HEALTH TIPS

ಚತ್ತೀಸ್ ಗಢ: ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದ ಎಸ್ ಟಿಎಫ್ ಯೋಧನ ಹತ್ಯೆ ಮಾಡಿದ ನಕ್ಸಲರು

          ಬಿಜಾಪುರ್: ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದ 26 ವರ್ಷದ ವಿಶೇಷ ಕಾರ್ಯಪಡೆ (ಎಸ್ ಟಿಎಫ್) ಯೋಧನನ್ನು ನಕ್ಸಲರು ಚತ್ತೀಸ್ ಗಢದಲ್ಲಿ ಹತ್ಯೆ ಮಾಡಿದ್ದಾರೆ. 

          ಮೃತ ಯೋಧ ಚಿಕಿತ್ಸೆಗಾಗಿ ಒಂದು ತಿಂಗಳ ದೀರ್ಘಾವಧಿ ರಜೆಯಲ್ಲಿದ್ದರು. ಘಟನೆ ರೆಡ್ಡಿ ರಸ್ತೆ ಪ್ರದೇಶದಲ್ಲಿ ನಡೆದಿದ್ದು, ಹತ್ಯೆಗೂ ಮುನ್ನ ಯೋಧನನ್ನು ತೀವ್ರವಾಗಿ ಥಳಿಸಲಾಗಿದೆ ಎಂದು ಪ್ರಾಥಮಿಕ ವರದಿಗಳ ಮೂಲಕ ತಿಳಿದುಬಂದಿದೆ. 

           ಅರ್ಜುನ್ ಕುದಿಯಮ್ ಮೃತ ಎಸ್ ಟಿಎಫ್ ಯೋಧನಾಗಿದ್ದು, ಗಂಗಲೂರ್ ಪೊಲೀಸ್ ಠಾಣೆಯ ವ್ಯಾಪ್ತಿಯ ಧನೋರಾ ಗ್ರಾಮದ ನಿವಾಸಿಯಾಗಿದ್ದಾರೆ. ಅಲ್ಟ್ರಾಗಳು ಯೋಧನನ್ನು ಹತ್ಯೆ ಮಾಡಿ, ಆತನ ಮೃತ ಶರೀರವನ್ನು ರೆಡ್ಡಿ ರಸ್ತೆಯಲ್ಲಿ ಎಸೆದು ಹೋಗಿದ್ದಾರೆ. ಅಷ್ಟೇ ಅಲ್ಲದೇ, ಸ್ಥಳದಲ್ಲಿ ಗಂಗಲೂರ್ ನ ಮಾವೋವಾದಿ ಸಂಘಟನೆಯ ಸದಸ್ಯರು ಕರಪತ್ರಗಳನ್ನು ಎಸೆದಿದ್ದು, ಘಟನೆಗೆ ಹೊಣೆ ಹೊತ್ತಿದ್ದಾರೆ.

         ಯೋಧ ತಾನಾಗಿಯೇ ಘಟನೆ ನಡೆದ ಆ ಪ್ರದೇಶಕ್ಕೆ ತೆರಳಿದ್ದರೋ ಅಥವಾ ನಕ್ಸಲರಿಂದ ಅಪರಹಣಗೊಂಡಿದ್ದರೋ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries