HEALTH TIPS

ರಂಗ ಕಹಳೆ ಕಾರ್ಯಕ್ರಮ ಸರಣಿಯ ಉದ್ಘಾಟನೆ ಇಂದು

             ಬದಿಯಡ್ಕ: ದಶಕದ ಹಿಂದೆ ಗಡಿನಾಡು ಕಾಸರಗೋಡಿನಲ್ಲಿ ಹುಟ್ಟಿಕೊಂಡು ಸಾಹಿತ್ಯ, ಸಾಂಸ್ಕøತಿಕ ವಲಯದಲ್ಲಿ ಗುರುತಿಸಲ್ಪಟ್ಟ ಬದಿಯಡ್ಕದ ರಂಗಸಿರಿ ಸಾಂಸ್ಕೃತಿಕ ವೇದಿಕೆಯು ರಂಗ ಕಹಳೆ  (ಸಾಧನೆಯ ಬೆನ್ನೇರಿ ರಂಗಸಿರಿ ಪಯಣ..) ಎಂಬ ಕಾರ್ಯಕ್ರಮ ಸರಣಿಗೆ ಸಜ್ಜಾಗಿದೆ. ಅಭಿಯಾನದ ಉದ್ಘಾಟನೆ ಹಾಗೂ ಸಾಧಕ ಸಮ್ಮಾನವು ಇಂದು ಅಪರಾಹ್ನ 3 ಕ್ಕೆ  ಸಾರಡ್ಕದ ಆರಾಧನಾ ಕಲಾಭವನದಲ್ಲಿ ನಡೆಯಲಿದೆ. ಈ ಸಂದರ್ಭದಲ್ಲಿ ಸಾಧಕ, ಸುರಂಗ ಭಗೀರಥ ಪದ್ಮಶ್ರೀ ಮಹಾಲಿಂಗ ನಾಯ್ಕ್ ಅಮೈ ಅವರನ್ನು ಸನ್ಮಾನಿಸಲಾಗುವುದು. 

              ರಂಗಸಿರಿಯ ಅಧ್ಯಕ್ಷೆ ಪ್ರಭಾವತಿ ಕೆದಿಲಾಯ ಪುಂಡೂರು ಅಧ್ಯಕ್ಷತೆವಹಿಸುವರು. ಕಾರ್ಯಕ್ರಮಕ್ಕೆ ಕವಯಿತ್ರಿ  ಅನ್ನಪೂರ್ಣ ಬೆಜಪ್ಪೆ ಅತಿಥಿಯಾಗಿ ಶುಭಹಾರೈಸುವರು. ಬಳಿಕ ರಂಗಸಿಯ ಸಂಗೀತ ವಿಭಾಗದ ಶಿಕ್ಷಕಿಯರಾದ ಡಾ.ಸ್ನೇಹಾ ಪ್ರಕಾಶ್ ಪೆರ್ಮುಖ ಹಾಗೂ ಸಂಗೀತ ವಿದುಷಿ ಗೀತಾ ಸಾರಡ್ಕ ಅವರ ರಂಗಸಿರಿ ವಿದ್ಯಾರ್ಥಿಗಳಿಂದ ಗಾಯನ ಕಾರ್ಯಕ್ರಮವು ನಡೆಯಲಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries