ತಿರುವನಂತಪುರ: ರಾಷ್ಟ್ರೀಯ ಮುಷ್ಕರದ ವೇಳೆ ಮ್ಯಾಜಿಸ್ಟ್ರೇಟ್ ಅವರನ್ನು ತಡೆದ ಸಿಪಿಎಂ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಾಗಿದೆ. ಎಡ ಸಂಘಗಳು ಕರೆ ನೀಡಿದ್ದ ಮುಷ್ಕರದ ಸಂದರ್ಭದಲ್ಲಿ ನ್ಯಾಯಾಲಯಕ್ಕೆ ತೆರಳಿದ ಮ್ಯಾಜಿಸ್ಟ್ರೇಟ್ ಅವರನ್ನು ಸಿಪಿಎಂ ಕಾರ್ಯಕರ್ತರು ತಡೆದಿದ್ದರು.
ವಂಚಿಯೂರು ನ್ಯಾಯಾಲಯಕ್ಕೆ ತೆರಳುತ್ತಿದ್ದ ಮ್ಯಾಜಿಸ್ಟ್ರೇಟ್ ಅವರನ್ನು ಪ್ರತಿಭಟನಾಕಾರರು ತಡೆದರು. ತಿರುವನಂತಪುರಂನ ಪೆಟ್ಟಾ ಜಂಕ್ಷನ್‍ನಲ್ಲಿ ಮೊನ್ನೆ ಬೆಳಗ್ಗೆ 10 ಗಂಟೆಗೆ ಈ ಘಟನೆ ನಡೆದಿದೆ. ಮ್ಯಾಜಿಸ್ಟ್ರೇಟ್ ಪೆಟ್ಟಾ ಮೂಲಕ ವಂಚಿಯೂರಿಗೆ ತೆರಳುತ್ತಿದ್ದರು. ಪ್ರತಿಭಟನಾಕಾರರು ಆರಂಭದಲ್ಲಿ ಅಂಗಡಿಗಳನ್ನು ಮುಚ್ಚಿ ನಂತರ ವಾಹನಗಳನ್ನು ತಡೆಯಲು ಮುಂದಾದರು. ಇದರ ಭಾಗವಾಗಿ ಮ್ಯಾಜಿಸ್ಟ್ರೇಟ್ ವಾಹನವನ್ನೂ ತಡೆದರು.
ಎಸ್‍ಐ ಅವರನ್ನು ಕರೆಸಿ ವಿವರಣೆ ಕೇಳಲಾಗಿತ್ತು. ನಂತರ ಪೋಲೀಸರು ವಾಹನ ತಡೆದ ಸಿಪಿಎಂ ಕಾರ್ಯಕರ್ತರನ್ನು ಕಳಿಸಿ ಪ್ರಯಾಣಕ್ಕೆ ವ್ಯವಸ್ಥೆ ಮಾಡಿದರು. ಪೆÇಲೀಸರು 13 ಸಿಪಿಎಂ ಸದಸ್ಯರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.





