HEALTH TIPS

ಸಾಮಾಜಿಕ ಮಾಧ್ಯಮಗಳಲ್ಲಿ 'ಯೋಗ ದಿನ' ನೇರ ಪ್ರಸಾರ

              ನವದೆಹಲಿ: ಈ ವರ್ಷದ ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ದೊಡ್ಡ ಆಕರ್ಷಣೆ ಎಂದರೆ ಸುಮಾರು 18ರಿಂದ 20 ದೇಶಗಳ ಯೋಗ ‍ಪ್ರದರ್ಶನ ಕಾರ್ಯಕ್ರಮ ಸಾಮಾಜಿಕ ಮಾಧ್ಯಮಗಳಲ್ಲಿ 'ಗಾರ್ಡಿಯನ್‌ ರಿಂಗ್‌ ಪ್ರೋಗ್ರಾಂ' (ನೇರ ಕಾರ್ಯಕ್ರಮ) ರೀತಿಯಲ್ಲಿ ಪ್ರಸಾರವಾಗಲಿದೆ.

           ಆಯುಷ್ ಸಚಿವಾಲಯವು ಇದಕ್ಕೆ ವಿದೇಶಾಂಗ ಸಚಿವಾಲಯದ ಸಮ್ಮತಿಯನ್ನು ಕೋರಿದೆ. ಅಂತರರಾಷ್ಟ್ರೀಯ ಯೋಗ ದಿನವಾದ ಜೂನ್ 21ರಂದು ಮೈಸೂರಿನಲ್ಲಿ ನಡೆಯುವ ಸಾಮೂಹಿಕ ಯೋಗ ಪ್ರದರ್ಶನ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ. ಕೋವಿಡ್‌ 19 ಸಾಂಕ್ರಾಮಿಕದಿಂದಾಗಿ ಎರಡು ವರ್ಷಗಳ ನಂತರ ಸಾಮೂಹಿಕ ಯೋಗ ಪ್ರದರ್ಶನವನ್ನು ಭೌತಿಕವಾಗಿ ನಡೆಸಲಾಗುತ್ತಿದೆ.

               ವಿವಿಧ ದೇಶಗಳ ವಿವಿಧ ಸಮಯ, ವಲಯಗಳಲ್ಲಿ ನಡೆಯುವ ಯೋಗ ಕಾರ್ಯಕ್ರಮಗಳ 20ರಿಂದ 30 ಆಯ್ದ ವಿಡಿಯೊಗಳನ್ನು 'ಗಾರ್ಡಿಯನ್ ರಿಂಗ್ ಪ್ರೋಗ್ರಾಂ'ನಲ್ಲಿ ಒಟ್ಟಿಗೆ ಬೆಸೆದು, ಸಾಮಾಜಿಕ ಮಾಧ್ಯಮಗಳಲ್ಲಿ 18 ರಿಂದ 20 ಗಂಟೆ ಅವಧಿ ನಿರಂತರ ಪ್ರಸಾರ ಮಾಡಲಾಗುತ್ತದೆ. ಹಿಂದಿನ ವರ್ಷಗಳಂತೆ ಅಂತರಾಷ್ಟ್ರೀಯ ಯೋಗ ದಿನ ಆಚರಿಸಿದ ರೀತಿಯಲ್ಲೇ ಯೋಗ ಚಟುವಟಿಕೆಗಳು, ಚಿಕ್ಕ ಕಾರ್ಯಕ್ರಮಗಳು, ಭಾಷಣಗಳು, ಸ್ಥಳೀಯ ಸೆಲೆಬ್ರಿಟಿಗಳು ಭಾಗವಹಿಸುವ ಯೋಗ ಪ್ರದರ್ಶನಗಳ ವಿಡಿಯೊಗಳು ಇದರಲ್ಲಿರಲಿವೆ ಎಂದು ಅಧಿಕೃತ ಮೂಲಗಳು ಹೇಳಿವೆ.

               ಯೋಗ ದಿನಾಚರಣೆಯ ನೇರ ಪ್ರಸಾರ ಜಪಾನ್‌ನಿಂದ ಸ್ಥಳೀಯ ಕಾಲಮಾನ ಬೆಳಿಗ್ಗೆ 6 ಗಂಟೆಗೆ ಪ್ರಾರಂಭವಾಗಲಿದೆ. ನಂತರ, ವಿದೇಶದ ರಾಯಭಾರ ಕಚೇರಿಗಳ ಕಾರ್ಯಕ್ರಮಗಳು ಅಲ್ಲಿನ ಸಮಯ, ವಲಯಗಳ ಆಧಾರದ ಮೇಲೆ ಪ್ರಸಾರವಾಗಲಿದೆ. ನ್ಯೂಜಿಲೆಂಡ್‌ನಲ್ಲಿನ ಯೋಗ ಕಾರ್ಯಕ್ರಮದ ಮೂಲಕ ಇದು ಸಮಾಪನವಾಗಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries