HEALTH TIPS

ಮಾದಕ ಪಿಡುಗಿನ ವಿರುದ್ದ ಮೊಗ್ರಾಲ್ ದೇಶೀಯ ವೇದಿಯ ಜಾಗೃತಿ ಗ್ರಾಮ ಸಂಚಾರ ಯಶಸ್ವಿ

                ಕುಂಬಳೆ: ಅಪಾಯಕಾರಿ ಮಟ್ಟದಲ್ಲಿ ಬೆಳೆಯುತ್ತಿರುವ ಮಾದಕ ದ್ರವ್ಯ ವ್ಯಸನದ ಬಗ್ಗೆ ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮೊಗ್ರಾಲ್ ದೇಶೀಯ ವೇದಿ ಬುಧವಾರ ಹಮ್ಮಿಕೊಂಡ ಒಂದು ದಿನದ ಗ್ರಾಮ ಸಂಚಾರ ಜನಜಾಗೃತಿ ರ್ಯಾಲಿ ಗಮನಾರ್ಹವಾಯಿತು. 

                  ಪೇರಾಲು ಯುನೈಟೆಡ್ ಕ್ಲಬ್ ಪರಿಸರದಲ್ಲಿ ಬೆಳಿಗ್ಗೆ ಆರಂಭವಾದ ಪಾದಯಾತ್ರೆಯು ವಿವಿಧ ಗ್ರಾಮದ ಮೂಲಕ ಸಾಗಿ 16 ಪ್ರದೇಶಗಳನ್ನು ಕ್ರಮಿಸಿ 16 ಕೊಲೋಮೀಟರ್ ಪೂರೈಸಿ ಮೊಗ್ರಾಲ್ ಪೇಟೆಯಲ್ಲಿ ಸಂಜೆ ಸಮಾರೋಪಗೊಂಡಿತು. ಈ ಸಂದರ್ಭದಲ್ಲಿ ಚಾಲನೆ ನೀಡಿ ಮಾತನಾಡಿದ ನಾರ್ಕೋಟಿಕ್ಸ್ ಸೆಲ್ ಡಿವೈಎಸ್ಪಿ ಮ್ಯಾಥ್ಯೂ ಎಂ.ಎ, ಅವರು ಮೊಗ್ರಾಲ್ ದೇಶೀಯ ವೇದಿಯ ಮಾದಕ ದ್ರವ್ಯ ವಿರುದ್ಧ ಅಭಿಯಾನ ರಾಜ್ಯಕ್ಕೇ ಮಾದರಿಯಾಗಿದೆ. ಈ ಯತ್ನ ಇನ್ನಷ್ಟು ಬಲಗೊಂಡು ಜನರಿಗೆ ಜಾಗೃತಿ ಮೂಡಿಸುವಲ್ಲಿ ಸಫಲವಾಗಲಿ ಎಂದರು.


          ದೇಶೀಯ ವೇದಿ ಕೈಗೆತ್ತಿಕೊಳ್ಳುವ ಪ್ರತಿಯೊಂದು ವಿಚಾರವೂ ಜನರಿಗೆ ಹೊಸ ದಿಕ್ಕನ್ನು ತೋರಿಸುವಲ್ಲಿ ಸಫಲವಾಗಿದೆ ಎಂದು ಮಂಜೇಶ್ವರ ಶಾಸಕ ಎ.ಕೆ.ಎಂ.ಅಶ್ರಫ್ ಸಮಾರಂಭ ಉದ್ಘಾಟಿಸಿ ಅಭಿಪ್ರಾಯಪಟ್ಟರು. ದೇಶೀಯ ವೇದಿ ಅಧ್ಯಕ್ಷ ಎ.ಎಂ.ಸಿದ್ದೀಕ್ ರಹಮಾನ್ ಅಧ್ಯಕ್ಷತೆ ವಹಿಸಿದ್ದರು. 

                     ವಿಮುಕ್ತಿ ಜಿಲ್ಲಾ ಸಂಯೋಜಕರು ಹಾಗೂ ಅಬಕಾರಿ ಅಧಿಕಾರಿ ಮಾಯಾ ಎನ್.ಜಿ.ರಘುನಾಥನ್ ಅವರು ಪಾದಯಾತ್ರೆಯುದ್ದಕ್ಕೂ ಮಾದಕ ದ್ರವ್ಯ ವಿರೋಧಿ ಸಂದೇಶ ಮತ್ತು ಪ್ರತಿಜ್ಞೆ ಬೋಧಿಸಿದರು.  ಜಿಲ್ಲಾ ಪಂಚಾಯಿತಿ ಸದಸ್ಯೆ ಜಮೀಲಾ ಸಿದ್ದೀಕ್, ಬ್ಲಾಕ್ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಅಶ್ರಫ್ ಕಾರ್ಲೆ, ಬ್ಲಾಕ್ ಪಂಚಾಯಿತಿ ಸದಸ್ಯೆ ಜೀನತ್ ನಝೀರ್ ಕಲ್ಲಂಗಾಯಿ, ಕುಂಬಳೆ ಗ್ರಾ.ಪಂ ಉಪಾಧ್ಯಕ್ಷ ನಾಸರ್ ಮೊಗ್ರಾಲ್, ಗ್ರಾ.ಪಂ.ಸದಸ್ಯರಾದ ತಾಹಿರಾ ಶಂಸೀರ್, ಸಿ.ಎಂ.ಮಹಮ್ಮದ್, ಕುಂಬಳೆ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ದಿವಾಕರ ರೈ, ಆರೋಗ್ಯ ಮೇಲ್ವಿಚಾರಕ ಬಿ.ಅಶ್ರಫ್, ಹೋಮಿಯೋ ವೈದ್ಯಾಧಿಕಾರಿ ಡಾ.ಪ್ರಸೀತಾ, ಎಂ ಮಾಹಿನ್ ಮಾಸ್ತರ್, ನಿಸಾರ್ ಪೆರ್ವಾಡ್, ಜೆಡ್ ಎ ಮೊಗ್ರಾಲ್, ಟಿಎಂ ಶುಹೈಬ್, ಮೊಗ್ರಾಲ್ ಜಿವಿಎಚ್‍ಎಸ್‍ಎಸ್ ಶಾಲಾ ಪಿಟಿಎ ಅಧ್ಯಕ್ಷ ಸೈಯದ್ ಹಾದಿ ತಂಙಳ್, ಪೇರಾಲು ಜಿಎಲ್‍ಬಿಎಸ್ ಶಾಲಾ ಪಿಟಿಎ ಅಧ್ಯಕ್ಷ ಮುಹಮ್ಮದ್ ಬಿ.ಎ, ಕ್ಲಬ್ ಪ್ರತಿನಿಧಿಗಳಾದ ರಫೀಕ್, ಸಿದ್ದೀಕ್, ಕೆ.ಪಿ ಸೀದಿ, ಆರಿಫ್, ಲಿಯೋ ಫೆರ್ನಾಂಡಿಸ್, ಬಿ.ಎ.ಮುಹಮ್ಮದ್ ಕುಂಞÂ್ಞ,  ಇಬ್ರಾಹಿಂ ಖಲೀಲ್, ಕೆ.ಕೆ.ಅಶ್ರಫ್, ಕೆ.ಅರಬಿ ಕೊಪ್ಪಳ, ಎ.ಬಿ.ಅಬ್ದುಲ್ಲಾ ಪೆರ್ವಾಡ್ ಕಡಪ್ಪುರ, ಮೊಗ್ರಾಲ್ ಜಿ.ವಿ.ಎಚ್.ಎಸ್.ಎಸ್ ಮುಖ್ಯೋಪಾಧ್ಯಾಯ ಮನೋಜ್ ಎ, ಖಾದರ್ ಮಾಸ್ತರ್, ಸಿವಿಲ್ ಅಬಕಾರಿ ಅಧಿಕಾರಿ ಅಜರುದ್ದೀನ್ ಮೊಗ್ರಾಲ್, ವಿವಿಧ ಅಬಕಾರಿ ಅಧಿಕಾರಿಗಳಾದ ಮರ್ಯಾ, ಮುಜೀಬ್ ರಹಮಾನ್, ನಿಝಾಮಿ, ಅಬ್ದುಲ್ ಸಲಾಂ ವಾಫಿ, ಮೊಹಮ್ಮದ್ ಅಶ್ರಫ್ ಫೈಝಿ ದೇಲಂಪಾಡಿ, ಅಲಿ ಮೌಲವಿ ಕೋಟ ರೋಡ್, ಬಿ.ವಿ.ಹಮೀದ್ ಮೌಲವಿ ಕಡವತ್, ಎಂ.ಎ.ಹಮೀದ್ ಸ್ಪಿಕ್, ಸಿ.ಹಿದಾಯತುಲ್ಲಾ, ಹಮೀದ್ ಕಾವಿಲ್, ಲತೀಫ್ ಸಿಲಾ, ಮುಕುಂದನ್ ಮಾಸ್ತರ್ ಎಂ.ಎಂ.ರಹಮಾನ್, ರಿಯಾಝ್ ಕರೀಂ, ವಿಜಯಕುಮಾರ್, ಎಂ.ಎ.ಮೂಸಾ, ಅಶ್ರಫ್ ಕೆ.ಎಸ್.ಇ. ನಟ್ಪಾಲ, ಮೊಹಮ್ಮದ್ ಅಬ್ಕೋ ಮತ್ತು ಮೊಹಮ್ಮದ್ ಕುಂಞÂ್ಞ ಮಾಸ್ತರ್ ಮಾತನಾಡಿದರು. ಕಾರ್ಯದರ್ಶಿ ಟಿ.ಕೆ.ಜಾಫರ್ ಸ್ವಾಗತಿಸಿ, ಕೋಶಾಧಿಕಾರಿ ಕೆ.ಪಿ.ಮಹಮ್ಮದ್ ಸ್ಮಾರ್ಟ್ ವಂದಿಸಿದರು. 

