HEALTH TIPS

2017-2021: ʼಆತ್ಮನಿರ್ಭರʼದ ಹೊರತಾಗಿಯೂ ಹೊರದೇಶಗಳಿಂದ ಶಸ್ತ್ರಾಸ್ತ್ರಗಳ ಆಮದಿನಲ್ಲಿ ಭಾರತವೇ ಟಾಪ್‌ !

             

 

                 ನವದೆಹಲಿ::ರಕ್ಷಣಾ ಕ್ಷೇತ್ರದಲ್ಲಿ 'ಆತ್ಮನಿರ್ಭರ ಭಾರತ'ಕ್ಕೆ ಕೇಂದ್ರ ಸರಕಾರವು ಒತ್ತು ನೀಡುತ್ತಿರಬಹುದು. ಅದು 2022-23ನೇ ಸಾಲಿಗೆ ಬಂಡವಾಳ ಬಜೆಟ್ ನ ಶೇ.68ರಷ್ಟನ್ನು ದೇಶಿಯ ತಯಾರಿಕೆ ಉದ್ಯಮಗಳಿಗೆ ಮೀಸಲಾಗಿಯೂ ಇರಿಸಿದೆ.

                ಆದಾಗ್ಯೂ ಭಾರತವು ಜಾಗತಿಕವಾಗಿ ಅತಿದೊಡ್ಡ ಶಸ್ತ್ರಾಸ್ತ್ರ ಆಮದು ರಾಷ್ಟ್ರವಾಗಿಯೇ ಉಳಿದಿದೆ ಎನ್ನುವುದನ್ನು ಸ್ಟಾಕ್ಹೋಮ್ ಇಂಟರ್ನ್ಯಾಷನ್ ಪೀಸ್ ರೀಸರ್ಚ್ ಇನ್ಸ್ಟಿಟ್ಯೂಟ್ (ಸಿಪ್ರಿ)ನ ವರದಿಯು ಬೆಟ್ಟು ಮಾಡಿದೆ.

                 ಭಾರತವು ರಶ್ಯದಿಂದ ಹೆಚ್ಚಿನ ರಕ್ಷಣಾ ಆಮದುಗಳನ್ನು ಮಾಡಿಕೊಳ್ಳುತ್ತಿದೆ ಎಂದು ವರದಿಯು ಹೇಳಿದೆ.
             ಆದಾಗ್ಯೂ ಸಿಪ್ರಿಯ ಅಂತರರಾಷ್ಟ್ರೀಯ ಶಸ್ತ್ರಾಸ್ತ್ರಗಳ ವರ್ಗಾವಣೆ ಪ್ರವೃತ್ತಿಗಳು,2021ರಂತೆ ಭಾರತದ ಒಟ್ಟು ಆಮದು ಪ್ರಮಾಣವು 2012-16ರ ಅವಧಿಗೆ ಹೋಲಿಸಿದರೆ 2017-21ರಲ್ಲಿ ಶೇ.21ರಷ್ಟು ಇಳಿಕೆಯಾಗಿದೆ. ಇದು ಭಾರತವು ರಕ್ಷಣಾ ಉಪಕರಣಗಳು ಮತ್ತು ಶಸ್ತ್ರಾಸ್ತ್ರಗಳ ದೇಶಿಯ ತಯಾರಿಕೆಗೆ ಹೆಚ್ಚಿನ ಒತ್ತು ನೀಡುತ್ತಿರುವುದನ್ನು ಪ್ರತಿಬಿಂಬಿಸುತ್ತಿರಬಹುದು.

           2012-16ರ ಅವಧಿಗೆ ಹೋಲಿಸಿದರೆ 2017-2021ರ ಅವಧಿಯಲ್ಲಿ ಜಾಗತಿಕ ಶಸ್ತ್ರಾಸ್ತ್ರ ವರ್ಗಾವಣೆಗಳ ಪ್ರಮಾಣ ಶೇ.4.6ರಷ್ಟು ಕಡಿಮೆಯಾಗಿತ್ತು ಮತ್ತು 2007-2011ರ ಅವಧಿಗೆ ಹೋಲಿಸಿದರೆ 2017-21ರ ಅವಧಿಯಲ್ಲಿ ಜಾಗತಿಕ ಶಸ್ತ್ರಾಸ್ತ್ರ ವರ್ಗಾವಣೆಗಳು ಶೇ.3.9ರಷ್ಟು ಏರಿಕೆಯನ್ನು ಕಂಡಿದ್ದವು ಎಂದು ವರದಿಯು ತಿಳಿಸಿದೆ.

