HEALTH TIPS

ದೇಶಿ ನಿರ್ಮಿತ ಪಿಸ್ತೂಲ್​ ಇಟ್ಟುಕೊಂಡು ಓಡಾಡ್ತಿದ್ದ ಶಿಕ್ಷಕಿಯ ಬಂಧನ

           ಮೈನ್​ಪುರಿ: ಶಿಕ್ಷಕಿಯೊಬ್ಬರ ಬಳಿ ದೇಶಿ ನಿರ್ಮಿತ ಪಿಸ್ತೂಲ್​ ಪತ್ತೆಯಾಗಿರುವ ಘಟನೆ ಉತ್ತರ ಪ್ರದೇಶದ ಮೈನ್​ಪುರಿಯಲ್ಲಿ ನಿನ್ನೆ (ಏ.13) ನಡೆದಿರುವುದಾಗಿ ಪೊಲೀಸರು ಇಂದು ಮಾಹಿತಿ ನೀಡಿದ್ದಾರೆ.

         ಶಿಕ್ಷಕಿಯನ್ನು ಬಂಧಿಸಲಾಗಿದ್ದು, ಆಕೆಯನ್ನು ಕೃಷ್ಣಮಾ ಸಿಂಗ್​ ಯಾದವ್​ ಎಂದು ಗುರುತಿಸಲಾಗಿದೆ.

            ಈಕೆ ಫಿರೋಜಾಬಾದ್​ನ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೆಲಸದ ಮೇಲೆ ನಿನ್ನೆ ಮೈನ್​ಪುರಿಗೆ ಬಂದಿರುವಾಗ ಪಿಸ್ತೂಲ್​ ಪತ್ತೆಯಾಗಿದೆ.

              ಮೈನ್​ಪುರಿಯ ಕೊಟ್ವಾಲಿ ಏರಿಯಾದಲ್ಲಿ ಮಹಿಳೆಯೊಬ್ಬಳು ಪಿಸ್ತೂಲ್​ ಹಿಡಿದು ಅನುಮಾನಾಸ್ಪದವಾಗಿ ಓಡಾಡುತ್ತಿದ್ದಾಳೆ ಎಂಬ ಮಾಹಿತಿ ದೊರೆತ ಬೆನ್ನಲ್ಲೇ ಪೊಲೀಸರು ಆಕೆಯನ್ನು ಹುಡುಕಾಡಿ ಪಿಸ್ತೂಲ್​ ಮತ್ತು ಆಕೆಯನ್ನು ವಶಕ್ಕೆ ಪಡೆದುಕೊಂಡರು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಮಹಿಳಾ ಕಾನ್ಸ್​ಟೇಬಲ್​ ಒಬ್ಬರು ನೀಲಿ ಬಣ್ಣದ ಜೀನ್ಸ್​ ಧರಿಸಿರುವ ಶಿಕ್ಷಕಿಯ ಜೇಬಿನಿಂದ 315 ಬೋರ್​ ದೇಶಿ ನಿರ್ಮಿತ ಪಿಸ್ತೂಲ್​ ಅನ್ನು ವಶಕ್ಕೆ ಪಡೆದುಕೊಂಡು ದೃಶ್ಯವಿದೆ.

               ಆರೋಪಿ ಶಿಕ್ಷಕಿಯನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದ್ದು, ಭಾರತೀಯ ದಂಡ ಸಂಹಿತೆಯ ಸೂಕ್ತ ಸೆಕ್ಷನ್​ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಪಿಸ್ತೂಲ್​ ಸಾಗಿಸುತ್ತಿದ್ದರ ಹಿಂದಿನ ಕಾರಣ ತಿಳಿಯಲು ತನಿಖೆ ಆರಂಭವಾಗಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries