ಪೆರ್ಲ: ಪೆರ್ಲ ಬಜಕೂಡ್ಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ ಸೋಮವಾರ ಆರಂಭಗೊಂಡಿತು. ಬ್ರಹ್ಮಶ್ರೀ ದೇಲಂಪಾಡಿ ಅನಿರುದ್ಧ ತಂತ್ರಿಗಳ ನೇತೃತ್ವದಲ್ಲಿ ಜಾತ್ರಾಮಹೋತ್ಸವ ನಡೆದುಬರುತ್ತಿದೆ.
ಬೆಳಗ್ಗೆ ಗಣಪತಿ ಹವನದೊಂದಿಗೆ ಧ್ವಜಾರೋಹಣ, ಶ್ರೀದೇವರ ಬಲಿ ಉತ್ಸವ, ತುಲಾಭಾರಸೇವೆ ನಡೆಯಿತು. ಪ್ರತಿದಿನ ಬೆಳಗ್ಗೆ ಮತ್ತು ರಾತ್ರಿ ಶ್ರೀದೇವರ ಬಲಿ ಉತ್ಸವ ನಡೆಯುವುದು. 15ರಂದು ಬೆಳಗ್ಗೆ 10ಕ್ಕೆ ಶ್ರೀದೇವರ ದರ್ಶನ ಬಲಿ, ರಾತ್ರಿ ಶ್ರೀ ಭೂತಬಲಿ, ಕಟ್ಟೆಪೂಜೆ, 16ರಂದು ರಾತ್ರಿ 8.30ಕ್ಕೆ ದೀಪೋತ್ಸವ, ಶ್ರೀಭೂತಬಲಿ, ಶ್ರೀದೇವರ ಪಡುಭಾಗಕ್ಕೆ ಸವಾರಿ, ಕಟ್ಟೆಪೂಜೆ ನಡೆಯುವುದು. 17ರಂದು ಬೆಳಗ್ಗೆ ಅಯ್ಯಂಗಾಯಿ ದರ್ಶನ ಬಲಿ, ನವಕಾಭಿಷೇಕ, ರಾತ್ರಿ ಶ್ರೀಭೂತಬಲಿ, ಕಟ್ಟೆಪೂಜೆ, ಶ್ರೀದೇವರ ರಥೋತ್ಸವ, ಬೆಡಿ ಸೇವೆ ನಡೆಯುವುದು. 18ರಂದು 1.30ಕ್ಕೆ ಶ್ರೀದೇವರ ಬಲಿ ಉತ್ಸವ, ಕಟ್ಟೆಪೂಜೆ, ಶ್ರೀದೇವರ ಅವಭೃತ ಸ್ನಾನ, ದರ್ಶನಬಲಿ, ರಾಜಾಂಗಣದಲ್ಲಿ ಪ್ರಸಾದ ವಿತರಣೆ, ಬಟ್ಟಲುಕಾಣಿಕೆ, ಧ್ವಜಾವರೋಹಣ ನಡೆಯುವುದು. 19ರಂದು ಶ್ರೀ ಪಿಲಿಚಾಮುಂಡಿ ದೈವದ ನೇಮೋತ್ಸವ ನಡೆಯುವುದು.

