HEALTH TIPS

ಯೋಗಿ ಸರ್ಕಾರದ ವಿರುದ್ಧ ಹೇಳಿಕೆ ನೀಡಿದ್ದ ಎಸ್‌ಪಿ ಶಾಸಕನ ಪೆಟ್ರೋಲ್‌ ಪಂಪ್‌ ಧ್ವಂಸ

              ಬರೇಲಿ: ಸಮಾಜವಾದಿ ಪಕ್ಷದ ಶಾಸಕ ಶಾಜಿಲ್ ಇಸ್ಲಾಂ ಅನ್ಸಾರಿ ಎಂಬುವವರು ಅಕ್ರಮವಾಗಿ ನಿರ್ಮಿಸಿದ್ದಾರೆ ಎನ್ನಲಾದ ಪೆಟ್ರೋಲ್ ಪಂಪ್‌ ಅನ್ನು ಗುರುವಾರ ಧ್ವಂಸಗೊಳಿಸಲಾಗಿದೆ.    

                ಕುತೂಹಲಕಾರಿ ಸಂಗತಿಯೆಂದರೆ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಸರ್ಕಾರವನ್ನು ಗುರಿಯಾಗಿಸಿಕೊಂಡು ಶಾಸಕ ಅನ್ಸಾರಿ ಇತ್ತೀಚೆಗೆ ಪ್ರಚೋದನಕಾರಿ ಹೇಳಿಕೆ ನೀಡಿದ್ದರು.

             ಅದಾದ ಕೆಲವೇ ದಿನಗಳಲ್ಲಿ ಅನ್ಸಾರಿ ಅವರ ಪೆಟ್ರೋಲ್‌ ಪಂಪ್‌ ಧ್ವಂಸಗೊಂಡಿರುವುದು ಅನುಮಾನಕ್ಕೆ ಕಾರಣವಾಗಿದೆ.

            ಬರೇಲಿ-ದೆಹಲಿ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಪರ್ಸಖೇಡಾದಲ್ಲಿನ ಪೆಟ್ರೋಲ್‌ ಪಂಪ್‌ ಅನ್ನು ಬುಲ್ಡೋಜರ್ ಬಳಸಿ ಬರೇಲಿ ಅಭಿವೃದ್ಧಿ ಪ್ರಾಧಿಕಾರವು(ಬಿಡಿಎ) ಕೆಡವಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

            ಬಿಡಿಎ ಉಪಾಧ್ಯಕ್ಷ ಜೋಗೇಂದ್ರ ಸಿಂಗ್ ಮಾತನಾಡಿ, ಅನ್ಸಾರಿ ಅವರ ಪೆಟ್ರೋಲ್ ಪಂಪ್ ಅಕ್ರಮ. ಈ ಸಂಬಂಧ ಈಗಾಗಲೇ ನೋಟಿಸ್ ಜಾರಿ ಮಾಡಲಾಗಿತ್ತು. ಆದರೆ, ಉತ್ತರ ಬಂದಿರಲಿಲ್ಲ ಎಂದು ತಿಳಿಸಿದರು.

             ಸರ್ಕಾರದ ವಿರುದ್ಧ ಅನ್ಸಾರಿ ಇತ್ತೀಚೆಗೆ ನೀಡಿದ್ದ ಹೇಳಿಕೆ ಸಂಬಂಧ ಬರೇಲಿಯ ಬರದರಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು.

          ಕಳೆದ ಶುಕ್ರವಾರ ತಮ್ಮ ಕ್ಷೇತ್ರದಲ್ಲಿ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ್ದ ಅನ್ಸಾರಿ, 'ವಿಧಾನಸಭೆಯಲ್ಲಿ ನಮ್ಮ ಪಕ್ಷದ ಬಲ ಹೆಚ್ದಾಗಿದೆ. ಆದಿತ್ಯನಾಥ್ ಸದ್ದು ಮಾಡಿದರೆ, ಎಸ್‌ಪಿ ಬಂದೂಕುಗಳು ಕೇವಲ ಹೊಗೆ ಹೊರಸೂಸುವುದಿಲ್ಲ, ಬದಲಿಗೆ ಬುಲೆಟ್‌ಗಳು ಹಾರಲಿವೆ' ಎಂದು ಹೇಳಿದ್ದರು.
‌               ಇದಾಗಿ ವಾರ ಕಳೆಯುವುದರ ಒಳಗಾಗಿ ಅನ್ಸಾರಿ ಅವರ ಪೆಟ್ರೋಲ್‌ ಪಂಪ್‌ ಅನ್ನು ಸ್ಥಳೀಯ ಪ್ರಾಧಿಕಾರ ಧ್ವಂಸಗೊಳಿಸಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries