ಕೊಚ್ಚಿ/ ಕಾಸರಗೋಡು: ರಾಜ್ಯದಲ್ಲಿ ಬಂದೂಕು ಪರವಾನಗಿಗಾಗಿ ಹೊಸದಾಗಿ ಅರ್ಜಿ ಸಲ್ಲಿಸುವವರಿಗೆ ಕೇಂದ್ರ ಶಸ್ತ್ರಾಸ್ತ್ರ ಕಾಯ್ದೆ 2016ರ ಅಡಿಯಲ್ಲಿ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡು ಸುರಕ್ಷತಾ ತರಬೇತಿಯನ್ನು ಪೊಲೀಸ್ ಇಲಾಖೆಗೆ ವಹಿಸುವಂತೆ ಕೇರಳ ಹೈಕೋರ್ಟ್ ಪೊಲೀಸ್ ಇಲಾಖೆಗೆ ಸೂಚಿಸಿದೆ.
ಕಾಸರಗೋಡಿನ ಯುವ ವಕೀಲ ಪ್ರದೀಪ್ ರಾವ್ ಮೇಪೋಡ್ ಅವರು ವಿಶೇಷ ಕಾಳಜಿಯಿಂದ ಸಲ್ಲಿಸಿದ ಅರ್ಜಿ ಪರಿಗಣಿಸಿ ರಾಜ್ಯ ಉಚ್ಚ ನ್ಯಾಯಾಯ ಈ ತೀರ್ಪು ನೀಡಿದೆ.
ಬಂದೂಕು ಪರವಾನಗಿಗಾಗಿ ಅರ್ಜಿದಾರರು ಮಾನ್ಯತೆ ಪಡೆದ ತರಬೇತುದಾರರಿಂದ ತರಬೇತಿ ಪ್ರಮಾಣಪತ್ರವನ್ನು ಹಾಜರುಪಡಿಸಬೇಕು ಎಂದು ಕೇಂದ್ರೀಯ ಶಸ್ತ್ರಾಸ್ತ್ರ ನಿಯಮಗಳು 2016 ಷರತ್ತು ವಿಧಿಸುತ್ತದೆ.
ಇತರ ವ್ಯವಸ್ಥೆಗಳನ್ನು ಮಾಡುವವರೆಗೆ ಎಲ್ಲಾ ರಾಜ್ಯಗಳ ಪೊಲೀಸ್ ಇಲಾಖೆಗಳು ಈ ರೀತಿಯಲ್ಲಿ ಈಗಾಗಲೇ ತರಬೇತಿಗೆ ಅನುಕೂಲ ಮಾಡುತ್ತಿದ್ದು, ಕೇರಳದಲ್ಲೂ ಮಾಡಿಕೊಡಬೇಕೆಂದು ಅರ್ಜಿದಾರರು ಮನವಿಮಾಡಿದ್ದರು.
ಇದಕ್ಕೆ ಸಂಬಂಧಿಸಿದತೆ ಯುವ ವಕೀಲ ಪ್ರದೀಪ್ ರಾವ್ ಮೇಪೋಟ್ ಹೈಕೋರ್ಟ್ ಮೆಟ್ಟಿಲೇರಿದ್ದರು.
ವನ್ಯಜೀವಿಗಳಿಂದ ಬೆಳೆಗಳನ್ನು ರಕ್ಷಿಸಲು ರೈತರು ಸೇರಿದಂತೆ ಪರವಾನಗಿಗಳಿಗಾಗಿ ಹೊಸ ಅರ್ಜಿಗಳ ತರಬೇತಿಯ ಪ್ರಮಾಣಪತ್ರ ನೀಡಬೇಕಾಗುತ್ತದೆ.
ಪ್ರದೀಪ್ ರಾವ್ ಅವರು ಪೋಲೀಸ್ ಇಲಾಖೆಗೆ ತರಬೇತಿಗಾಗಿ ಈ ಹಿಂದೆ ಮನವಿ ಮಾಡಿದ್ದು, ಇಲಾಖೆ ನಿರಾಕರಿಸಿತ್ತೆಂದು ಅರ್ಜಿಯಲ್ಲಿ ಸೂಚಿಸಿದ್ದರು. ಈ ಸಂಬಂಧ ಹೈಕೋರ್ಟ್ ರಾಜ್ಯ ಗೃಹ ಕಾರ್ಯದರ್ಶಿಗೆ ವಿವರಣೆ ಕೇಳಿತ್ತು.