2017-21ರ ಅವಧಿಯಲ್ಲಿ ಭಾರತ, ಸೌದಿ ಅರೇಬಿಯ, ಈಜಿಪ್ತ್, ಆಸ್ಟ್ರೇಲಿಯಾ ಮತ್ತು ಚೀನಾ ಐದು ಬೃಹತ್ ಶಸ್ತ್ರಾಸ್ತ್ರ ಆಮದು ದೇಶಗಳಾಗಿದ್ದರೆ,ಅಮೆರಿಕ,ರಶ್ಯ,ಫ್ರಾನ್ಸ್,ಚೀನಾ ಮತ್ತು ಜರ್ಮನಿ ಐದು ಬೃಹತ್ ಶಸ್ತ್ರಾಸ್ತ್ರ ರಫ್ತು ದೇಶಗಳಾಗಿದ್ದವು.

          ಸಿಪ್ರಿ ಅಂದಾಜುಗಳಂತೆ 2017-21ರ ಅವಧಿಯಲ್ಲಿ ಭಾರತ,ಸೌದಿ ಅರೇಬಿಯ, ಈಜಿಪ್ತ್, ಆಸ್ಟ್ರೇಲಿಯಾ ಮತ್ತು ಚೀನಾ ಜಾಗತಿಕ ಶಸ್ತ್ರಾಸ್ತ್ರ ಆಮದುಗಳಲ್ಲಿ ಸುಮಾರು ಶೇ.38ರಷ್ಟು ಪಾಲನ್ನು ಹೊಂದಿದ್ದವು. 2017-21ರ ಅವಧಿಯಲ್ಲಿ ಭಾರತವು ಜಾಗತಿಕ ಶಸ್ತ್ರಾಸ್ತ್ರ ಆಮದುಗಳಲ್ಲಿ ಶೇ.11 ಮತ್ತು ಚೀನಾ ಶೇ.4.8ರಷ್ಟು ಪಾಲನ್ನು ಹೊಂದಿದ್ದವು.

            2012-16 ಮತ್ತು 2017-21 ಈ ಎರಡೂ ಅವಧಿಗಳಲ್ಲಿ ರಶ್ಯ ಭಾರತದ ಅತಿದೊಡ್ಡ ಶಸ್ತ್ರಾಸ್ತ್ರಗಳ ಪೂರೈಕೆ ದೇಶವಾಗಿತ್ತು. ಆದಾಗ್ಯೂ ಈ ಎರಡೂ ಅವಧಿಗಳ ನಡುವೆ ರಶ್ಯದಿಂದ ಭಾರತದ ಆಮದು ಪ್ರಮಾಣ ಶೇ.47ರಷ್ಟು ಕುಸಿದಿತ್ತು.

              ಈ ನಡುವೆ ಫ್ರಾನ್ಸ್‌ನಿಂದ ಭಾರತದ ಆಮದು ಪ್ರಮಾಣ ಗಣನೀಯವಾಗಿ ಏರಿಕೆಯಾಗಿದ್ದು,ಇದು ಈ ಅವಧಿಯಲ್ಲಿ ಫ್ರಾನ್ಸ್ ಅನ್ನು ಭಾರತಕ್ಕೆ ಎರಡನೇ ಅತಿದೊಡ್ಡ ರಫ್ತು ರಾಷ್ಟ್ರವನ್ನಾಗಿಸಿತ್ತು. 2017-21ರ ಅವಧಿಯಲ್ಲಿ ಶಸ್ತ್ರಾಸ್ತ್ರಗಳ ಆಮದಿನಲ್ಲಿ ಸೌದಿ ಅರೇಬಿಯ,ಈಜಿಪ್ತ್,ಆಸ್ಟ್ರೇಲಿಯಾ ಮತ್ತು ಚೀನಾ ಭಾರತದ ನಂತರದ ಸ್ಥಾನಗಳಲ್ಲಿದ್ದವು.

ಇದೇ ಅವಧಿಯಲ್ಲಿ ಶಸ್ತ್ರಾಸ್ತ್ರಗಳ ರಫ್ತಿನಲ್ಲಿ ಅಮೆರಿಕ ಮೊದಲ ಸ್ಥಾನದಲ್ಲಿದ್ದರೆ,ರಶ್ಯ,ಫ್ರಾನ್ಸ್,ಚೀನಾ ಮತ್ತು ಜರ್ಮನಿ ನಂತರದ ಸ್ಥಾನಗಳಲ್ಲಿದ್ದವು. ಭಾರತ, ಚೀನಾ, ಈಜಿಪ್ತ್ ಮತ್ತು ಅಲ್ಜೀರಿಯಾ ರಶ್ಯದ ಶಸ್ತ್ರಾಸ್ತ್ರಗಳಿಗೆ ನಾಲ್ಕು ಅಗ್ರ ಮಾರುಕಟ್ಟೆಗಳಾಗಿವೆ ಎಂದು ಸಿಪ್ರಿ ತನ್ನ ವರದಿಯಲ್ಲಿ ಹೇಳಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries