HEALTH TIPS

ಕ್ವಾಡ್​ ಟೀಕೆಗೆ ಚೀನಾಕ್ಕೆ ಭಾರತ ಎದಿರೇಟು: ಗಡಿ ಬಿಕ್ಕಟ್ಟಿಗೆ ನೆರೆ ದೇಶವೇ ಕಾರಣವೆಂದ ಜೈಶಂಕರ್

                  ನವದೆಹಲಿ/ಮೆಲ್ಬೋರ್ನ್​: ನಾಲ್ಕು ದೇಶಗಳ ಕ್ವಾಡ್​ ಕೂಟ ಚೀನಾವನ್ನು ಕಟ್ಟಿ ಹಾಕಿ ಅಮೆರಿಕದ ಅಧಿಪತ್ಯವನ್ನು ಉಳಿಸಿಕೊಳ್ಳುವ ಸಾಧನವಾಗಿದೆ ಎಂದು ಚೀನಾ ಮಾಡಿರುವ ಟೀಕೆಗೆ ಭಾರತ ಖಡಕ್​ ತಿರುಗೇಟು ನೀಡಿದೆ. ಕ್ವಾಡ್​ ಧೋರಣೆ ಹಾಗೂ ಕೃತ್ಯಗಳು ಸ್ಪಷ್ಟವಾಗಿವೆ.

             ಅದನ್ನು ಪದೇ ಪದೇ ಟೀಕಿಸುವುದರಿಂದ ಕೂಟದ ವಿಶ್ವಾಸಾರ್ಹತೆ ಕುಂದುವುದಿಲ್ಲ ಎಂದು ವಿದೇಶಾಂಗ ಸಚಿವ ಎಸ್​. ಜೈಶಂಕರ್​ ಶನಿವಾರ ಹೇಳಿದ್ದಾರೆ.

             ಭಾರತ ಮತ್ತು ಚೀನಾ ನಡುವಿನ ಬಿಗುವು ಇಡೀ ಅಂತಾರಾಷ್ಟ್ರೀಯ ಸಮುದಾಯಕ್ಕೆ ಕಳವಳದ ಸಂಗತಿಯಾಗಿದೆ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ. ವಾಸ್ತವ ಗಡಿ ರೇಖೆಯಲ್ಲಿ (ಎಲ್​ಎಸಿ) ಪಡೆಗಳನ್ನು ಜಮಾಯಿಸಬಾರದು ಎಂಬ ಭಾರತದೊಂದಿಗೆ 2020ರಲ್ಲಿ ಮಾಡಿಕೊಂಡ ಲಿಖಿತ ಒಪ್ಪಂದವನ್ನು ಚೀನಾ ಅಗೌರವಿಸಿದ್ದೇ ಈಗಿನ ಪರಿಸ್ಥಿತಿ ಉದ್ಭವಿಸಲು ಕಾರಣ ಎಂದು ಅವರು ಹೇಳಿದ್ದಾರೆ.

                   ಕ್ವಾಡ್​ ವಿದೇಶಾಂಗ ಸಚಿವರ ಸಭೆಯಲ್ಲಿ ಭಾರತ-ಚೀನಾ ಸಂಬಂಧಗಳ ಬಗ್ಗೆ ಚರ್ಚೆ ನಡೆದಿದೆ ಎಂದೂ ಜೈಶಂಕರ್​ ತಿಳಿಸಿದ್ದಾರೆ. ಉಭಯ ದೇಶಗಳ ನಡುವಿನ ವಿವಾದದ ಬಗ್ಗೆ ಜಾಗತಿಕ ಸಮುದಾಯ, ಅದರಲ್ಲೂ ವಿಶೇಷವಾಗಿ ಇಂಡೊ- ಪೆಸಿಫಿಕ್​ ವಲಯದ ದೇಶಗಳು ಕಾಳಜಿ ವಹಿಸಲು ಸಕಾರಣವಿದೆ ಎಂದು ಹೇಳಿದ್ದಾರೆ.

                  ಕ್ವಾಡ್​ನ ಧನಾತ್ಮಕ ಕೊಡುಗೆ ಬಗ್ಗೆ ಯಾರೂ ಅನುಮಾನ ವ್ಯಕ್ತಪಡಿಸಬೇಕಿಲ್ಲ ಎಂದ ಜೈಶಂಕರ್​, ಭಾರತ ಕ್ರಿಕೆಟ್​ ತಂಡದ ಮಾಜಿ ನಾಯಕ ವಿರಾಟ್​ ಕೊಹ್ಲಿ ಸಹಿ ಹಾಕಿದ್ದ ಬ್ಯಾಟ್​ಒಂದನ್ನು ಆಸ್ಟ್ರೆಲಿಯಾ ವಿದೇಶ ಸಚಿವೆ ಮಾರಿಸ್​ ಪೈನ್​ರಿಗೆ ಕೊಡುಗೆಯಾಗಿ ನೀಡಿದ್ದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries