HEALTH TIPS

ಕುಕ್ಕಂಕೂಡ್ಲು ದೇವಾಲಯದ ದೃಢಕಲಶಾಭಿಷೇಕ ಸಂಪನ್ನ: ನಂಬಿಕೆಯಲ್ಲಿ ದೃಢಗೊಂಡಷ್ಟು ಅನುಗ್ರಹ ಶೀಘ್ರ ಪ್ರಾಪ್ತಿ: ಎಡನೀರು ಶ್ರೀ

             ಬದಿಯಡ್ಕ: ಮಾನಸಿಕ ಧೈರ್ಯ ತುಂಬುವ ಬಾಹ್ಯ ಬೆಂಬಲ ಎತ್ತರಕ್ಕೇರಿಸುತ್ತದೆ. ಆತ್ಯಂತಿಕವಾಗಿ ಭಗವಂತನೊಬ್ಬನೇ ಶಕ್ತಿ ನೀಡುವ ಸಂಪನ್ನನಾಗಿದ್ದು, ದೃಢ ನಿರ್ಧಾರ, ನಂಬಿಕೆಗಳ ಮೂಲಕ ಬಲನೀಡುವ ತಾಣಗಳೇ ದೇವಾಲಯಗಳಾಗಿವೆ ಎಂದು  ಶ್ರೀಮದ್ ಎಡನೀರು ಮಠಾಧೀಶ ಶ್ರೀಸಚ್ಚಿದಾನಂದ ಭಾರತೀ ಶ್ರೀಗಳು ತಿಳಿಸಿದರು.

            ಶ್ರೀಕಂಠಪ್ಪಾಡಿ ಶ್ರೀಸುಬ್ರಹ್ಮಣ್ಯ ದೇವಾಲಯದಲ್ಲಿ ಮಂಗಳವಾರ ನಡೆದ ದೃಢಕಲಶಾಭಿಷೇಕ ಸಮಾರಂಭದ ಅಂಗವಾಗಿ ನಡೆದ ಧಾರ್ಮಿಕ ಸಭೆ-ಅಭಿನಂದನಾ ಕಾರ್ಯಕ್ರಮದಲ್ಲಿ ಶ್ರೀಗಳು ಆಶೀರ್ವಚನ ನೀಡಿದರು.


              ದೇವಾಲಯಗಳಿಗೆ ನಿಯಮಿತವಾಗಿ ನೀಡುವ ಭೇಟಿ ಧನಾತ್ಮಕ ಸಮೃದ್ದಿಗೆ ಕಾರಣವಾಗುತ್ತದೆ. ದೇವಾಲಯಗಳ ಮೂಲಕ ಸಾಮಾಜಿಕ, ಸಾಂಸ್ಕøತಿಕ, ಧಾರ್ಮಿಕ ಏಕತೆ ಒಡಮೂಡುತ್ತದೆ. ಆರಾಧನಾಲಯಗಳಿಂದ ಸಾಮಾಜಿಕ ಸ್ವಾಥ್ಯತೆ ಸಾಕಾರಗೊಳ್ಳುತ್ತದೆ ಎಂದು ಶ್ರೀಗಳು ತಿಳಿಸಿದರು.

      ಕ್ಷೇತ್ರದ ಮೊಕ್ತೇಸರ ನ್ಯಾಯವಾದಿ ಗೌರೀ ಶ0ಕರ ರೈ ಆಧ್ಯಕ್ಷತೆ ವಹಿಸಿ ಮಾತನಾಡಿ ದೇವಾಲಯಗಳ ಪ್ರತಿಯೊಂದು ಚಟುವಟಿಕೆಗಳಲ್ಲೂ ಆಸ್ತಿಕರು ಸಲ್ಲಿಸುವ ಶಕ್ತಿಮೀರಿದ ಸೇವೆಗಳಿಂದ ಅಭಿವೃದ್ದಿ ಸುಲಭಸಾಧ್ಯವಾಗುವುದು. ಒಗ್ಗಟ್ಟಿನ ಮಂತ್ರದೊಂದಿಗೆ ಯಶಸ್ಸಿನ ಮೆಟ್ಟಲುಗಳನ್ನು ಹತ್ತುವ ಮೂಲಕ ಬದುಕಿನ ಸಾರ್ಥಕತೆ ಕಾಣಬೇಕಿದೆ ಎಂದರು.

