ನವದೆಹಲಿ: ಕೋವಿಡ್ ಸಂಬಂಧಿತ ಸೇವೆಗೆ ನಿಯೋಜಿತರಾಗಿರುವ ಆರೋಗ್ಯ ಕ್ಷೇತ್ರದ ಸಿಬ್ಬಂದಿಗೆ ರೂಪಿಸಿದ್ದ ವಿಮಾ ಯೋಜನೆಯ ಅವಧಿಯನ್ನು ಕೇಂದ್ರ ಸರ್ಕಾರ ಇನ್ನೂ ಆರು ತಿಂಗಳ ಕಾಲ ವಿಸ್ತರಿಸಿದೆ.
0
samarasasudhi
ಏಪ್ರಿಲ್ 19, 2022
ನವದೆಹಲಿ: ಕೋವಿಡ್ ಸಂಬಂಧಿತ ಸೇವೆಗೆ ನಿಯೋಜಿತರಾಗಿರುವ ಆರೋಗ್ಯ ಕ್ಷೇತ್ರದ ಸಿಬ್ಬಂದಿಗೆ ರೂಪಿಸಿದ್ದ ವಿಮಾ ಯೋಜನೆಯ ಅವಧಿಯನ್ನು ಕೇಂದ್ರ ಸರ್ಕಾರ ಇನ್ನೂ ಆರು ತಿಂಗಳ ಕಾಲ ವಿಸ್ತರಿಸಿದೆ.
ಯೋಜನೆಯಡಿ ಈವರೆಗೆ 1,905 ಕ್ಲೇಮುಗಳನ್ನು ಇತ್ಯರ್ಥಪಡಿಸಲಾಗಿದೆ.
ಕೋವಿಡ್ ಸೇವೆಗೆ ನಿಯೋಜಿತರಾದ ಆರೋಗ್ಯ ಕ್ಷೇತ್ರದ ಸಿಬ್ಬಂದಿಗೆ ವಿಮಾ ಭದ್ರತೆ ಒದಗಿಸಲು ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಪ್ಯಾಕೇಜ್ (ಪಿಎಂಜಿಕೆಪಿ) ಅನ್ನು ಮಾರ್ಚ್ 30, 2020ರಲ್ಲಿ ಆರಂಭಿಸಲಾಗಿತ್ತು. ಒಟ್ಟು ₹ 50 ಲಕ್ಷವರೆಗಿನ ವಿಮಾ ಭದ್ರತೆಯನ್ನು ಈ ಯೋಜನೆಯಡಿ ಒದಗಿಸಲಾಗುತ್ತದೆ.