HEALTH TIPS

ಕೇಶ ಮುಂಡನ ಮಾಡಿ ಪ್ರತಿಭಟಿಸುವುದಾಗಿ ಶಿಕ್ಷಕರ ನಿರ್ಧಾರ:, ‘‘ಪಳನಿಗೆ ತೆರಳಿ;’’ ಎಂದು ವ್ಯಂಗ್ಯವಾಡಿದ ಶಾಸಕ ಕೆ.ಟಿ.ಜಲೀಲ್!!


       ತಿರುವನಂತಪುರ: ಶಾಸಕ ಕೆ.ಟಿ.ಜಲೀಲ್ ವಿರುದ್ಧ ಎಲ್‌ಪಿ ಶಾಲೆಯ ಶಿಕ್ಷಕರು ಸೆಕ್ರೆಟರಿಯೇಟ್ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ.  ಬೇಡಿಕೆಗಳನ್ನು ಅಂಗೀಕರಿಸದಿದ್ದರೆ ಕೇಶಮುಂಡನಗ್ಯೆದು ಪ್ರತಿಭಟನೆ ನಡೆಸುವುದಾಗಿ ಶಿಕ್ಷಕರು ತಿಳಿಸಿದ್ದು,  ಹಾಗಿದ್ದರೆ ‘ಪಳನಿಗೆ ತೆರಳಿ’ ಎಂದು ಕೆ.ಟಿ.ಜಲೀಲ್ ಹೇಳಿರುವುದು ಅಕ್ಷಮ್ಯ  ಎಂದು ಶಿಕ್ಷಕರು ತಿಳಿಸಿದರು.
       ಶಾಸಕರ ಪ್ರತಿಕ್ರಿಯೆ ಅವಮಾನಕರವಾಗಿದ್ದು, ಕೆ.ಟಿ.ಜಲೀಲ್ ಅವರ ಪ್ರತಿಕ್ರಿಯೆ ಮಹಿಳೆಯನ್ನು ಅವಮಾನಿಸುವುದನ್ನು ಮೀರಿದೆ ಎಂದು ಶಿಕ್ಷಕರು ಹೇಳಿದರು.  ಮಲಪ್ಪುರಂ ಜಿಲ್ಲೆಯಲ್ಲಿ ಶಿಕ್ಷಕರ ಹುದ್ದೆಗೆ ಅನುಗುಣವಾಗಿ ಕಿರು ಪಟ್ಟಿ ವಿಸ್ತರಣೆಗೆ ಆಗ್ರಹಿಸಿ ನಡೆಯುತ್ತಿರುವ ಶಿಕ್ಷಕರ ಮುಷ್ಕರ 95ನೇ ದಿನಕ್ಕೆ ಕಾಲಿಟ್ಟಿದೆ.  ಇದೇ ವೇಳೆ ಪ್ರತಿಭಟನಾಕಾರರು ಮೊನ್ನೆ  ಕೆ.ಟಿ.ಜಲೀಲ್ ಅವರನ್ನು ಭೇಟಿ ಮಾಡಿದ್ದರು.  ಆಗ ಶಾಸಕರು ಪ್ರತಿಭಟನಾಕಾರರನ್ನು ಅವಮಾನಿಸುವ ಹೇಳಿಕೆ ನೀಡಿದ್ದರು.
       ನ್ಯಾಯ ದೊರಕದಿದ್ದರೆ ಕೇಶ ಮುಂಡನ ಮಾಡುತ್ತೇವೆ ಎಂದು ಘೋಷಿಸಿದಾಗ ಕೆ.ಟಿ.ಜಲೀಲ್ ‘ನೀವು ಪಳನಿಗೆ ತೆರಳಿ’ ಎಂದು ವ್ಯಂಗ್ಯವಾಡಿದ್ದರು.  ಈ ಅವಮಾನವನ್ನು ಎಂದಿಗೂ ಸಹಿಸಲಾಗುವುದಿಲ್ಲ.  ಇದಕ್ಕೆಲ್ಲ ಪಿಎಸ್‌ಸಿ ಮತ್ತು ಸರಕಾರ ಉತ್ತರಿಸಬೇಕು.  ಇಲ್ಲಿ ಮಹಿಳಾ ಸಂಘಟನೆಗಳು, ಶಿಕ್ಷಕರ ಸಂಘಟನೆಗಳಿವೆ.  ಮಲಪ್ಪುರಂನಲ್ಲಿ ಶಿಕ್ಷಣಕ್ಕಾಗಿ ಹೋರಾಟ ನಡೆಸುತ್ತಿದ್ದೇವೆ ಎನ್ನುತ್ತಾರೆ ಪ್ರತಿಭಟನಾಕಾರರು.
