ಕುಂಬಳೆ: ಕುಂಬಳೆ ಸನಿಹದ ಪುತ್ತೂರುಕೊಟ್ಯ ಶ್ರೀ ಧೂಮಾವತೀ ಕ್ಷೇತ್ರದಲ್ಲಿ ಶ್ರೀ ಧೂಮಾವತೀ ದೈವದ ಧರ್ಮನೇಮೋತ್ಸವ ಮಾ> 2ರಿಂದ 4ರ ವರೆಗೆ ಜರುಗಲಿದೆ. 2ರಂದು ಬೆಳಗ್ಗೆ ಗಣಪತಿ ಹವನ, ಸಂಜೆ ಭಜನೆ, 3ರಂದು ಬೆಳಗ್ಗೆ 11ಕ್ಕೆ ದೀಪಾರಾಧನೆ, ಮಧ್ಯಾಹ್ನ 2ಗಂಟೆಗೆ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ, ರಾತ್ರಿ 10ಕ್ಕೆ ಧಾರ್ಮಿಕ ಸಭೆ, 11ಕ್ಕೆ ತುಳುವೆರೆ ಉಡಲ್ ಜೋಡುಕಲ್ಲು ಅವರಿಂದ ಡಾ. ಸಂಜೀವ ದಂಡೆಕೇರಿ ವಿರಚಿತ ತುಳು ಸಾಮಾಜಿಕ ನಾಟಕ 'ಬಯ್ಯ ಮಲ್ಲಿಗೆ' ಪ್ರದರ್ಶನಗೊಳ್ಳುವುದು.
4ರಂದು ಮಧ್ಯಾಹ್ನ 2ಗಂಟೆಗೆ ದೀಪಾರಾಧನೆ, ಶ್ರೀ ಧೂಮಾವತೀ ದೈವದ ಧರ್ಮನೇಮ ನಡೆಯುವುದು.




