HEALTH TIPS

ಹಾಕಿ ಕ್ರೀಡಾ ಉದ್ಘಾಟನೆ, ಕಿಟ್ ವಿತರಣಾ ಸಮಾರಂಭ

            ಕಾಸರಗೋಡು: ಚಿನ್ಮಯ ವಿದ್ಯಾಲಯದಲ್ಲಿ ಜಿಲ್ಲಾ ಹಾಕಿ ಸಂಘಟನೆಯ ನೇತೃತ್ವದಲ್ಲಿ ಹಾಕಿ ಕ್ರೀಡಾ ಉದ್ಘಾಟನೆ,  ಕಿಟ್ ವಿತರಣಾ ಸಮಾರಂಭ ಕಾಸರಗೋಡು ಜಿಲ್ಲಾ ಹಾಕಿ ಅಸೋಸಿಯೇಷನ್ ನ ನೇತೃತ್ವದಲ್ಲಿ ಜರುಗಿತು.

           ಕಾಸರಗೋಡು ಚಿನ್ಮಯ ವಿದ್ಯಾಲಯದ ಅಧ್ಯಕ್ಷ ಸ್ವಾಮಿ ವಿವಿಕ್ತಾನಂದ ಸರಸ್ವತಿ ಸಮಾರಂಭ ಉದ್ಘಾಟಿಸಿ ಮಾತನಾಡಿ, ಕಲಿಯುವಿಕೆಯೊಂದಿಗೆ ವಿದ್ಯಾರ್ಥಿಗಳು ಕ್ರೀಡಾ ಕ್ಷೇತ್ರದಲ್ಲಿಯೂ ಆಸಕ್ತಿ ವಹಿಸಬೇಕು. ರಾಷ್ಟ್ರೀಯ ಕ್ರೀಡೆಯಾಗಿರುವ ಹಾಕಿಯ ಪ್ರಾಧಾನ್ಯತೆಯ ಕುರಿತು ವಿದ್ಯಾರ್ಥಿಗಳಿಗೆ ವಿವರಿಸಿದರು. ಕೇರಳ ಹಾಕಿ ಅಸೋಸಿಯೇಶನ್‍ನ ಸದಸ್ಯ ಎ. ವಿ. ಅಚ್ಚುತನ್ ಮಾಸ್ಟರ್ ವಿದ್ಯಾರ್ಥಿಗಳಿಗೆ ಹಾಕಿ ಕಿಟ್ಟನ್ನು ವಿತರಿಸಿ ಮಾತನಾಡಿ, ಫಿಟ್ ಇಂಡಿಯ ಕಾರ್ಯಕ್ರಮದ ಅಂಗವಾಗಿ ನಡೆಸಿದ 'ಸ್ಟೇ ಫಿಟ್'ಕಾರ್ಯಕ್ರಮದಲ್ಲಿ ಕಾಸರಗೋಡು ಚಿನ್ಮಯ ವಿದ್ಯಾಲಯವು ಉತ್ತಮ ನಿರ್ವಹಣೆ ತೋರಿದ್ದು, ಇದಕ್ಕಾಗಿ ಚಿನ್ಮಯ ವಿದ್ಯಾಲಯದಲ್ಲಿ ಹಾಕಿ ಕಿಟ್ ವಿತರಿಸಲಾಯಿತು ಎಂದು ತಿಳಿಸಿದರು.  ಜಿಲ್ಲಾ ಹಾಕಿ ಅಸೋಸಿಯೇಷನ್ ಸೆಕ್ರೆಟರಿ ಎ ವಿ ಪವಿತ್ರನ್, ಜಿಲ್ಲಾ ಹೋಕಿ ಪ್ರೆಸಿಡೆಂಟ್ ರಾಮಕೃಷ್ಣ ನ್ ಮಾಸ್ಟರ್, ವಿದ್ಯಾಲಯ ಡೈರೆಕ್ಟರ್ ಬಿ . ಪುಷ್ಪರಾಜ್, ಪ್ರಧಾನ ಅಧ್ಯಾಪಿಕೆಯರಾದ ಪೂರ್ಣಿಮ, ಸಿಂಧು ಶಶೀಂದ್ರನ್, ಕ್ರೀಡಾ ಅಧ್ಯಾಪಿಕೆ ಮಂಜುಳ ಹಾಗೂ ಪಾಯಲ್ ಉಪಸ್ಥಿತರಿದ್ದರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries