ತಾಯ್ತನವು ಯಾವಾಗಲೂ ಪ್ರೀತಿ ಮತ್ತು ವಾತ್ಸಲ್ಯದ ಪ್ರತೀಕವಾಗಿದೆ. ಈ ಚಿತ್ರವು ಅದನ್ನು ಸ್ಪಷ್ಟಪಡಿಸುತ್ತದೆ. ಮೃತಪಟ್ಟು ಕೆಲವು ದಿನಗಳ ನಂತರವೂ, ಕೊಳೆಯುತ್ತಿರುವ ಮಗುವಿನ ದೇಹವನ್ನು ಸೊಂಡಿಲಿನಲ್ಲಿ ಎತ್ತಿಹಿಡಿದು ಮೌನವಾಗಿ ನಡೆಯುತ್ತಿರುವ ತಾಯಿ ಆನೆಯೊಂದರ ಮನಕಲಕುವ, ಕಣ್ಣು ತೆರೆಸುವ ಚಿತ್ರ ಗಮನ ಸೆಳೆಯುತ್ತಿದೆ.
ಜೊತೆಗೆ ಇನ್ನೊಂದು ಹೆಣ್ಣಾನೆ ಮತ್ತು ಒಂದು ಪುಟ್ಟ ಆನೆಯೂ ಚಿತ್ರದಲ್ಲಿದೆ. ಮುನೀರ್ ತೋಳ್ ಪೆಟ್ಟಿ ಈ ಪೋಟೋವನ್ನು ಫೇಸ್‍ಬುಕ್‍ನಲ್ಲಿ ಹಂಚಿಕೊಂಡಿದ್ದಾರೆ. "ನಾನು ಎತ್ತಿಹಿಡಿದು ಸಾಗುತ್ತಿರುವುದು ಕೊಳೆತ ಮುದ್ದಿನ ನನ್ನ ಕನಸುಗಳನ್ನು. ಅವಳು ಹೇಳಿದ್ದು ನಮಗೆ ಹಂಚಿಕೊಳ್ಳಲು ಅಸಾಧ್ಯವಾದ ವಿಚಿತ್ರ ಭಾಷೆಯಲ್ಲಿ" ಎಂದು ಮುನೀರ್ ಮಾತು ಮುಗಿಸುತ್ತಾರೆ.




