ನವದೆಹಲಿ: ಗಣರಾಜ್ಯೋತ್ಸವ ಕಾರ್ಯಕ್ರಮಗಳಿಗೆ ತೆರೆಎಳೆಯುವ ನಿಮಿತ್ತ ಜ.29ರಂದು ಇಲ್ಲಿನ ವಿಜಯ್‌ಚೌಕ್‌ನಲ್ಲಿ ನಡೆಸುವ ಬೀಟಿಂಗ್ ರಿಟ್ರೀಟ್ ಕಾರ್ಯಕ್ರಮದಿಂದ ‘ಅಬೈಡ್ ವಿತ್ ಮಿ’ ಗೀತೆ ಕೈಬಿಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ತಿಳಿದುಬಂದಿದೆ.
‘ಅಬೈಡ್ ವಿತ್ ಮಿ ಮಹಾತ್ಮಗಾಂಧಿ ಅವರಿಗೆ ಅತ್ಯಂತ ಪ್ರಿಯವಾದ ಗೀತೆಯಾಗಿತ್ತು. ಬೀಟಿಂಗ್ ರಿಟ್ರೀಟ್ ಕಾರ್ಯಕ್ರಮ ಮುಗಿಯುವ ದ್ಯೋತಕವಾಗಿ ಈ ಗೀತೆಯನ್ನು ನುಡಿಸಲಾಗುತ್ತಿತ್ತು. ಶತಮಾನಗಳಷ್ಟು ಹಳೆಯದಾದ ಸೇನಾ ಸಂಪ್ರದಾಯದಲ್ಲಿ ಇದು ಬಳಕೆಯಲ್ಲಿದೆ. ಆದರೆ ಇದೀಗ ಈ ಗೀತೆಯನ್ನು ಕೈ ಬಿಡಲಾಗುತ್ತಿದೆ.
‘ಶಾಶ್ವತ ಜ್ಯೋತಿ’ಯನ್ನು ಇಂಡಿಯಾ ಗೇಟ್ ಬಳಿಯ ಅಮರ್ ಜವಾನ್ ಜ್ಯೋತಿ ಸ್ಥಳದಿಂದ ರಾಷ್ಟ್ರೀಯ ಯುದ್ಧ ಸ್ಮಾರಕ ಸ್ಥಳಕ್ಕೆ ಸ್ಥಳಾಂತರಿಸಿದ್ದ ತೀರ್ಮಾನದ ಹಿಂದೆಯೇ ಸರ್ಕಾರದ ಈ ನಿರ್ಧಾರವೂ ಹೊರಬಿದ್ದಿದೆ. ಗಾಂಧೀಜಿ ಅವರಿಗೆ ಪ್ರಿಯವಾಗಿದ್ದ ‘ಅಬೈಡ್ ವಿತ್ ಮಿ’ ಗೀತೆಯು ‘ಜೀವನಪೂರ್ತಿ, ಸಾವಿನವರೆಗೂ ಜೊತೆಗೇ ಇರು’ ಎಂದು ದೇವರನ್ನು ಕೋರುವ ಪ್ರಾರ್ಥನಾ ಗೀತೆಯಾಗಿದೆ. 1847ರಲ್ಲಿ ಸ್ಕಾಟಿಷ್‌ನ ಹೆನ್ರಿ ಫ್ರಾನ್ಸಿಸ್ ಲೈಟ್ ಅವರು ಈ ಗೀತೆಯನ್ನು ರಚಿಸಿದ್ದರು. ಲೈಟ್ ಅವರು ಕ್ಷಯರೋಗದಿಂದ ಮೃತಪಟ್ಟರು.
ಈ ವರ್ಷದ ಸಮಾರಂಭದಲ್ಲಿ ನುಡಿಸಲಾಗುವ 26 ಟ್ಯೂನ್‌ಗಳಲ್ಲಿ 'ಹೇ ಕಾಂಚಾ', 'ಚನ್ನ ಬಿಲೌರಿ', 'ಜೈ ಜನಂ ಭೂಮಿ', 'ನೃತ್ಯ ಸರಿತಾ', 'ವಿಜಯ್ ಜೋಶ್', 'ಕೇಸರಿಯಾ ಬನ್ನಾ', 'ವೀರ್ ಸಿಯಾಚಿನ್', 'ಹತ್ರೋಯ್' ಸೇರಿವೆ. ' ', 'ವಿಜಯ್ ಘೋಷ್', 'ಲಡಾಕೂ', 'ಸ್ವದೇಶಿ', 'ಅಮರ್ ಚಟ್ಟನ್', 'ಗೋಲ್ಡನ್ ಆರೋಸ್' ಮತ್ತು 'ಸ್ವರ್ಣ ಜಯಂತಿ', ಬ್ರೋಷರ್ ಪ್ರಕಾರ, 'ವೀರ್ ಸೈನಿಕ್', 'ಫ್ಯಾನ್‌ಫೇರ್ ಬೈ ಬಗ್ಲರ್ಸ್, 'ಐಎನ್‌ಎಸ್ ಇಂಡಿಯಾ', 'ಯಶಸ್ವೀ', 'ಜೈ ಭಾರತಿ', 'ಕೇರಳ', 'ಸಿಕಿ ಎ ಮೋಲ್', 'ಹಿಂದ್ ಕಿ ಸೇನಾ', 'ಕದಮ್ ಕದಮ್ ಬಧಯೇ ಜಾ', 'ಡ್ರಮ್ಮರ್ಸ್ ಕಾಲ್' '', 'ಏ ಮೇರೆ ವತನ್ ಕೆ ಲೋಗೋನ್' ಕೂಡ ಜನವರಿ 29 ರ ಸಂಜೆ ನುಡಿಸಲಾಗುವ 26 ರಾಗಗಳ ಭಾಗವಾಗಿದೆ ಎಂದು ಬ್ರೋಷರ್ ನಲ್ಲಿ ನೀಡಲಾಗಿದೆ.




