HEALTH TIPS

ಮೊದಲ ರಾತ್ರಿ ಮುಗಿಸಿ ಬೆಳಗಿನ ಜಾವವೇ ಎಸ್ಕೇಪ್​ ಆದ ವರ: ನಂತ್ರ ವಧುವಿಗೆ ತಿಳಿದಿದ್ದು ಘೋರ ಸತ್ಯ!

          ಅಡೂರು: ಮದುವೆಯಾಗಿ ಮೊದಲ ರಾತ್ರಿಯ ಬಳಿಕ ವಧುವಿನ ಮನೆಯಲ್ಲಿದ್ದ ಚಿನ್ನಾಭರಣ ಮತ್ತು ಹಣವನ್ನು ಕದ್ದು ಪರಾರಿಯಾಗಿದ್ದ ವರನನ್ನು ಪೊಲೀಸರು ಬಂಧಿಸಿದ್ದಾರೆ.

            ಕೇರಳದ ಕಾಯಂಕುಲಂ ನಿವಾಸಿ ಅಜರುದ್ದೀನ್​ ರಶೀದ್​ (30) ಎಂಬಾತನನ್ನು ಕೇರಳದ ಅಡೂರು ಪೊಲೀಸರು ಬಂಧಿಸಿದ್ದು, 30 ಸವರನ್​ ಚಿನ್ನ ಮತ್ತು 2.75 ಲಕ್ಷ ರೂಪಾಯಿ ನಗದನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

          ಅಜರುದ್ದೀನ್​ ಪಹಕುಲಂ ಮೂಲದ ಮಹಿಳೆಯನ್ನು ಜನವರಿ 30ರಂದು ಎಸ್​.ಎಚ್​.

ಆಡಿಟೋರಿಯಂನಲ್ಲಿ ಮದುವೆಯಾಗಿದ್ದ. ಸಂಪ್ರದಾಯದಂತೆ ವಧುವಿನ ಮನೆಯುಲ್ಲಿ ಮೊದಲ ರಾತ್ರಿ ನಡೆದಿತ್ತು. ಬೆಳಗಿನ ಜಾವ 3 ಗಂಟೆ ಸುಮಾರಿಗೆ ಸ್ನೇಹಿತನಿಗೆ ಅಪಘಾತವಾಗಿದೆ ಎಂದು ಅಜರುದ್ದೀನ್​ ಮನೆ ಬಿಟ್ಟಿದ್ದಾನೆ.

           ಇದಾದ ಬಳಿಕ ಆತನಿಗೆ ಫೋನ್​ ಮಾಡಿದರೆ ಸ್ವಿಚ್​ ಆಫ್​ ಅಂತಾ ಕೇಳಿಬಂದಿದೆ. ಇದೇ ಸಂದರ್ಭದಲ್ಲಿ ವಧುವಿನ ಮನೆಯಲ್ಲಿ 30 ಸವರನ್​ ಚಿನ್ನ ಮತ್ತು 2.75 ಲಕ್ಷ ರೂ. ಹಣ ಕಾಣೆಯಾಗಿರುವುದು ತಿಳಿಯುತ್ತದೆ. ಇದರಿಂದ ಅನುಮಾನಗೊಂಡ ವಧುವಿನ ಮನೆಯವರು ತಕ್ಷಣ ದೂರು ಸಹ ದಾಖಲಿಸುತ್ತಾರೆ.

          ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಇಳಿಯುವ ಅಡೂರು ಪೊಲೀಸರಿಗೆ ಆರೋಪಿ ಅಜರುದ್ದೀನ್​ ಕುರಿತು ಸ್ಫೋಟಕ ಸಂಗತಿಯೊಂದು ತಿಳಿಯುತ್ತದೆ. ಎರಡು ವರ್ಷಗಳ ಹಿಂದೆ ಅಲಪ್ಪುಳದ ಚೆಪ್ಪಾಡ್​​ ಎಂಬಲ್ಲಿ ಯುವತಿಯೊಬ್ಬಳನ್ನುಮದುವೆಯಾಗಿದ್ದ ಎಂಬ ಸಂಗತಿ ಬಯಲಾಗುತ್ತದೆ. ಆತ ಮೊದಲ ಪತ್ನಿಯೊಂದಿಗೆ ಇದ್ದಾನೆ ಎಂಬ ಮಾಹಿತಿ ತಿಳಿದ ಪೊಲೀಸರು ತಕ್ಷಣ ಕಾರ್ಯಾಚರಣೆ ನಡೆಸಿ, ಆತನನ್ನು ಬಂಧಿಸಿದ್ದು, ಕೋರ್ಟ್​ ಮುಂದೆ ಹಾಜರುಪಡಿಸಿದ್ದಾರೆ. ಇತ್ತ ಘನ ಘೋರ ಸತ್ಯ ತಿಳಿದ ವಧು ಮದುವೆ ಆರಂಭದಲ್ಲೇ ಈ ರೀತಿ ಆಯ್ತಲ್ಲ ಅಂತಾ ಆಘಾತಕ್ಕೆ ಒಳಗಾಗಿದ್ದಾಳೆ. 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries