HEALTH TIPS

ರಾಜ್ಯದಲ್ಲಿ ಇಂದು 5691 ಮಂದಿಗೆ ಕೋವಿಡ್ ಪತ್ತೆ


        ತಿರುವನಂತಪುರ: ರಾಜ್ಯದಲ್ಲಿ ಇಂದು 5691 ಮಂದಿ ಜನರಿಗೆ ಕೋವಿಡ್ ದೃಢಪಟ್ಟಿದೆ. ಎರ್ನಾಕುಳಂ 1041, ಕೊಟ್ಟಾಯಂ 655, ತಿರುವನಂತಪುರ 615, ಕೊಲ್ಲಂ 496, ತ್ರಿಶೂರ್ 479, ಕೋಝಿಕ್ಕೋಡ್ 448, ಅಲಪ್ಪುಳ 338, ಇಡುಕ್ಕಿ 301, ಪತ್ತನಂತಿಟ್ಟ 923,  ಮಲಪ್ಪುರಂ 264, ಪಾಲಕ್ಕಾಡ್ 247,ವಯನಾಡ್ 222, ಕಣ್ಣೂರು 206, ಕಾಸರಗೋಡು 86 ಎಂಬಂತೆ ಕೋವಿಡ್ ದೃಢಪಡಿಸಲಾಗಿದೆ. 
        ಕಳೆದ 24 ಗಂಟೆಗಳಲ್ಲಿ 56,851 ಮಾದರಿಗಳನ್ನು ಪರೀಕ್ಷಿಸಲಾಗಿದೆ.
         ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 1,45,465 ಮಂದಿ ಜನರು ನಿಗಾದಲ್ಲಿದ್ದಾರೆ.  ಇವರಲ್ಲಿ 1,42,228 ಮಂದಿ ಮನೆ/ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ ಮತ್ತು 3237 ಮಂದಿ ಆಸ್ಪತ್ರೆಗಳಲ್ಲಿದ್ದಾರೆ.  ಒಟ್ಟು 491 ಮಂದಿ ಹೊಸದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
 ಪ್ರಸ್ತುತ 53,597 ಕೊರೋನಾ ಪ್ರಕರಣಗಳಲ್ಲಿ, 6.4 ಪ್ರತಿಶತದಷ್ಟು ಜನರು ಆಸ್ಪತ್ರೆ / ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ.
        ಕಳೆದ 24 ಗಂಟೆಗಳಲ್ಲಿ 10 ಮಂದಿ ಕೊರೊನಾ ಬಾಧಿಸಿ ಮೃತರಾಗಿದ್ದಾರೆ.  ಅಲ್ಲದೆ, ಹಿಂದಿನ ದಿನಗಳಲ್ಲಿ ದಾಖಲೆಗಳನ್ನು ತಡವಾಗಿ ಸ್ವೀಕರಿಸಿದ ಕಾರಣ 81 ಸಾವುಗಳು ಮತ್ತು ಸುಪ್ರೀಂ ಕೋರ್ಟ್‌ನ ಹೊಸ ಮಾರ್ಗಸೂಚಿಗಳ ಅಡಿಯಲ್ಲಿ ಕೇಂದ್ರ ಸರ್ಕಾರವು ಮೇಲ್ಮನವಿ ಸಲ್ಲಿಸಿದ್ದರಿಂದ 39 ಸಾವುಗಳು ವರದಿಯಾಗಿವೆ.  ಈ ಮೂಲಕ ರಾಜ್ಯದಲ್ಲಿ ಒಟ್ಟು ಸಾವಿನ ಸಂಖ್ಯೆ 64,403ಕ್ಕೆ ಏರಿಕೆಯಾಗಿದೆ.
        ಇಂದು ಸೋಂಕು ಪತ್ತೆಯಾದವರಲ್ಲಿ 19 ಮಂದಿ ಹೊರ ರಾಜ್ಯದವರು.  5211 ಮಂದಿ ಜನರು ಸಂಪರ್ಕದಿಂದ ಸೋಂಕಿಗೆ ಒಳಗಾಗಿದ್ದಾರೆ.  417 ಮಂದಿಯ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ.  ಇಂದು  44 ಮಂದಿ ಆರೋಗ್ಯ ಕಾರ್ಯಕರ್ತರಿಗೆ ಕೋವಿಡ್ ದೃಢಪಟ್ಟಿದೆ.
         ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ ಒಟ್ಟು 10,896 ಮಂದಿ ಜನರು ಗುಣಮುಖರಾಗಿದ್ದಾರೆ.  ತಿರುವನಂತಪುರ 2578, ಕೊಲ್ಲಂ 501, ಪತ್ತನಂತಿಟ್ಟ 387, ಆಲಪ್ಪುಳ 545, ಕೊಟ್ಟಾಯಂ 710, ಇಡುಕ್ಕಿ 619, ಎರ್ನಾಕುಳಂ 2048, ತ್ರಿಶೂರ್ 595, ಪಾಲಕ್ಕಾಡ್ 376, ಮಲಪ್ಪುರಂ 636, ಕೋಝಿಕ್ಕೋಡ್ 996, ವಯನಾಡ್ 204, lಕಣ್ಣೂರು 514, ಕಾಸರಗೋಡು 187 ಎಂಬಂತೆ ಗುಣಮುಖರಾಗಿದ್ದಾರೆ.
      ಇದರೊಂದಿಗೆ 53,597 ಮಂದಿ ಜನರಿಗೆ ಸೋಂಕು ಪತ್ತೆಯಾಗಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ.  ಇದುವರೆಗೆ 63,59,953 ಮಂದಿ ಜನರು ಕೊರೋನಾದಿಂದ ಮುಕ್ತರಾಗಿದ್ದಾರೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries