ಮಂಜೇಶ್ವರ: ಬಂಗ್ರಮಂಜೇಶ್ವರ ಶ್ರೀ ಕಾಳಿಕಾಪರಮೇಶ್ವರಿ ದೇವಾಲಯದಲ್ಲಿ ಶಿವರಾತ್ರಿ ಪ್ರಯುಕ್ತ ಓಜ ಸಾಹಿತ್ಯ ಕೂಟದ ವತಿಯಿಂದ 62ನೇ ವರ್ಷದ ಏಕಾಹ ಭಜನೋತ್ಸವಕ್ಕೆ ಮಂಗಳವಾರ ಮುಂಜಾನೆ ಚಾಲನೆ ನೀಡಲಾಯಿತು.
ಕ್ಷೇತ್ರದ ತಂತ್ರಿ ಬ್ರಹ್ಮಶ್ರೀ ಉಮೇಶ ತಂತ್ರಿ ಮಂಗಳೂರು ದೀಪ ಬೆಳಗಿಸಿ ಚಾಲನೆ ನೀಡಿದರು. ಕ್ಷೇತ್ರದ ಪ್ರಧಾನ ಅರ್ಚಕ ಪುರೋಹಿತ ಪ್ರಕಾಶ್ಚಂದ್ರ ಶ್ರೌತಿ, ಓಜ ಸಾಹಿತ್ಯ ಕೂಟದ ಅ|ಧ್ಯಕ್ಷ ಯು.ಅಶೋಕ ಆಚಾರ್ಯ ಉದ್ಯಾವರ, ಉಪಾಧ್ಯಕ್ಷ ಗಣೇಶ ಆಚಾರ್ಯ ರಾಮತ್ತಮಜಲು, ಕಾರ್ಯದರ್ಶಿ ಕುಡಾಲು ದಯಾಪ್ರಸನ್ನ ಆಚಾರ್ಯ ಹೊಸಬೆಟ್ಟು, ಕಾರ್ಯದರ್ಶಿಗಳಾದ ಚಿನ್ಮಯಾನಂದ ಆಚಾರ್ಯ ಹೊಸಮನೆ, ಕೃಷ್ಣಪ್ರಸಾದ ಆಚಾರ್ಯ ಹೊಸಂಗಡಿ, ತಾರಾನಾಥ ಆಚಾರ್ಯ ಕಡಂಬಾರು, ಬಿ.ಎಂ.ಪದ್ಮನಾಭ ಆಚಾರ್ಯ ಮಠದ ಬಳಿ, ಮಹಿಳಾ ಸಂಘದ ಅಧ್ಯಕ್ಷೆ ಭಾನುಮತಿ ಅನಂತ ಆಚಾರ್ಯ ಸಹಿತ ಪ್ರಮುಖರು ಉಪಸ್ಥಿತರಿದ್ದರು. ಬಳಿಕ ಕೇರಳ, ಕರ್ನಾಟಕಗಳ ಪ್ರಸಿದ್ದ ಭಜನಾ ತಂಡಗಳಿಂದ ಭಜನಾ ಸಂಕೀರ್ತನೆಗಳು ನಡೆಯಿತು. ಬುಧವಾರ ಸೂರ್ಯೋದಯಕ್ಕೆ ಮಂಗಳಾಚರಣೆ ನಡೆಯಿತು.




