HEALTH TIPS

ಅಪರೂಪದ ಮೀನು ಹಿಡಿದು ವಾಟ್ಸ್​ಆಯಪ್​ ಗ್ರೂಪ್​ನಲ್ಲಿ ಫೋಟೋ ಶೇರ್​: ಪ್ರತಿಕ್ರಿಯೆ ನೋಡಿ ಬೆರಗಾದ ಮೀನುಗಾರರು!

            ಕೊಲ್ಲಂ: ಕೇರಳದ ಕೊಲ್ಲಂನ ಮೀನುಗಾರರ ಗುಂಪೊಂದು 'ಪದಥಿಕೋರ' ಹೆಸರಿನ ವಿರಾಳತಿ ವಿರಳ ಮೀನೊಂದನ್ನು ಬಲೆ ಬೀಳಿಸಿದ್ದಾರೆ. 'ಪೊನ್ನುಥಾಂಬುರನ್​' ಹೆಸರಿನ ಮೀನುಗಾರರ ದೋಣಿಗೆ ಈ ಅಪರೂಪದ ಮೀನು ಸಿಕ್ಕಿದೆ. ಈ ದೋಣಿಯ ಮಾಲೀಕರಾಗಿರುವ ಅರಟ್ಟುಪುಳ ನಿವಾಸಿ ವಿನೋದ್ ಅವರು ದುಬಾರಿ ಮೀನು ಸಿಕ್ಕಿರುವುದನ್ನು ಕಂಡು ತುಂಬಾ ಖುಷಿಯಾಗಿದ್ದಾರೆ.

         ಮಾರುಕಟ್ಟೆಯಲ್ಲಿ ಪದಥಿಕೋರ ಮೀನಿಗೆ ಭಾರೀ ಬೇಡಿಕೆ ಇದ್ದು, ಇದರ ಬೆಲೆಯು ಕೂಡ ದುಬಾರಿಯಾಗಿದೆ. ಮೀನುಗಾರರು ಕಾಯಂಕುಲಂ ಬಂದರು ಕಡೆ ಹೋಗುತ್ತಿರುವಾಗ ಈ ಮೀನು ಸಮುದ್ರದ ಮೇಲ್ಮೈ ಭಾಗದಲ್ಲಿ ಮಲಗಿರುವುದನ್ನು ನೋಡಿದ್ದಾರೆ. ತಕ್ಷಣ ಕೆಳಕ್ಕೆ ಜಿಗಿದು ಸಾಕಷ್ಟು ಶ್ರಮ ಪಟ್ಟು ಈ ಮೀನನ್ನು ಹಿಡಿದುಕೊಂಡು ದೋಣಿಯ ಒಳಗೆ ಹಾಕಿಕೊಂಡಿದ್ದಾರೆ.

            ಅಪರೂಪದ ಮೀನು ಸುಮಾರು 20 ಕೆ.ಜಿ ತೂಕವಿದೆ. ಆಸಕ್ತಿದಾಯಕ ವಿಚಾರವೆಂದರೆ ಮೀನುಗಾರರಿಗೂ ಸಹ ಈ ಮೀನಿನ ವಿಶೇಷತೆ ತಿಳಿದಿರಲಿಲ್ಲ. ಈ ಮೀನಿನ ಫೋಟೋವನ್ನು ವಾಟ್ಸ್​ಆಯಪ್​ ಗ್ರೂಪ್​ನಲ್ಲಿ ಪೋಸ್ಟ್​ ಮಾಡಿದ್ದರು. ಆ ಬಳಿಕವಷ್ಟೇ ತಾವು ಹಿಡಿದಿರುವುದು ಸಾಮಾನ್ಯವಾದ ಮೀನಲ್ಲ, ಅದು ದುಬಾರಿ ಬೆಲೆಯ ಮೀನು ಎಂಬುದು. ಇದನ್ನು ಪದಥಿಕೋರ ಅಥವಾ ಮೆಡಿಸಿನಲ್​ ಕೊರಾ ಎಂದು ಕರೆಯುತ್ತಾರೆ. ಶುಕ್ರವಾರ ಬೆಳಗ್ಗೆ ಆ ಮೀನನ್ನು ಮಾರುಕಟ್ಟೆಗೆ ತೆಗೆದುಕೊಂಡು ಹೋಗಿ ಬರೋಬ್ಬರಿ 59 ಸಾವಿರ ರೂಪಾಯಿಗೆ ಮಾರಾಟ ಮಾಡಿದ್ದಾರೆ. ಹರಾಜಿನಲ್ಲಿ ಪುಥಂಥುರಾ ನಿವಾಸಿ ಕೆ ಜಾಯ್​ ಎಂಬುವರು ಈ ಮೀನನ್ನು ಖರೀದಿಸಿದ್ದಾರೆ.

             ಈ ವಿಶೇಷ ಮೀನಿನ ಬಗ್ಗೆ ಅಖಿಲ ಕೇರಳ ಮೀನುಗಾರಿಕ ದೋಣಿ ಕಾರ್ಯಾಚರಣೆ ಸಂಘದ ಅಧ್ಯಕ್ಷ ಪೀಟರ್​ ಮ್ಯಾಥೀವ್ಸ್​ ಮಾತನಾಡಿ, ಇದು ವಿಶೇಷ ಔಷಧೀಯ ಅಂಶಗಳನ್ನು ಹೊಂದಿರುವುದರಿಂದ ಭಾರೀ ಬೇಡಿಕೆ ಇದೆ. ಅಲ್ಲದೆ, ಇದರ ಮಾಂಸವು ಕೂಡ ತುಂಬಾ ಸ್ವಾಧಿಷ್ಟವಾಗಿರುತ್ತದೆ. ಮೀನಿನ ದೇಹದಿಂದ ಪಡೆದ ಸ್ಪಾಂಜ್ ರೀತಿಯ ವಸ್ತುವನ್ನು ಶಸ್ತ್ರಚಿಕಿತ್ಸೆಯಲ್ಲಿ ಬಳಸುವ ಎಳೆಗಳನ್ನು ತಯಾರಿಸಲು ಬಳಸಲಾಗುತ್ತದೆ. ಸಾಮಾನ್ಯವಾಗಿ ಏಜೆಂಟರು ಸ್ಪಾಂಜ್​ ರೀತಿಯ ವಸ್ತುವನ್ನು ಹರಾಜಿನ ಮೂಲಕ ಸಂಗ್ರಹಿಸಿ ಗ್ರಾಹಕರಿಗೆ ಪೂರೈಸುತ್ತಾರೆ. 10 ಕೆಜಿಗಿಂತ ಹೆಚ್ಚು ತೂಕವಿರುವ 'ಪದಥಿಕೋರ'ದಲ್ಲಿ ಅತ್ಯುತ್ತಮ ರೀತಿಯ ಹರಳು ಕಂಡುಬರುತ್ತದೆ. ಈ ಮೀನುಗಳು ಸಾಮಾನ್ಯವಾಗಿ ಕರಾವಳಿ ಪ್ರದೇಶಗಳಲ್ಲಿ ಕಂಡುಬರುತ್ತವೆ ಮತ್ತು ಬಹಳ ವಿರಳವಾಗಿ ಬಲೆ ಬೀಳುತ್ತವೆ ಎಂದುಪೀಟರ್ ಹೇಳಿದರು. 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries