ನವದೆಹಲಿ: ಕಳೆದ ಕೆಲವು ದಿನಗಳಿಂದ ಭಾರತದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಸೌದಿ ಅರೇಬಿಯಾ ಸರ್ಕಾರ ತನ್ನ ರಾಷ್ಟ್ರದ ಪ್ರಜೆಗಳು ಭಾರತ ಸೇರಿದಂತೆ 15 ದೇಶಗಳಿಗೆ ತೆರಳದಂತೆ ನಿರ್ಬಂಧ ವಿಧಿಸಿದೆ.
0
samarasasudhi
ಮೇ 23, 2022
ನವದೆಹಲಿ: ಕಳೆದ ಕೆಲವು ದಿನಗಳಿಂದ ಭಾರತದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಸೌದಿ ಅರೇಬಿಯಾ ಸರ್ಕಾರ ತನ್ನ ರಾಷ್ಟ್ರದ ಪ್ರಜೆಗಳು ಭಾರತ ಸೇರಿದಂತೆ 15 ದೇಶಗಳಿಗೆ ತೆರಳದಂತೆ ನಿರ್ಬಂಧ ವಿಧಿಸಿದೆ.
ದೇಶದ ಪ್ರಜೆಗಳು ಭಾರತ ಸೇರಿದಂತೆ 15 ದೇಶಗಳಿಗೆ ಪ್ರಯಾಣ ಬೆಳೆಸುವಂತಿಲ್ಲ ಎಂದು ಸೌದಿ ಅರೇಬಿಯಾ ಸರ್ಕಾರದ ಪಾಸ್‌ಪೋರ್ಟ್ ಇಲಾಖೆ ಅದೇಶ ಹೊರಡಿಸಿದೆ.
ಭಾರತ ಸೇರಿದಂತೆ ಲೆಬನಾನ್, ಸಿರಿಯಾ, ಟರ್ಕಿ, ಅಫ್ಘಾನಿಸ್ತಾನ, ಯೆಮನ್, ಸೊಮಾಲಿಯಾ, ಇಥಿಯೋಪಿಯ, ಕಾಂಗೊ, ಲಿಬಿಯಾ, ಇಂಡೋನೇಶಿಯಾ, ವಿಯಾಟ್ನಂ, ಅರ್ಮೇನಿಯ, ಬೆಲಾರಸ್ ಮತ್ತು ವೆನಿಜುಲಾ ದೇಶಗಳಿಗೆ ತೆರಳದಂತೆ ಸೌದಿ ಅರೇಬಿಯಾ ಸರಕಾರ ನಿರ್ಬಂಧ ವಿಧಿಸಿದೆ.
ಜಾಗತಿಕವಾಗಿ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿದೆ. ಚೀನಾದಲ್ಲಿ ಪ್ರಕರಣಗಳ ಸಂಖ್ಯೆ ಏರು ಮುಖದಲ್ಲಿದೆ. ಅಲ್ಲಿನ ಕೆಲವು ನಗರಗಳಲ್ಲಿ ಲಾಕ್‌ಡೌನ್ ವಿಧಿಸಲಾಗಿದೆ.
ಉತ್ತರ ಕೋರಿಯಾದಲ್ಲೂ ಕೋವಿಡ್ ಪ್ರಕರಣಗಳು ಪತ್ತೆಯಾಗಿರುವುದರಿಂದ ಅಲ್ಲಿ ಸಂಪೂರ್ಣ ಲಾಕ್‌ಡೌನ್ ಘೋಷಣೆ ಮಾಡಲಾಗಿದೆ. ಈ ನಡುವೆ ಕೆಲ ಆಫ್ರಿಕನ್-ಯುರೋಪ್ ದೇಶಗಳಲ್ಲಿ ಮಂಕಿ ಫಾಕ್ಸ್ ವೈರಸ್ ಹರಡುತ್ತಿರುವುದರಿಂದ ಮಂಜಾಗ್ರತೆಯಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸೌದಿ ಅರೇಬಿಯಾ ತಿಳಿಸಿದೆ.