ಕಾಸರಗೋಡು: ರಾಜ್ಯ ಸರ್ಕಾರ ಜಿಲ್ಲೆಯಲ್ಲಿ ಜಾರಿಗೊಳಿಸಿರುವ ಅಭಿವೃದ್ಧಿ ಮತ್ತು ಕಲ್ಯಾಣ ಚಟುವಟಿಕೆಗಳ ಕಿರು ವಿಡಿಯೊ ಪ್ರದರ್ಶನದ ಪರ್ಯಟನೆ ಮುಕ್ತಾಯವಾಯಿತು. ಜಿಲ್ಲಾ ಮಾಹಿತಿ ಕಚೇರಿಯ ಆಶ್ರಯದಲ್ಲಿ ವಸ್ತುಪ್ರದರ್ಶನ ಏರ್ಪಡಿಸಲಾಗಿತ್ತು. ಕಳೆದ ಐದು ದಿನಗಳಲ್ಲಿ ನಡೆದ ಪರ್ಯಟನೆ ಕಾಸರಗೋಡು ಮತ್ತು ಮಂಜೇಶ್ವರ ತಾಲೂಕಿನ ವಿವಿಧ ಭಾಗಗಳ ಜನರ ಹೃದಯವನ್ನು ಮುಟ್ಟಿದೆ. ಪ್ರವಾಸದಲ್ಲಿ ಜಿಲ್ಲೆಯ ಮೂಲಸೌಕರ್ಯ ಅಭಿವೃದ್ಧಿ, ಸುಭಿಕ್ಷ ಕೇರಳ, ಸಾರ್ವಜನಿಕ ಶಿಕ್ಷಣ ರಕ್ಷಣಾ ಅಭಿಯಾನ, ಆರೋಗ್ಯ ವಲಯದಲ್ಲಿ ಆಸ್ಪತ್ರೆ ನವೀಕರಣ, ಲೈಫ್ ಮಿಷನ್, ಹಸಿರು ಕೇರಳ ಮತ್ತು ಕೋವಿಡ್ ಯುಗದಲ್ಲಿ ಆರೋಗ್ಯ ರಕ್ಷಣೆ ಕುರಿತು ಕಿರು ವೀಡಿಯೊಗಳನ್ನು ಒಳಗೊಂಡಿತ್ತು.
ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಫೆ.21ರಂದು ಸಂಚಾರಿ ವಿಡಿಯೊ ವಾಹನಕ್ಕೆ ಚಾಲನೆ ನೀಡಿದ್ದರು. ಸಂಚಾರಿ ವಾಹನವು ಐದು ದಿನಗಳಲ್ಲಿ ಐವತ್ತು ಪ್ರದೇಶಗಳಲ್ಲಿ ಪ್ರವಾಸವನ್ನು ಪೂರ್ಣಗೊಳಿಸಿತು. ಕೊನೆಯ ದಿನವಾದ ಶುಕ್ರವಾರ ಆರಿಕ್ಕಾಡಿ, ಕಟ್ಟತ್ತಡ್ಕ, ಅಂಗಡಿಮೊಗರು, ಪೆರ್ಮುದೆ, ಧರ್ಮತ್ತಡ್ಕ, ಕಮಿಯಾಲ ಜಂಕ್ಷನ್, ಬಾಯಾರ್ ಪದವು, ಚಿಪ್ಪಾರ್ ಪದವು, ಪೈವಳಿಕೆ, ಜೋಡುಕಲ್ಲು, ಸೋಂಕಾಲು, ಕೈಕಂಬ, ಬಾಯಿಕಟ್ಟೆ ಮೊದಲಾದೆಡೆ ಪರ್ಯಟನೆ ಸಾಗಿದೆ.




