HEALTH TIPS

ಮುಖ್ಯ ಸ್ವಿಚ್​ ಬಿಟ್ಟು ರಿಮೋಟ್​ನಿಂದ TV ಆಫ್​ ಮಾಡಿದ್ರೂ​ ನಷ್ಟ​: ವರ್ಷದ ವಿದ್ಯುತ್​ ಬಿಲ್​ ಕೇಳಿದ್ರೆ ದಂಗಾಗ್ತೀರಾ!

                ನವದೆಹಲಿ: ಇಂದು ಇಡೀ ಪ್ರಪಂಚದಲ್ಲಿ ಪ್ರತಿಯೊಬ್ಬರ ಮನೆಯಲ್ಲೂ ಟಿವಿ ಇದೆ. ಅದರಲ್ಲೂ ತಿಂಗಳಾಂತ್ಯದ ವಿದ್ಯುತ್​ ಬಿಲ್​ನಲ್ಲಿ ಟಿವಿಯ ಕೊಡುಗೆಯೂ ಬಹುಮುಖ್ಯವಾಗಿದೆ. ಭಾರತದ ಸುಮಾರು 70 ರಷ್ಟು ಮನೆಗಳಲ್ಲಿ ಟಿವಿಯ ಮುಖ್ಯ ಸ್ವಿಚ್​ ಆಫ್ ಮಾಡುವುದೇ ಇಲ್ಲ.

             ಬಹುತೇಕರು ಕೇವಲ ರಿಮೋಟ್​ನಿಂದ ಆಫ್​ ಮಾಡಿ ಸುಮ್ಮನಾಗುತ್ತಾರೆಂದು ಸಮೀಕ್ಷೆ ಒಂದರ ಪ್ರಕಾರ ತಿಳಿದುಬಂದಿದೆ.

               ಈ ರೀತಿಯಾಗಿ ಟಿವಿ ಸ್ವಿಚ್ ಆಫ್​ ಮಾಡಿದರೆ ಆಗಲೂ ವಿದ್ಯುತ್​ ಬಳಕೆಯಾಗುತ್ತಿರುತ್ತದೆ. ಇದು ಕೂಡ ನಿಮ್ಮ ಮನೆಯ ಬಜೆಟ್​ ಮೇಲೆ ಗೊತ್ತಿಲ್ಲದೇ ಪರಿಣಾಮ ಬೀರುವುದರಲ್ಲಿ ಸಂಶಯವೇ ಇಲ್ಲ. ಹೀಗಾಗಿ ಎಲೆಕ್ಟ್ರಾನಿಕ್​ ಸಾಧನಗಳನ್ನು ಬಳಸುವಾಗ ಕೆಲವೊಂದು ಸಲಹೆಗಳನ್ನು ಅನುಸರಿಸಿದರೆ, ವಿದ್ಯುತ್​ ಬಿಲ್​ ಭಾರ ಕೊಂಚ ಕಡಿಮೆ ಆಗಲಿದೆ. ಇಲ್ಲವಾದರೆ, ನಮಗೆ ಗೊತ್ತಿಲ್ಲದೇ ನಮ್ಮ ಜೇಬಿನಿಂದ ಸುಮ್ಮನೇ ಹಣ ಪಾವತಿಸಬೇಕಾಗುತ್ತದೆ.

              ಎಂದಿಗೂ ಎಲೆಕ್ಟ್ರಾನಿಕ್​ ಉಪಕರಣಗಳನ್ನು ಸ್ಟ್ಯಾಂಡ್​ಬೈ ಮೋಡ್​ನಲ್ಲಿ ಬಿಡಬಾರದು. ಏಕೆಂದರೆ ಸ್ಟ್ಯಾಂಡ್​ಬೈ ಮೋಡ್​ನಲ್ಲಿದ್ರೆ ಪ್ಲಗ್​ ಸಾಕೆಟ್​ನಿಂದ ವಿದ್ಯುತ್​ ಬಳಕೆ ಮುಂದುವರಿಯುತ್ತದೆ. ಟಿವಿ ಮಾಡೆಲ್​, ಅದರ ಟೆಕ್ನಾಲಜಿ ಮತ್ತು ಗಾತ್ರವು ಸ್ಟ್ಯಾಂಡ್​ಬೈ ಮೋಡ್​ನಲ್ಲಿರುವ ಟಿವಿ ವಿದ್ಯುತ್​ ಬಳಕೆಯನ್ನು ಅವಲಂಬಿಸಿರುತ್ತದೆ. ಕೇವಲ ರಿಮೋಟ್​ನಲ್ಲಿ ಆಫ್​ ಮಾಡುವುದರಿಂದ ವರ್ಷಕ್ಕೆ ಖರ್ಚಾಗುವ ವಿದ್ಯುತ್​ ಬೆಲೆ ಕೇಳಿದರೆ ನೀವು ನಿಜಕ್ಕೂ ಅಚ್ಚರಿ ಪಡುತ್ತೀರಾ.

             ಪರಿಣಿತರ ಪ್ರಕಾರ ಟಿವಿ ಸ್ಟ್ಯಾಂಡ್​ಬೈ ಮೋಡ್​ನಲ್ಲಿದ್ದರೆ, ಪ್ರತಿ ಗಂಟೆಗೆ ಅಂದಾಜು 0.5 ವ್ಯಾಟ್​ ಖರ್ಚಾಗುತ್ತದೆ. ಇದರಿಂದ ತಿಂಗಳಿಗೆ ಸುಮಾರು 5 ರೂಪಾಯಿವರೆಗೂ ವಿದ್ಯುತ್​ ಬಿಲ್​ ಬರುತ್ತದೆ. ಟಿವಿಯು ಹವಾನಿಯಂತ್ರಣ ಅಥವಾ ಹೀಟರ್‌ನಂತಹ ಕಾಲೋಚಿತ ಸಾಧನವಲ್ಲ. ಅದನ್ನು ಪ್ರತಿನಿತ್ಯವೂ ಬಳಸುವ ಕಾರಣ ಸ್ಟ್ಯಾಂಡ್​ಬೈ ಮೋಡ್​ ಅಭ್ಯಾಸ ಮಾಡಿಕೊಂಡರೆ ವರ್ಷಪೂರ್ತಿ ಅಂದಾಜು ನೂರಾರು ರೂಪಾಯಿ ವಿದ್ಯುತ್ ಬಿಲ್ ತೆರಬೇಕಾಗುತ್ತದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries