HEALTH TIPS

ಯಕ್ಷಗಾನ ಕಲಾವಿದ,ಮ್ಯಾನೇಜರ್ ವೇಣೂರು ವಾಮನ್ ಕುಮಾರ್ ರಸ್ತೆ ಅಪಘಾತದಲ್ಲಿ ಮೃತ್ಯು

    ಮಂಗಳೂರು: ಕೋವಿಡ್ ಕಾಲದಲ್ಲಿ ಈಗಾಗಲೇ ಸಂಕಷ್ಟಕ್ಕೆ ತುತ್ತಾಗಿರುವ ಯಕ್ಷಗಾನ ರಂಗಕ್ಕೆ ಮತ್ತೊಂದು ಆಘಾತ. ಗುರುವಾರ ಮುಂಜಾನೆ ವೇಣೂರು ಸಮೀಪ ನಡೆದ ಅಪಘಾತವೊಂದರಲ್ಲಿ ಹಿರಿಯಡ್ಕ ಮೇಳದ ಮ್ಯಾನೇಜರ್ ಕೂಡ ಆಗಿರುವ ಯಕ್ಷಗಾನ ಕಲಾವಿದ ವೇಣೂರು ವಾಮನ ಕುಮಾರ್ ಅವರು ಅಸು ನೀಗಿದ್ದಾರೆ.

     ಬುಧವಾರದ ಆಟ ಮುಗಿಸಿ ಬೈಕಿನಲ್ಲಿ ಬರುತ್ತಿದ್ದ ಅವರಿಗೆ ಮಾರುತಿ ಓಮ್ನಿಯೊಂದು ಡಿಕ್ಕಿಯಾಗಿ ಈ ದುರಂತ ಸಂಭವಿಸಿದೆ ಎಂದು ತಿಳಿದುಬಂದಿದೆ. ಅವರಿಗೆ ಇಬ್ಬರು ಮಕ್ಕಳಿದ್ದು, ಇತ್ತೀಚೆಗಷ್ಟೇ ಅವರು ತಮ್ಮ ಅಕ್ಕನನ್ನು ಕಳೆದುಕೊಂಡಿದ್ದರು.

    ಗುರುವಾರ ನಸುಕಿನ ಜಾವದಲ್ಲಿ ಮೂಡುಬಿದಿರೆಯ ಗಂಟಾಲಕಟ್ಟೆ ಸಮೀಪ ಈ ದುರಂತ ಸಂಭವಿಸಿದೆ. ಸುಮಾರು 30 ವರ್ಷಗಳಿಂದ ಯಕ್ಷಗಾನ ರಂಗದಲ್ಲಿ ಕಲಾವಿದರಾಗಿದ್ದು, ಇತ್ತೀಚೆಗೆ ಹಿರಿಯಡ್ಕ ಮೇಳದ ವ್ಯವಸ್ಥಾಪಕರಾಗಿ ಮೇಳವನ್ನು ಮುನ್ನಡೆಸುತ್ತಿದ್ದರು.

   ಇವರು ಪತ್ನಿ, ಇಬ್ಬರು ಪುಟ್ಟ ಮಕ್ಕಳು ಹಾಗೂ ಅಪಾರ ಯಕ್ಷಗಾನ ಅಭಿಮಾನಿಗಳನ್ನು ಅಗಲಿದ್ದಾರೆ.
ಗಂಟಾಲ್ಕಟ್ಟೆ ಬಳಿ ನಡೆದ ಅಪಘಾತದ ದೃಶ್ಯ

     ಪುಂಡು ವೇಷ -ಸ್ತ್ರೀವೇಷಗಳ ಅಭಿನಯ ಚತುರ
    ವೇಣೂರು ಪರಿಸರದಲ್ಲಿ ಅತ್ಯಂತ ಜನಪ್ರಿಯರಾಗಿರುವ ಸಹೃದಯಿ, ನಿಗರ್ವಿ ಕಲಾವಿದರಾಗಿದ್ದ ಅವರು, ಪುಂಡು ವೇಷ ಮತ್ತು ಸ್ತ್ರೀ ವೇಷಗಳೆರಡರಲ್ಲೂ ಎತ್ತಿದ ಕೈ. ಚುರುಕಾದ ನಾಟ್ಯ, ಆಪ್ತ ಮಾತುಗಾರಿಕೆಯಿಂದ ಮತ್ತು ದುಂಡು ಮುಖದೊಂದಿಗೆ ಯಕ್ಷಗಾನಕ್ಕೊಪ್ಪುವ ರೂಪದಿಂದ ಜನಾನುರಾಗಿ ಕಲಾವಿದರಾಗಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries