಗಿದ್ದು, ನಿರ್ಗತಿಕ ಕುಟುಂಬಕ್ಕೆ ಸ್ವಂತ ಮನೆ ನಿರ್ಮಿಸಿ ಕೊಡುವಲ್ಲಿ ದೈವಿಕ ಕಾರ್ಯ ಅಡಕವಾಗಿರುವುದಾಗಿ ತಿಳಿಸಿದ ಅವರು, ಯೂನಿಟಿ ಚಾರಿಟೇಬಲ್ ಟ್ರಸ್ಟ್‍ನ ಸಾಧನೆ ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿಯುವ ಕಾರ್ಯವಾಗಿದೆ ಎಂದು ತಿಳಿಸಿದರು.
ಟ್ರಸ್ಟ್ ಅಧ್ಯಕ್ಷ ಸಿ.ಎ. ಅಬ್ದುಲ್ ರಹೀಮ್ ಅಧ್ಯಕ್ಷತೆ ವಹಿಸಿದ್ದರು. ವಾಜಿದ್ ಎನ್.ಎಂ. ಪ್ರಾರ್ಥಬೆ ನಡೆಸಿಕೊಟ್ಟರು. ನರಿಂಗಾನ ಗ್ರಾಮ ಪಂಚಾಯಿತಿ ಅಧ್ಯಕ್ಷ ನವಾಜ್, ಕಾಸರಗೋಡು ಜಿಲ್ಲಾ ಪಂಚಾಯಿತಿ ಸದಸ್ಯ ಹರ್ಷದ್ ವರ್ಕಾಡಿ, ನರಿಂಗಾನ ಗ್ರಾಮ ಪಂಚಾಯಿತಿ ಸದಸ್ಯೆ ಜಯಂತಿ, ವರ್ಕಾಡಿ ಗ್ರಾಮ ಪಂಚಾಯಿತಿ ಸದಸ್ಯ ಅಬ್ದುಲ್ ಮಜೀದ್,
ಬಿಲಾಲ್ ಮಸೀದಿ ಇಮಾಮ್ ಇಬ್ರಾಹಿಂ ಸಖಾಫಿ, ಅಬ್ದುಲ್ ಸಲಾಂ ಟೇಕಿಲ್, ಇಲ್ಯಾಸ್ ಉಪ್ಪಳ ಮುಸ್ತಫಾ ಮದನಿ, ಅಬ್ದುಲ್ ಖಾದರ್ ಟೇಕಿಲ್, ಮತ್ತು ಇಬ್ರಾಹಿಂ ಎ.ಎಚ್ ಉಪಸ್ಥೀತರಿದ್ದರು.
ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಖಾದರ್ ಚಟ್ಟಂಚಾಲ್ ಸ್ವಾಗತಿಸಿದರು. ಯೋಜನೆಯ ಸಂಯೋಜಕ ಟಿ ಕೆ ಸಿರಾಜುದ್ದೀನ್ ವಂದಿಸಿದರು.



