ಚೆನ್ನೈ: ಮೊಬೈಲ್ ಫೋನ್ ಈಗ ಎಲ್ಲರಿಗೂ, ಎಲ್ಲದಕ್ಕೂ ಅನಿವಾರ್ಯವಾಗಿದೆ. ಆದರೆ ಸರ್ಕಾರ ಕಚೇರಿಗಳಲ್ಲಿ ಕೆಲಸಗಳು ಸರಿಯಾಗಿ ನಡೆಯುವುದಿಲ್ಲ. ಈ ಹೊತ್ತಿನಲ್ಲಿ, ಕೆಲವು ಸರ್ಕಾರಿ ನೌಕರರು ಕೆಲಸದ ವೇಳೆಯಲ್ಲೂ ವೈಯಕ್ತಿಕ ವಿಚಾರವಾಗಿ ಫೋನ್‌ನಲ್ಲಿ ಮುಳುಗಿರುವವರ ವಿರುದ್ದ ತಮಿಳುನಾಡು ಹೈಕೋರ್ಟ್ ಮಹತ್ವದ ಸೂಚನೆಯನ್ನ ನೀಡಿದೆ.
ಸರ್ಕಾರಿ ನೌಕರರು ಕಚೇರಿ ವೇಳೆಯಲ್ಲಿ ವೈಯಕ್ತಿಕ ಬಳಕೆಗೆ ಮೊಬೈಲ್ ಫೋನ್ ಬಳಸಬಾರದು ಎಂದು ಮದ್ರಾಸ್ ಹೈಕೋರ್ಟ್ ತಮಿಳುನಾಡು ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಹೈಕೋರ್ಟ್ ನ್ಯಾಯಮೂರ್ತಿ ಎಸ್ ಎಂ ಸುಬ್ರಮಣಿಯನ್ ಅವರು ಮಂಗಳವಾರ ತಮಿಳುನಾಡು ಸರ್ಕಾರಕ್ಕೆ ಈ ಕುರಿತು ಪ್ರಮುಖ ನಿರ್ದೇಶನಗಳನ್ನು ನೀಡಿದ್ದಾರೆ. ಈ ಸಂಬಂಧ ಕೂಡಲೇ ಮಾರ್ಗಸೂಚಿಗಳನ್ನು ರೂಪಿಸಿ ನೌಕರರ ವಿರುದ್ಧ ಕ್ರಮ ಕೈಗೊಳ್ಳಬೇಕೇ ಎಂದು ನ್ಯಾಯಮೂರ್ತಿ ಸುಬ್ರಮಣಿಯನ್ ಆದೇಶದಲ್ಲಿ ತಿಳಿಸಿದ್ದಾರೆ.
‘ಸರ್ಕಾರಿ ಕಚೇರಿಗಳಲ್ಲಿ ಕನಿಷ್ಠ ಶಿಸ್ತನ್ನು ಪಾಲಿಸಬೇಕು. ಕಚೇರಿಯೊಳಗೆ ಮೊಬೈಲ್ ಕ್ಯಾಮೆರಾಗಳನ್ನು ಪದೇ ಪದೇ ಬಳಸುತ್ತಿದ್ದಾರೆ ಎಂಬ ಆರೋಪಗಳು ಗಲಾಟೆಗೆ ಕಾರಣವಾಗುತ್ತಿದೆ ಮತ್ತು ಇದು ಇಲಾಖೆಗಳ ಸಾರ್ವಜನಿಕ ಕಚೇರಿಗಳ ಕಾರ್ಯನಿರ್ವಹಣೆಗೆ ಅಡ್ಡಿಯಾಗುವುದರಲ್ಲಿ ಸಂಶಯವಿಲ್ಲ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು ಮತ್ತು ಎಲ್ಲಾ ಸರ್ಕಾರಿ ಕಛೇರಿಗಳಿಗೆ ಸೂಕ್ತ ಸುತ್ತೋಲೆ/ಸೂಚನೆಗಳನ್ನು ಹೊರಡಿಸಬೇಕು ಎಂದು ನ್ಯಾಯಾಲಯ ಹೇಳಿದೆ.

