ಮುಂಬೈ: ಇನ್ನು ಕೆಲವೇ ದಿನಗಳಲ್ಲಿ ಐಪಿಎಲ್ ಕ್ರಿಕೆಟ್ ಸಮರ ಶುರುವಾಗಲಿದೆ. ಕೋಲ್ಕತ್ತಾ ನೈಟ್ ರೈಡರ್ಸ್ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೆಣಸಲಿದೆ. ಬಿಸಿಸಿಐ ಈ ಸೀಸನ್ ನಿಂದ ಐಪಿಎಲ್‌ನಲ್ಲಿ ಇತ್ತೀಚಿನ ನಿಯಮಗಳನ್ನು ಪರಿಚಯಿಸಿದೆ.
ನಿಯಮ 1: ಯಾವುದೇ ತಂಡವು ಕೋವಿಡ್ ಸೋಂಕಿಗೆ ಗುರಿಯಾಗಿ ತಂಡದಲ್ಲಿ 12 ಕ್ಕಿಂತ ಕಡಿಮೆ ಆಟಗಾರರನ್ನು ಹೊಂದಿದ್ದರೆ(ಅದರಲ್ಲಿ ಕನಿಷ್ಠ 7 ಭಾರತೀಯ ಆಟಗಾರರಾಗಿರಬೇಕು) ಪಂದ್ಯಗಳನ್ನು ಬಿಸಿಸಿಐ ರೀ ಷೆಡ್ಯೂಲ್ ಮಾಡಲಿದೆ. ಮರು ನಿಗದಿಪಡಿಸಲು ಸಾಧ್ಯವಾಗದಿದ್ದರೆ, ಐಪಿಎಲ್ ತಾಂತ್ರಿಕ ತಂಡವು ಗಮನಕ್ಕೆ ತರಲಿದೆ. ನಂತರ ಇದಕ್ಕೆ ತಾಂತ್ರಿಕ ಸಮಿತಿ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತದೆ.
ನಿಯಮ 2: ಹಿಂದಿನ ಸೀಸನ್‌ಗಳಿಗಿಂತ ಭಿನ್ನವಾಗಿ, ಐಪಿಎಲ್‌ನಲ್ಲಿ ಪ್ರತಿ ತಂಡವು ಎರಡು ರಿವ್ಯೂ ತೆಗೆದುಕೊಳ್ಳುವ ಅವಕಾಶವನ್ನು ಹೊಂದಿದೆ. ಇಲ್ಲಿಯವರೆಗೆ ಪ್ರತಿ ತಂಡವು ಕೇವಲ ಒಂದು ರಿವ್ಯೂ ಪಡೆಯಲು ಅವಕಾಶವನ್ನು ಹೊಂದಿತ್ತು.
ನಿಯಮ 3: ಮೇರಿಲ್‌ಬಾರ್ನ್ ಕ್ರಿಕೆಟ್ ಕ್ಲಬ್ ತಂದಿರುವ ಹೊಸ ನಿಯಮಗಳು ಐಪಿಎಲ್‌ನಲ್ಲೂ ಜಾರಿಯಾಗಲಿವೆ. ಬ್ಯಾಟ್ಸ್ ಮನ್ ಕ್ಯಾಚ್ ಔಟ್ ಆದ ನಂತರ ಕ್ರೀಸ್ ಗೆ ಬರುವ ಬ್ಯಾಟ್ಸ್ ಮನ್ ಸ್ಡ್ರೈಕ್ ತೆಗೆದುಕೊಳ್ಳುತ್ತಾರೆ. ಇದರಲ್ಲಿ ಓವರ್ ನ ಅಂತಿಮ ಎಸೆತಕ್ಕೆ ಔಟ್ ಆಗಿದ್ದರೆ ಈ ನಿಯಮ ಅನ್ವಯಿಸುವುದಿಲ್ಲ.
ನಿಯಮ 4: ಪ್ಲೇಆಫ್ ಅಥವಾ ಅಂತಿಮ ಪಂದ್ಯದಲ್ಲಿ ಯಾವುದೇ ಫಲಿತಾಂಶವಿಲ್ಲದೆ ಟೈ ತಲುಪಿದರೆ ಸೂಪರ್ ಓವರ್‌ಗಳನ್ನು ನಡೆಸಲಾಗುತ್ತದೆ. ಸೂಪರ್ ಓವರ್‌ಗೆ ಅವಕಾಶ ನೀಡದಿದ್ದರೆ ಲೀಗ್ ಹಂತದ ಅಂಕಗಳ ಆಧಾರದ ಮೇಲೆ ವಿಜೇತರನ್ನು ಘೋಷಿಸಲಾಗುತ್ತದೆ ಎಂಬ ಹೊಸ ನಿಯಮಗಳನ್ನ ಸದ್ಯ ಬಿಸಿಸಿಐ ಜಾರಿ ಮಾಡಿದೆ.