ಪೊಲೀಸ್ ಇಲಾಖೆಯ ಅಡಿಯಲ್ಲಿಯೇ ತರಬೇತಿಗೆ ನಿಬಂಧನೆಗಳು ಮತ್ತು ನಿಯಮಗಳನ್ನು ರೂಪಿಸಬೇಕು ಎಂದು ಡಿಜಿಪಿ ಸರ್ಕಾರಕ್ಕೆ ಪ್ರಸ್ತಾವನೆಯನ್ನೂ ಸಲ್ಲಿಸಿದ್ದರು.
ಇವುಗಳ ಅನುಮೋದನೆ ಪಡೆದು ರಾಜ್ಯದಲ್ಲಿ ಹೊಸದಾಗಿ ಬಂದೂಕು ಪರವಾನಗಿಗೆ ಅರ್ಜಿ ಸಲ್ಲಿಸುವವರಿಗೆ ಇನ್ನು ತರಬೇತಿ ನೀಡಲಾಗುವುದು.
ಪ್ರದೀಪ್ ರಾವ್ ಮತ್ತು ಡಿಜಿಪಿ ಅವರನ್ನೊಳಗೊಂಡ ಮನವಿಯಲ್ಲಿ, ವನ್ಯಜೀವಿಗಳಿಂದ ತಮ್ಮ ಬೆಳೆಗಳನ್ನು ರಕ್ಷಿಸಲು ಬಯಸುವವರು ಸೇರಿದಂತೆ ರೈತರಿಂದ ಹೊಸ ಬಂದೂಕು ಪರವಾನಗಿಗಾಗಿ ಅರ್ಜಿಗಳನ್ನು ಸ್ವೀಕರಿಸಿದಾಗ, ತರಬೇತಿಯ ಪ್ರಮಾಣಪತ್ರವನ್ನು ನೀಡುವ ಹೊಣೆಗಾರಿಕೆಯನ್ನು ನಿರಾಕರಿಸಲಾಗಿತ್ತು.
ಕೇರಳದಲ್ಲಿ ಎಲ್ಲಿಯೂ ತರಬೇತಿ ಸೌಲಭ್ಯ ನೀಡದೆ ರಾಜ್ಯ ಸರ್ಕಾರದ ಇಲಾಖೆಗಳು ಬೇಜವಾವ್ದಾರಿ ಧೋರಣೆ ಅನುಸರಿಸುತ್ತಿದ್ದು, ಹೊರ ರಾಜ್ಯದಿಂದ ಪಡೆದವರೂ ಸಾಮಾನ್ಯ ಅರ್ಜಿದಾರರಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಪ್ರದೀಪ್ ರಾವ್ ದೂರಿನಲ್ಲಿ ತಿಳಿಸಿದ್ದಾರೆ.
10 ವರ್ಷಗಳಿಂದ ಗನ್ ಲೈಸೆನ್ಸ್ ಹೊಂದಿದ್ದ ಪ್ರದೀಪ್ ರಾವ್ ಹೊಸ ರಿವಾಲ್ವರ್ ಗಾಗಿ ಅರ್ಜಿ ಸಲ್ಲಿಸಿದ್ದು, ತರಬೇತಿ ಪ್ರಮಾಣ ಪತ್ರಕ್ಕಾಗಿ ಸಲ್ಲಿಸಿದ್ದ ಅರ್ಜಿಯನ್ನು ಜಿಲ್ಲಾ ಬಂದೂಕು ಪರವಾನಿಗೆ ಅಧಿಕಾರಿ ಮುಂದೂಡಿದ್ದರು. ಆ ಬಳಿಕ ಇವರು ಕೇರಳ ಹೈಕೋರ್ಟ್ ಮೆಟ್ಟಲೇರಿದ್ದರು.