      ಇದೇ ವೇಳೆ ಮುಷ್ಕರದ ಕುರಿತು ಮುಖ್ಯಮಂತ್ರಿಯವರನ್ನು ಮಾತನಾಡಿಸಿದಾಗ ಧರಣಿ ಮಾಡುವುದು ಹಕ್ಕು ಎಂದು  ಮುಖ್ಯಮಂತ್ರಿಯವರು ಜಾರಿಕೊಂಡರು. ಇತ್ತೊಬ್ಬ ಶಾಸಕರು, ಧರಣಿ ಮಾಡಲು ಹೇಳಿದ್ದು ಯಾರು ಎಂದು ಪ್ರಶ್ನೆ ಮಾಡಿದರು.  ಇಂತಹ ಅವಮಾನಗಳನ್ನು ಅನುಭವಿಸುತ್ತಿದ್ದೇವೆ ಎಂದು ಪ್ರತಿಭಟನಾಕಾರರು ಹೇಳಿದರು.
      ಎಲ್.ಪಿ.ಶಾಲೆ ಶಿಕ್ಷಕರ ಹುದ್ದೆ ಖಾಲಿಯಿದ್ದಲ್ಲಿ ಪರೀಕ್ಷೆಯ ದಿನಾಂಕದವರೆಗೆ ವರದಿಯಾಗಿರುವ ಹುದ್ದೆಗಳ ಸಂಖ್ಯೆ ಅಥವಾ ಹಿಂದಿನ ಪಟ್ಟಿಯಲ್ಲಿ ಶಿಫಾರಸು ಮಾಡಿರುವ ನೇಮಕಾತಿಗಳ ಸರಾಸರಿ ಸಂಖ್ಯೆಯನ್ನು ಮೂರು ಪಟ್ಟು ಹೆಚ್ಚಿಸಬೇಕು ಎಂಬುದು ನಿಯಮ.  ಆದರೆ ಮಲಪ್ಪುರಂ ಜಿಲ್ಲೆಯಲ್ಲಿ ಬುಡಮೇಲುಗೊಳಿಸಲಾಗುತ್ತಿದೆ ಎಂದು ಅಭ್ಯರ್ಥಿಗಳು ಆರೋಪಿಸಿದ್ದಾರೆ.
        3500ಕ್ಕೂ ಹೆಚ್ಚು ಮಂದಿ ಸೇರಬೇಕಿದ್ದ ಮಲಪ್ಪುರಂ ಜಿಲ್ಲೆಯಲ್ಲಿ 997 ಮಂದಿ ಮಾತ್ರ ಸೇರ್ಪಡೆಯಾಗಿದ್ದಾರೆ.  ಅತ್ಯಧಿಕ ಕಟ್ ಆಫ್ ಅಂಕಗಳನ್ನು ಪಡೆದಿರುವ ಮಲಪ್ಪುರಂ ಜಿಲ್ಲೆಯಲ್ಲಿ ಉತ್ತಮ ಅಂಕಗಳಿಸಿದರೂ ಕೆಲಸ ಸಿಗದಿರುವುದು ಬೀದಿಗಿಳಿದು ಹೋರಾಡ ಮಾಡಬೇಕಾದ ಸ್ಥಿತಿಗೆ ಕಾರಣವಾಯಿತು ಎಂದು ಅಭ್ಯರ್ಥಿಗಳು ಬೆಟ್ಟು ಮಾಡುತ್ತಾರೆ.  ಮುಖ್ಯಮಂತ್ರಿ ಸೇರಿದಂತೆ ಮನವಿ ಮಾಡಿದರೂ ಪರಿಹಾರ ಸಿಕ್ಕಿಲ್ಲ.  ಮಲಪ್ಪುರಂನಲ್ಲಿ ಮಾತ್ರ ಈ ಅನ್ಯಾಯವಾಗಿದೆ ಎನ್ನುತ್ತಾರೆ ಅಭ್ಯರ್ಥಿಗಳು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries