HEALTH TIPS

ಶ್ರೀನಗರ: ಕೇಬಲ್‌ ಟಿವಿ ಇಲ್ಲದ ಕಡೆ 1.5 ಲಕ್ಷ ಉಚಿತ ಡಿಡಿ ಡಿಶ್‌ ವಿತರಣೆ ಗುರಿ

        ಶ್ರೀನಗರ: ಕೇಬಲ್‌ ಟಿವಿ ಸಂಪರ್ಕವಿಲ್ಲದ ಪ್ರದೇಶಗಳಲ್ಲಿ 1.5 ಲಕ್ಷ ಉಚಿತ ಡಿಡಿ ಡಿಶ್‌ ಆಂಟೆನಾಗಳನ್ನು ವಿತರಿಸಲು ಸರ್ಕಾರ ಮುಂದಾಗಿದೆ ಎಂದು ಮಾಹಿತಿ ಮತ್ತು ಪ್ರಸಾರ ಇಲಾಖೆಯ ಕಾರ್ಯದರ್ಶಿ ಅಪೂರ್ವ ಚಂದ್ರ ಅವರು ಮಂಗಳವಾರ ತಿಳಿಸಿದ್ದಾರೆ.

             ಗಾಂದರ್‌ಬಾಲ್‌ ಜಿಲ್ಲೆಯ ಕಂಗನ್‌ ಪ್ರದೇಶಕ್ಕೆ ಭೇಟಿ ನೀಡಿದ್ದ ಅಪೂರ್ವ ಚಂದ್ರ ಅವರು ಈ ಪ್ರದೇಶದಲ್ಲಿ ಉಚಿತ ಡಿಡಿ ಡಿಶ್‌ ವಿತರಿಸಿ ಮಾತನಾಡಿದರು.

              'ಗಡಿ ಪ್ರದೇಶದ ಬಹಳ ದೂರದ ಪ್ರದೇಶಗಳಲ್ಲಿ, ಕೇಬಲ್‌ ಟಿವಿ ಸಂಪರ್ಕ ಹೊಂದಿರದ ಸ್ಥಳಗಳಲ್ಲಿ ಬದುಕುತ್ತಿರುವವರಿಗೆ ಟಿವಿ ಸಂಪರ್ಕವನ್ನು ಒದಗಿಸಲು ಸುಮಾರು 1.5 ಲಕ್ಷ ಉಚಿತ ಡಿಡಿ ಡಿಶ್‌ಗಳನ್ನು ವಿತರಿಸುವ ಯೋಚನೆಯನ್ನು ಸರ್ಕಾರ ಹೊಂದಿದೆ. ಟೆಂಡರ್‌ ನೀಡುವ ಪ್ರಕ್ರಿಯೆ ನಡೆಯುತ್ತಿದ್ದು, ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ' ಎಂದು ಅಪೂರ್ವ ಚಂದ್ರ ತಿಳಿಸಿದರು.

           ಇದೇ ವೇಳೆ, ಹಲವು ಸವಾಲುಗಳ ಮಧ್ಯೆ 'ದೂರದರ್ಶನ ಕೇಂದ್ರ ಶ್ರೀನಗರ'ದ ಕಾರ್ಯನಿರ್ವಹಣೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries