HEALTH TIPS

RBI ವಿತ್ತೀಯ ನೀತಿ ಪ್ರಕಟ: ಸತತ 10ನೇ ಬಾರಿ ರೆಪೊ ದರ ಯಥಾಸ್ಥಿತಿ ಮುಂದುವರಿಕೆ

          ಮುಂಬೈ: ದೇಶದಲ್ಲಿ ಕೊರೋನಾ ಮೂರನೇ ಅಲೆ ತಗ್ಗುತ್ತಿರುವ ಸಂದರ್ಭದಲ್ಲಿ ಆರ್ಥಿಕ ಅನಿಶ್ಚಿತತೆ ಇನ್ನೂ ಮುಂದುವರಿದಿರುವಾಗ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (RBI) ತ್ರೈಮಾಸಿಕ ವಿತ್ತೀಯ ನೀತಿ ಪ್ರಕಟವಾಗಿದೆ. ಸತತ 10ನೇ ಬಾರಿಗೆ ರೆಪೊ (Repo rate) ಮತ್ತು ರಿವರ್ಸ್ ರೆಪೊ ದರವನ್ನು (Reverse repo rate) ಯಥಾಸ್ಥಿತಿ ಮುಂದುವರಿಸಲಾಗಿದೆ.

          ಪ್ರಸಕ್ತ ಹಣಕಾಸು ವರ್ಷದ ತ್ರೈಮಾಸಿಕದಲ್ಲಿ ರೆಪೊ ದರ ಶೇಕಡಾ 4ರಷ್ಟು ಮತ್ತು ರಿವರ್ಸ್ ರೆಪೊ ದರ ಶೇಕಡಾ 3.35ರಷ್ಟು ಮುಂದುವರಿಯಲಿದೆ. ವಿತ್ತೀಯ ನೀತಿ ಸಮಿತಿ ಸದಸ್ಯರು ರೆಪೊ ದರವನ್ನು ಬದಲಿಸದೆ ಯಥಾಸ್ಥಿತಿ ಮುಂದುವರಿಸಲು ಒಲವು ತೋರಿಸಿದರು ಎಂದು ಇಂದು ಸುದ್ದಿಗೋಷ್ಠಿಯಲ್ಲಿ ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ತಿಳಿಸಿದ್ದಾರೆ.


           ಕೋವಿಡ್ ಹೊಡೆತದ ಮಧ್ಯೆ ಜಾಗತಿಕ ಮಟ್ಟದಲ್ಲಿ ಆರ್ಥಿಕತೆ ಕುಸಿಯುತ್ತಿದೆ. ಆದರೆ ಉಳಿದ ದೇಶಗಳಿಗಿಂತ ಭಾರತ ವೇಗವಾಗಿ ಮುನ್ನುಗ್ಗಲು ನೋಡುತ್ತಿದೆ. ಅತಿ ವೇಗವಾಗಿ ಬೆಳೆಯುವ ಆರ್ಥಿಕತೆ ಭಾರತವಾಗಿದೆ ಎಂದು ಶಕ್ತಿಕಾಂತ್ ದಾಸ್ ಹೇಳಿದರು.

           ಬಡ್ಡಿದರವನ್ನು ಐತಿಹಾಸಿಕ ಕನಿಷ್ಠ ಮಟ್ಟಕ್ಕೆ ಕಡಿತಗೊಳಿಸುವ ಮೂಲಕ ಬೇಡಿಕೆಯನ್ನು ಹೆಚ್ಚಿಸಲು RBI ತನ್ನ ನೀತಿಯ ರೆಪೊ ದರವನ್ನು ಮೇ 22, 2020 ರಂದು ಪರಿಷ್ಕರಿಸಿತ್ತು. ಉನ್ನತ ಬ್ಯಾಂಕ್ ಮುಂದಿನ ಹಣಕಾಸು ವರ್ಷದ ಜಿಡಿಪಿ ಬೆಳವಣಿಗೆಯನ್ನು ಶೇಕಡಾ 7.8 ಎಂದು ಯೋಜಿಸಿದೆ. RBI ಹಣಕಾಸು ವರ್ಷ 2022ರಲ್ಲಿ ಶೇಕಡಾ 5.3 ಮತ್ತು 2022-23 ರಲ್ಲಿ ಶೇಕಡಾ 4.5 CPI ಹಣದುಬ್ಬರವನ್ನು ನೋಡುತ್ತದೆ. 

         ರೆಪೊ ದರ (Repo rate): ಬ್ಯಾಂಕುಗಳಲ್ಲಿ ಹಣದ ಕೊರತೆಯಾದರೆ ಅಥವಾ ಹಣದ ಅವಶ್ಯಕತೆಯಿದ್ದರೆ ಆರ್ ಬಿಐ ಬ್ಯಾಂಕುಗಳಿಗೆ ಕೊಡುವ ಸಾಲದ ಹಣದ ಮೇಲೆ ವಿಧಿಸುವ ನಿಶ್ಚಿತ ಬಡ್ಡಿ ದರ ರೆಪೊ ದರವಾಗಿದೆ. ಹಣದುಬ್ಬರವನ್ನು ನಿಯಂತ್ರಿಸಲು ವಿತ್ತೀಯ ಅಧಿಕಾರಿಗಳು ರೆಪೊ ದರವನ್ನು ಬಳಸುತ್ತಾರೆ.

           ಹಣದುಬ್ಬರದ ಸಂದರ್ಭದಲ್ಲಿ, ಕೇಂದ್ರ ಬ್ಯಾಂಕು ಆರ್ ಬಿಐ ರೆಪೊ ದರವನ್ನು ಹೆಚ್ಚಿಸುತ್ತವೆ, ಸಾಧ್ಯವಾದಷ್ಟು ಬ್ಯಾಂಕುಗಳು ಆರ್ ಬಿಐಯಿಂದ ಸಾಲ ಪಡೆಯುವುದನ್ನು ತಡೆಯುತ್ತದೆ. ಇದು ಅಂತಿಮವಾಗಿ ಆರ್ಥಿಕತೆಯಲ್ಲಿ ಹಣ ಪೂರೈಕೆಯನ್ನು ಕಡಿಮೆ ಮಾಡಿ ಹಣದುಬ್ಬರ ನಿಯಂತ್ರಿಸಲು ಸಹಾಯ ಮಾಡುತ್ತದೆ.

              ರಿವರ್ಸ್ ರೆಪೊ ದರ (Reverse repo rate): ಇದಕ್ಕೆ ಪ್ರತಿಯಾಗಿ ಆರ್‌ಬಿಐ ಅಲ್ಪಾವಧಿಗೆ ಬ್ಯಾಂಕುಗಳಿಂದ ಹಣವನ್ನು ಸಾಲ ಪಡೆದು ಆ ಹಣದ ಮೇಲೆ ನೀಡುವ ಬಡ್ಡಿದರವನ್ನು ರಿವರ್ಸ್ ರೆಪೊ ದರ ಎಂದು ಕರೆಯುತ್ತಾರೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries