HEALTH TIPS

ಡಿಎಂಕೆ ಸಂಸದೆ ಕನಿಮೋಳಿಗೆ ಅಮಿತ್‌ ಶಾ ಕರೆ: ತಮಿಳುನಾಡು ರಾಜಕಾರಣದಲ್ಲಿ ಸಂಚಲನ

          ಕೇಂದ್ರ ಸರ್ಕಾರ ಹಾಗೂ ತಮಿಳುನಾಡಿನ ಡಿಎಂಕೆ ಸರ್ಕಾರದ ನಡುವೆ ಉದ್ವಿಗ್ನತೆ ಹೆಚ್ಚುತ್ತಿರುವ ನಡುವೆ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಕನಿಮೋಳಿ ಅವರಿಗೆ ದೂರವಾಣಿ ಕರೆ ಮಾಡಿರುವುದು ಈಗ ಪಕ್ಷದೊಳಗೆ ತೀವ್ರ ಚರ್ಚೆಯ ವಿಷಯವಾಗಿದೆ ಎಂದು ಮೂಲಗಳು ತಿಳಿಸಿವೆ.

           NEET ಪರೀಕ್ಷೆಯಿಂದ ರಾಜ್ಯಕ್ಕೆ ವಿನಾಯಿತಿ ನೀಡುವ ಮಸೂದೆಯನ್ನು ಚರ್ಚಿಸಲು ಡಿಎಂಕೆ ಮುಖಂಡರು ಗೃಹ ಸಚಿವರ ಅಪಾಯಿಂಟ್‌ಮೆಂಟ್‌ಗಾಗಿ ಕಾಯುತ್ತಿರುವರ ನಡುವೆಯೇ, ಜನವರಿ 5 ರಂದು ಕನಿಮೋಳಿ ಅವರ 54 ನೇ ಹುಟ್ಟುಹಬ್ಬಕ್ಕೆ ಅಮಿತ್‌ ಶಾ ಕರೆ ಮಾಡಿ ಶುಭಾಶಯ ಕೋರಿದ್ದಾರೆ ಎಂದು indian express ವರದಿ ಮಾಡಿದೆ.

             ಅಮಿತ್‌ ಶಾ ತನಗೆ ಕರೆ ಮಾಡಿರುವುದಾಗಿ ಸಂಸದೆ ಕನಿಮೋಳಿ ದಿ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ಖಚಿತಪಡಿಸಿದ್ದಾರೆ. ಆದರೆ, ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರಿಗೆ ತನ್ನ ಮಲಸಹೋದರಿ ಕನಿಮೋಳಿ ಅವರಿಗೆ ಅಮಿತ್‌ ಶಾ ಅವರಿಂದ ಕರೆ ಬಂದಿರುವುದು ಸಮಾಧಾನಕರವಾಗಿಲ್ಲ ಎಂದು ತಮಿಳುನಾಡು ರಾಜಕೀಯ ಬೆಳವಣಿಗೆಗಳ ಬಗ್ಗೆ ಬಲ್ಲ ಮೂಲಗಳು ತಿಳಿಸಿವೆ ಎಂದು ವರದಿಯಾಗಿದೆ.

             ಡಿಎಂಕೆಯ ಕೆಲವು ಹಿರಿಯ ಮುಖಂಡರು ಇದನ್ನು ಕೇವಲ ಸೌಜನ್ಯದ ಭೇಟಿ ಎಂಬುದಕ್ಕಿಂತ ರಾಜಕೀಯ ಬೆಳವಣಿಗೆಯಾಗಿ ಗಮನಿಸುತ್ತಿದ್ದಾರೆ. ಅಮಿತ್‌ ಶಾ ಕರೆ ಮಾಡಿದ ಒಂದು ದಿನದ ನಂತರ, ಜನವರಿ 6 ರಂದು, ಸ್ಟಾಲಿನ್ ರಾಜ್ಯ ವಿಧಾನಸಭೆಯಲ್ಲಿ 'ಜನಪ್ರತಿನಿಧಿಗಳನ್ನು ಭೇಟಿ ಮಾಡಲು ನಿರಾಕರಿಸುವುದು ಪ್ರಜಾಪ್ರಭುತ್ವ ವಿರೋಧಿ' ಎಂದು ಹೇಳಿದ್ದಾರೆ.

            ಡಿಎಂಕೆ ಸಂಸದ ಟಿ ಆರ್ ಬಾಲು ನೇತೃತ್ವದ ನಿಯೋಗವು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ನೀಟ್‌ನಿಂದಾಗಿ ವಿದ್ಯಾರ್ಥಿಗಳಿಗೆ ಉಂಟಾದ ಸಮಸ್ಯೆಗಳನ್ನು ವಿವರಿಸಿ ಜ್ಞಾಪಕ ಪತ್ರವನ್ನು ಸಲ್ಲಿಸಿತ್ತು. ರಾಷ್ಟ್ರಪತಿಗಳ ಕಚೇರಿ ಇದನ್ನು ಗೃಹಸಚಿವ ಅಮಿತ್‌ ಶಾ ಅವರಿಗೆ ರವಾನಿಸಿತ್ತು. ಡಿಎಂಕೆ ಸಂಸದ ಎ ರಾಜಾ, ಬಾಲು ಅವರು ಸಭೆಗಳನ್ನು ಆಯೋಜಿಸಿದ್ದರು, ಆದರೆ ಇವರ ಭೇಟಿಗೆ ಸಿಕ್ಕದೆ ಅಮಿತ್‌ ಶಾ ಕನಿಮೊಳಿಗೆ ಕರೆ ಮಾಡಿದ್ದರು ಎನ್ನಲಾಗಿದೆ. ಗೃಹ ಸಚಿವರೊಂದಿಗಿನ ಡಿಎಂಕೆ ಮುಖಂಡರ ಭೇಟಿಯು ಅಂತಿಮವಾಗಿ ಜನವರಿ 17 ರಂದು ನಡೆಯಿತು ಎಂದು ಇಂಡಿಯನ್‌ ಎಕ್ಸ್‌ಪ್ರೆಸ್‌ ವರದಿ ಮಾಡಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries