ಕಾಸರಗೋಡು: ಕೇರಳ ಒಲಿಂಪಿಕ್ ಅಸೋಸಿಯೇಶನ್‍ನ ಕೇರಳ ಜರ್ನಲಿಸ್ಟ್ಸ್ ಯೂನಿಯನ್ ಕೇರಳ ಮೀಡಿಯಾ ಅಕಾಡೆಮಿಯ ಕಾಸರಗೋಡು ಜಿಲ್ಲಾ ಮಟ್ಟದ ಕೇರಳ ಕ್ರೀಡಾಕೂಟದ ಪ್ರಚಾರಕ್ಕಾಗಿ ಆಯೋಜಿಸಿದ್ದ ಫೆÇೀಟೊ ವಾಹನ ಪ್ರವಾಸವು ಕಾಞಂಗಾಡ್‍ನ ಹಳೇ ಬಸ್ ನಿಲ್ದಾಣ ವಠಾರದಲ್ಲಿ ಭಾನುವಾರ ಸಮಾರೋಪಗೊಂಡಿತು.
ಸಮಾರೋಪ ಸಮಾರಂಭವನ್ನು ಜಿಲ್ಲಾ ಒಲಿಂಪಿಕ್ಸ್ ಅಸೋಸಿಯೇಷನ್‍ಅಧ್ಯಕ್ಷ ಟಿ.ವಿ.ಬಾಲನ್ ಕಾರ್ಯಕ್ರಮ ಉದ್ಘಾಟಿಸಿದರು. ಕಾಸರಗೋಡು ಪ್ರೆಸ್ ಕ್ಲಬ್ ಕಾರ್ಯದರ್ಶಿ ಕೆ.ವಿ.ಪದ್ಮೇಶ್ ಅಧ್ಯಕ್ಷತೆ ವಹಿಸಿದ್ದರು. ಒಲಿಂಪಿಕ್ ಅಸೋಸಿಯೇಶನ್ ಜಿಲ್ಲಾ ಕಾರ್ಯದರ್ಶಿ ಎಂ.ಅಚ್ಯುತನ್ ಮಾಸ್ಟರ್, ಸ್ಪೋಟ್ರ್ಸ್ ಕೌನ್ಸಿಲ್ ಕಾರ್ಯಕಾರಿ ಸದಸ್ಯರಾದ ನಾರಾಯಣನ್ ಪಲ್ಲಂ, ಕೆ.ಸಿ.ಸದಾಶಿವನ್, ಗಂಗಾಧರನ್.ಪಿ., ಮುಜೀಬ್ ಮಂಗಾಡ್, ಎಂ.ವಿ.ಪ್ರತೀಶ್, ಇ.ವಿ.ಜಯಕೃಷ್ಣನ್ ಉಪಸ್ಥಿತರಿದ್ದರು.
ಈ ಸಂದರ್ಭ ಕೇರಳದ ಫೆÇೀಟೋಕ್ರೀಡಾ ಮೇಳಗಳಿಂದ ಪತ್ರಕರ್ತರು ಸೆರೆಹಿಡಿದ ಅಪರೂಪದ ಕ್ಷಣಗಳ ಚಿತ್ರಗಳ ಪ್ರದರ್ಶನ ನಡೆಯಿತು.





