ಮುಂಬೈ: 'ಕಲ್ಲಿದ್ದಲು ಕೊರತೆಯಿಂದ 12 ರಾಜ್ಯಗಳಲ್ಲಿ ವಿದ್ಯುತ್ ಬಿಕ್ಕಟ್ಟು ಎದುರಾಗುತ್ತಿದೆ' ಎಂದು ಮಹಾರಾಷ್ಟ್ರದ ಇಂಧನ ಸಚಿವ ನಿತಿನ್ ರಾವುತ್ ಹೇಳಿದರು.
0
samarasasudhi
ಏಪ್ರಿಲ್ 19, 2022
ಮುಂಬೈ: 'ಕಲ್ಲಿದ್ದಲು ಕೊರತೆಯಿಂದ 12 ರಾಜ್ಯಗಳಲ್ಲಿ ವಿದ್ಯುತ್ ಬಿಕ್ಕಟ್ಟು ಎದುರಾಗುತ್ತಿದೆ' ಎಂದು ಮಹಾರಾಷ್ಟ್ರದ ಇಂಧನ ಸಚಿವ ನಿತಿನ್ ರಾವುತ್ ಹೇಳಿದರು.
ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾವುತ್, 'ನಮ್ಮ ಇಲಾಖೆಯು ಸೂಕ್ಷ್ಮ ಹಂತದ ಯೋಜನೆಯೊಂದಿಗೆ ವಿದ್ಯುತ್ ಕೊರತೆಯನ್ನು ತಗ್ಗಿಸಲು ಕೆಲಸ ಮಾಡುತ್ತಿದೆ.
'ಕೆಂದ್ರ ಸರ್ಕಾರವು ಕಲ್ಲಿದ್ದಲು ಆಮದನ್ನು ನಿಲ್ಲಿಸಿರುವುದರಿಂದ ದೇಶವು ಕಲ್ಲಿದ್ದಲು ಕೊರತೆ ಅನುಭವಿಸುತ್ತಿದೆ. ಆದ್ದರಿಂದ ರಾಜ್ಯ ಸ್ವಾಮ್ಯದ ಮಹಾಜೆಂಕೋ 8 ಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಗುರಿ ಹೊಂದಿದೆ. ರಾಜ್ಯ ಸರ್ಕಾರವು ಒಂದು ಲಕ್ಷ ಮೆಟ್ರಿಕ್ ಟನ್ ಕಲ್ಲಿದ್ದಲು ಆಮದು ಮಾಡಿಕೊಳ್ಳಲು ಗುತ್ತಿಗೆ ಆದೇಶ ನೀಡಿದೆ' ಎಂದು ರಾವುತ್ ಮಾಹಿತಿ ನೀಡಿದರು.