                  ಎಫ್‍ಸಿಕೆ ನಗರ, ಬದ್ರಿಯಾನಗರ ವೆಲ್ಫೇರ್ ಅಸೋಸಿಯೇಶನ್, ಕೋಟ ರೋಡ್ ಕೊಟ್ಟಾಯಂ ಕ್ಲಬ್, ಇಮಾಮ್ ಶಾಫಿ ಇಸ್ಲಾಮಿಕ್ ಅಕಾಡೆಮಿ, ಎಸ್ಸಾ ಸ್ಕೂಲ್ ಪೆರ್ವಾಡ್, ಅಯ್ಯಪ್ಪ ಸ್ವಾಮಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಪೆರ್ವಾಡ್, ನಡ್ಪಾಲ ಬ್ರದರ್ಸ್ ಕ್ಲಬ್, ಚಳಿಯಂಗೋಡ್ ಬಾಯ್ಸ್ ಚಳಿಯಂಗೋಡ್, ಕೆವಿ ಸಮಿತಿ, ಪ್ರಿಯದರ್ಶಿನಿ ಕ್ಲಬ್, ಸಿಟಿಜನ್ ಕ್ಲಬ್ ಕಡವತ್, ಮಿಲಾದ್ ನಗರ. ಟ್ರಸ್ಟ್, ಕೊಪ್ಪಳ ಸಮುದಾಯ ಮತ್ತು ಪೆರ್ವಾಡ್ ಕಡಪ್ಪುರ ಜುಮಾ ಮಸೀದಿ ಸಮಿತಿ ವತಿಯಿಂದ ವಿವಿಧೆಡೆ ಯಾತ್ರಾರ್ಥಿಗಳಿಗೆ ಆತ್ಮೀಯ ಸ್ವಾಗತ ಕೋರಲಾಯಿತು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries