ನವದೆಹಲಿ: ವಿವಿಧ ರಾಜ್ಯಗಳ ನಡುವಣ ವಿವಾದಗಳನ್ನು ಪರಿಶೀಲಿಸುವ ಹಾಗೂ ಸಲಹೆ ನೀಡುವ ಅಂತರ ರಾಜ್ಯ ಮಂಡಳಿಯನ್ನು ಪುನರ್ ರಚಿಸಲಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಅಧ್ಯಕ್ಷರಾಗಿದ್ದಾರೆ.
0
samarasasudhi
ಮೇ 23, 2022
ನವದೆಹಲಿ: ವಿವಿಧ ರಾಜ್ಯಗಳ ನಡುವಣ ವಿವಾದಗಳನ್ನು ಪರಿಶೀಲಿಸುವ ಹಾಗೂ ಸಲಹೆ ನೀಡುವ ಅಂತರ ರಾಜ್ಯ ಮಂಡಳಿಯನ್ನು ಪುನರ್ ರಚಿಸಲಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಅಧ್ಯಕ್ಷರಾಗಿದ್ದಾರೆ.
ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು 6 ಕೇಂದ್ರ ಸಚಿವರು ಅದರ ಸದಸ್ಯರಾಗಿದ್ದಾರೆ.
ಹಾಗೆಯೇ ಅಂತರ ರಾಜ್ಯ ಮಂಡಳಿಯ ಸ್ಥಾಯಿ ಸಮಿತಿಯನ್ನೂ ಪುನರ್‌ರಚನೆ ಮಾಡಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಅದರ ಅಧ್ಯಕ್ಷರಾಗಿದ್ದಾರೆ.
ನಿರ್ಮಲಾ ಸೀತಾರಾಮನ್, ನರೇಂದ್ರ ಸಿಂಗ್ ತೋಮರ್, ವಿರೇಂದ್ರ ಕುಮಾರ್ ಮತ್ತು ಗಜೇಂದ್ರ ಸಿಂಗ್ ಶೆಖಾವತ್ ಅವರೂ ಸ್ಥಾಯಿ ಸಮಿತಿ ಸದಸ್ಯರಾಗಿದ್ದಾರೆ. ಹಾಗೆಯೇ ಆಂಧ್ರಪ್ರದೇಶ, ಅಸ್ಸಾ' ಬಿಹಾರ, ಗುಜರಾತ್, ಮಹಾರಾಷ್ಟ್ರ, ಒಡಿಶಾ, ಪಂಜಾಬ್ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿಗಳೂ ಇದ ಸದಸ್ಯರಾಗಿದ್ದಾರೆ ಎಂದು ತಿಳಿಸಿದೆ.