        ಈ ಸಂದರ್ಭ ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಗಣೇಶ ತಂತ್ರಿ ದೇಲಂಪಾಡಿ ಅವರನ್ನು ಕ್ಷೇತ್ರದ ವತಿಯಿಂದ ಗೌರವಿಸಿ ಚಿನ್ನದ ಆಭರಣಗಳನ್ನು ನೀಡಿ ಸನ್ಮಾನಿಸಲಾಯಿತು. ಮಹಿಳಾ ಘಟಕದ ಅಧ್ಯಕ್ಷೆ ಮೈನಾ ಜಿ.ರೈ, ಪೊಳಲಿ ಶ್ರೀಕ್ಷೇತ್ರದ ಆಡಳಿತ ಮೊಕ್ತೇಸರರೂ, ಮಧೂರು ಸನ್ನಿಧಿಯ ಪುನಃ ನವೀಕರಣ-ಬ್ರಹ್ಮಕಲಶ ಸಮಿತಿ ಅ|ಧ್ಯಕ್ಷ ಯು.ಟಿ.ಆಳ್ವ, ರಾಜೇಶ್ವರಿ ರೈ ಉಳಿಪ್ಪಾಡಿಗುತ್ತು, ಕವಿ, ಪತ್ರಕರ್ತ ರಾಧಾಕೃಷ್ಣ ಕೆ.ಉಳಿಯತ್ತಡ್ಕ, ಧಾರ್ಮಿಕ, ಸಾಂಸ್ಕøತಿಕ ಮುಂದಾಳು ಕೆ.ಎನ್.ವೆಂಕಟ್ರಮಣ ಹೊಳ್ಳ ಕಾಸರಗೋಡು ಉಪಸ್ಥಿತರಿದ್ದು ಶುಭಹಾರೈಸಿದರು. ಸನ್ನಿಧಿಯ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಶ್ಯಾಮ ಭಟ್ ಏವುಂಜೆ ಸ್ವಾಗತಿಸಿ, ಚಂದ್ರಹಾಸ ಶೆಟ್ಟಿ ವಂದಿಸಿದರು. ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಸುಂದರ ಶೆಟ್ಟಿ ಕೊಲ್ಲಂಗಾನ ಪ್ರಾಸ್ತಾವಿಕವಾಗಿ ಮಾತನಾಡಿ, ನಿರೂಪಿಸಿದರು.


             ಕಾರ್ಯಕ್ರಮದ ಅಂಗವಾಗಿ ಸೋಮವಾರ  ಬೆಳಿಗ್ಗೆ 7.30  ಬೆಳಗಿನ ಪೂಜೆ, 9 ಗ0ಟೆಯಿಂದ ಶ್ರೀ ಕ್ಷೇತ್ರ ಮತ್ತು ಪರಿಸರ ಶುಚೀಕರಣ ನಡೆಯಿತು. ಬಳಿಕ  ನೀರ್ಚಾಲು ಅಶ್ವತ್ಥ ಕಟ್ಟೆ ಪರಿಸರದಿಂದ ಹಸಿರುವಾಣಿ ಕ್ಷೇತ್ರಕ್ಕೆ ಆಗಮಿಸಿತು. ಸಂಜೆ 5.30 ಕ್ಷೇತ್ರಕ್ಕೆ ತ0ತ್ರಿಗಳು ಆಗಮಿಸಿದರು.ಅವರನ್ನು ಪೂರ್ಣಕು0ಭಗಳ ಗೌರವಾದಾರಗಳೊಂದಿಗೆ  ಸ್ವಾಗತಿಸಲಾಯಿತು. ಬಳಿಕ ಪುಣ್ಯಾಹ ವಾಚನ,ಪ್ರಾಸಾದಶುಧ್ದಿ, ್ದ,ರಾಕ್ಷೋಘ್ನಹೋಮ,ವಾಸ್ತುಹೋಮ,ವಾಸ್ತುಬಲಿ ಮೊದಲಾದ ವೈದಿಕ ವಿಧಿಗಳು ನಡೆದವು. 6.30 ರಿಂದ ಉಬ್ರಂಗಳ ಭಜನಾ ತಂಡದಿಂದ ಸಂಕೀರ್ತನೆ ನಡೆಯಿತು. ರಾತ್ರಿ 8. ರಿ0ದ ನಾಟ್ಯ ವಿದ್ಯಾಲಯ ಕುಂಬಳೆಯ ವಿದುಷಿಃ ವಿದ್ಯಾಲಕ್ಷ್ಮೀ ಕುಂಬಳೆ ಇವರ ಶಿಷ್ಯವೃಂದದವರಿಂದ ನೃತ್ಯ ಸ0ಭ್ರಮ ನಡೆಯಿತು. ರಾತ್ರಿ 9 ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಪ್ರಸಾದ ಭೋಜನ ನಡೆಯಿತು.  

          ಮ0ಗಳವಾರ ಬೆಳಿಗ್ಗೆ 7 ಕ್ಕೆ ಗಣಪತಿ ಹೋಮ,ಕಲಶಪೂಜೆ, ದೃಢಕಲಶಾಭಿಷೇಕ ನಡೆಯಿತು. ಸಭಾ ಕಾರ್ಯಕ್ರಮದ ಬಳಿಕ ಮಹಾಪೂಜೆ, ಜೀರ್ಣೋದ್ಧಾರ ಬ್ರಹ್ಮಕಲಶೋತ್ಸವಕ್ಕೆ ಅವಿರತ ಶ್ರಮಿಸಿದ ಭಕ್ತಸಮೂಹದ ಶ್ರೇಯೋಭಿವೃದ್ಧಿಗೆ ತ0ತ್ರಿಗಳಿಂದ ಸಾಮೂಹಿಕ ಪ್ರಾರ್ಥನೆ ನಡೆಯಿತು. ಬಳಿಕ ಪ್ರಸಾದ ವಿತರಣೆ,ಪ್ರಸಾದ ಭೋಜನ ನಡೆಯಿತು. ಸಂಜೆ 5 ಕ್ಕೆ  ಭಜನೆ, 6 ಕ್ಕೆ ಯಕ್ಷ ವಿಹಾರಿ ಬದಿಯಡ್ಕ ತಂಡದವರಿಂದ ಗಾನವೈಭವ, ರಾತ್ರಿ 8.30 ಕ್ಕೆ ದೀಪೋತ್ಸವ, ವಿಶೇಷ ಕಾರ್ತಿಕಪೂಜೆ, ಪ್ರಸಾದ ವಿತರಣೆಯೊಂದಿಗೆ ಸಂಪನ್ನಗೊಂಡಿತು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries