HEALTH TIPS

ಭೂಕುಸಿತ: ಜಮ್ಮು-ಶ್ರೀನಗರ ಹೆದ್ದಾರಿ ಬಂದ್‌

             ಶ್ರೀನಗರ: ಕಾಶ್ಮೀರದ ವಿವಿಧೆಡೆ ಶನಿವಾರ ಅತಿಯಾದ ಹಿಮ ಹಾಗೂ ಮಳೆಯಿಂದ ಉಂಟಾದ ಭೂಕುಸಿತದಿಂದ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಬಂದ್‌ ಆಗಿದ್ದು, ಕಾಶ್ಮೀರ ಕಣಿವೆಯು ದೇಶದ ಸಂಪರ್ಕವನ್ನು ಕಡಿದುಕೊಂಡಿದೆ.

         ಹಿಮಪಾತ ಹಾಗೂ ಭೂಕುಸಿತದಿಂದ ಹೆದ್ದಾರಿಯಲ್ಲಿ ಬೃಹತ್‌ ಗಾತ್ರದ ಕಲ್ಲುಗಳು ಬಿದ್ದಿರುವ ಪರಿಣಾಮ 270 ಕಿ.ಮೀ ಉದ್ದದ ಹೆದ್ದಾರಿಯಲ್ಲಿ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ.

            'ಕ್ವಾಜಿಗುಂಡ ವಲಯದಲ್ಲಿ ಮಳೆ ಹಾಗೂ ಹಿಮದಿಂದಾಗಿ ಬನಿಹಾಲ್, ರಾಂಬನ್‌, ಮೆಹರ್, ಕೆಫೆಟೇರಿಯಾ ಮೋರ್ಹ್, ಪಂಥಾಲ್‌ ಬಳಿ ರಾಷ್ಟ್ರೀಯ ಹೆದ್ದಾರಿಯುದ್ದಕ್ಕೂ ಬೃಹತ್‌ ಗಾತ್ರದ ಕಲ್ಲುಗಳು ಬಿದ್ದಿದ್ದು, ಸಂಚಾರಕ್ಕೆ ಅಡಚಣೆಯಾಗಿದೆ' ಎಂದು ಸಂಚಾರ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

'ಹೆದ್ದಾರಿಯಲ್ಲಿ ಬಿದ್ದಿರುವ ಬೃಹತ್‌ ಗಾತ್ರದ ಕಲ್ಲುಗಳು, ಮಣ್ಣು ಹಾಗೂ ಹಿಮವನ್ನು ಯಂತ್ರೋಪಕರಣ ಬಳಸಿ ತೆರವುಗೊಳಿಸಲಾಗುತ್ತಿದೆ' ಎಂದು ಅವರು ಹೇಳಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries