HEALTH TIPS

ರಷ್ಯಾ ಆಕ್ರಮಣದ ಬಳಿಕ ಉಕ್ರೇನ್ ತೊರೆದ 10 ಮಿಲಿಯನ್ ಜನ: ವಿಶ್ವಸಂಸ್ಥೆ

              ವಿಶ್ವಸಂಸ್ಥೆ: ರಷ್ಯಾದ ಆಕ್ರಮಣದ ಬಳಿಕ 10 ಮಿಲಿಯನ್ ಮಂದಿ ಉಕ್ರೇನ್ ನ್ನು ತೊರೆದಿದ್ದಾರೆ ಎಂದು ನಿರಾಶ್ರಿತರ ವಿಭಾಗದ ವಿಶ್ವಸಂಸ್ಥೆಯ ಮುಖ್ಯಸ್ಥರು ಹೇಳಿದ್ದಾರೆ. 

               ಉಕ್ರೇನ್ ನ ಜನಸಂಖ್ಯೆಯ ಪೈಕಿ ಕಾಲುಭಾಗಕ್ಕಿಂತಲೂ ಹೆಚ್ಚು ಮಂದಿ ಯುದ್ಧದ ಬಳಿಕ ತಮ್ಮ ಮನೆಗಳನ್ನು ತೊರೆದಿದ್ದಾರೆ. ಒಟ್ಟು ಜನಸಂಖ್ಯೆಯ ಪೈಕಿ 3.4 ಮಿಲಿಯನ್ ಮಂದಿ ನೆರೆ ರಾಷ್ಟ್ರಗಳಿಗೆ ಬಹುತೇಕ ಪೋಲ್ಯಾಂಡ್ ನೊಂದಿಗಿನ ಗಡಿ ಪ್ರದೇಶಗಳಿಗೆ ತೆರಳಿದ್ದಾರೆ ಎಂದು ಯುಎನ್ ಹೆಚ್ ಸಿಆರ್ ಹೇಳಿದೆ.  

                ಯುದ್ಧ ಸಾರುವವರ ಜವಾಬ್ದಾರಿಯ ಪೈಕಿ, ಮನೆಗಳನ್ನು ತೊರೆಯುವಂತೆ ಮಾಡಿದ, ಅನುಭವಿಸಿದ ಸಂಕಟಕ್ಕೂ ಸಹ ಆ ದೇಶದ ಹೊಣೆಯೇ ಆಗಿರುತ್ತದೆ ಎಂದು ಯುಎನ್ ಹೆಚ್ ಸಿಆರ್ ಮುಖ್ಯಸ್ಥ ಫಿಲಿಪೋ ಗ್ರಾಂಡೀ ಹೇಳಿದ್ದು ರಷ್ಯಾವನ್ನೇ ಹೊಣೆ ಮಾಡಿದ್ದಾರೆ. 

                 ಉಕ್ರೇನ್ ನಲ್ಲಿನ ಯುದ್ಧ ವಿನಾಶಕಾರಿಯಾಗಿದ್ದು, 10 ಮಿಲಿಯನ್ ಮಂದಿ ದೇಶದ ಒಳಗೇ ಬೇರೆಡೆಗೆ ಸ್ಥಳಾಂತರಗೊಂಡಿದ್ದಾರೆ ಅಥವಾ ನಿರಾಶ್ರಿತರಾಗಿ ಬೇರೆ ದೇಶಗಳಿಗೆ ಹೋಗಿದ್ದಾರೆ ಎಂದು ವಿಶ್ವಸಂಸ್ಥೆ ಹೇಳಿದೆ. 

                 ಫೆ.24 ರಿಂದ ರಷ್ಯಾ ಆಕ್ರಮಣ ಮಾಡಿದ ಬಳಿಕ 3,389,044 ಉಕ್ರೇನಿಯನ್ ಗಳು ಗಡಿ ತೊರೆದಿದ್ದಾರೆ. ಶನಿವಾರದಿಂದ 60,352 ಮಂದಿ ವಲಸೆ ಹೋಗಿದ್ದಾರೆ. ವಲಸೆ ಹೋಗಿರುವವರ ಪೈಕಿ ಶೇ.90 ರಷ್ಟು ಮಂದಿ ಮಹಿಳೆಯರು ಹಾಗೂ ಮಕ್ಕಳೇ ಆಗಿದ್ದಾರೆ.

               ಉಕ್ರೇನ್ ನಲ್ಲಿ 18-60 ವರ್ಷದ ವಯಸ್ಸಿನವರು ಸೇನಾ ಕಾರ್ಯಾಚರಣೆಗೆ ಶಕ್ತರಾಗಿರುವ ಕಾರಣ ಸೇನಾ ಕರೆ ಬರಬಹುದಾಗಿದ್ದು, ದೇಶ ಬಿಟ್ಟು ಹೋಗುವುದಕ್ಕೆ ಅವಕಾಶವಿಲ್ಲ. ಯುಎನ್ ಐಸಿಇಎಫ್ ನ ಪ್ರಕಾರ 1.5 ಮಿಲಿಯನ್ ಮಕ್ಕಳು ವಿದೇಶಕ್ಕೆ ತೆರಳಿದ್ದು, ಮಾನವ ಕಳ್ಳಸಾಗಣೆಯಂತಹ ಅಪಾಯಕ್ಕೆ ಸಿಲುಕಿಕೊಳ್ಳುವ ಸಾಧ್ಯತೆ ಇದೆ ಎಂದು ಎಚ್ಚರಿಸಲಾಗಿದೆ. 



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries