HEALTH TIPS

ರಾಷ್ಟ್ರೀಯ ತೆಂಗಿನ ಸಮುದಾಯ (ಐಸಿಸಿ): ಕಾಸರಗೋಡಿನಲ್ಲಿ ಕಾರ್ಯಾಗಾರ ಸಂಪನ್ನ

                   ಕಾಸರಗೋಡು: ರಾಷ್ಟ್ರೀಯ ತೆಂಗಿನ ಸಮುದಾಯ (ಐಸಿಸಿ) ಐದು ದಿನಗಳ ಕಾರ್ಯಾಗಾರ ಕಾಸರಗೋಡು ಬೇಕಲದ ಲಲಿತ್ ರೆಸಾರ್ಟ್ ಸಭಾಂಗಣದಲ್ಲಿ ಜರುಗಿತು. ಐಸಿಎಆರ್‍ನ ತೋಟಗಾರಿಕಾ ವಿಜ್ಞಾನದ ಉಪ ಮಹಾನಿರ್ದೇಶಕ ಡಾ.ಎ.ಕೆ ಸಿಂಗ್ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಸಿಪಿಸಿಆರ್‍ಐನಲ್ಲಿ 1984 ರಲ್ಲಿ ಎಲೆಯ ಮಾರ್ಗದಿಂದ ತೆಂಗಿನ ಅಂಗಾಂಶ ಕೃಷಿ ಸಸ್ಯಗಳನ್ನು ಉತ್ಪಾದಿಸಿದ ಮೊದಲ ದೇಶ ಭಾರತವಾಗಿದೆ. ಅದರ ಪರಿಣಾಮವಾಗಿ ಪ್ರಪಂಚದಾದ್ಯಂತ ಅನೇಕ ಪ್ರಯೋಗಾಲಯಗಳಲ್ಲಿ ಅಂಗಾಂಶ ಕೃಷಿ ಕಾರ್ಯವನ್ನು ಪ್ರಾರಂಭಿಸಲಾಯಿತು, ಆದರೆ ವಾಣಿಜ್ಯಿಕವಾಗಿ ಕಾರ್ಯಸಾಧ್ಯವಾದ ಪೆÇ್ರೀಟೋಕಾಲ್ ಅನ್ನು ಇನ್ನೂ ಅಭಿವೃದ್ಧಿಪಡಿಸಲಾಗಿಲ್ಲ. ವಿವಿಧ ದೇಶಗಳಿಂದ ವರದಿಯಾಗಿರುವ ತೆಂಗಿನ ಅಂಗಾಂಶ ಕೃಷಿಯ ಯಶಸ್ಸನ್ನು ಸುಧಾರಿಸಲು ಐಸಿಸಿಯ ಆಶ್ರಯದಲ್ಲಿ ನೆಟ್‍ವರ್ಕ್ ಸಂಶೋಧನಾ ಕಾರ್ಯಕ್ರಮವನ್ನು ಪ್ರಾರಂಭಿಸಬೇಕಾಗಿದೆ ಎಂದು ತಿಳಿಸಿದರು.

                   ಐಸಿಸಿಯ ಕಾರ್ಯನಿರ್ವಾಹಕ ನಿರ್ದೇಶಕಿ ಡಾ. ಜೆಲ್ಫಿನಾ ಸಿ. ಅಲೌವ್ ಮಾತನಾಡಿ, ಎಲ್ಲಾ ತೆಂಗು ಬೆಳೆಯುವ ದೇಶಗಳಿಗೆ ಲಭ್ಯವಾಗುವಂತೆ ಮಾಡುವ ಸಾಮಾನ್ಯ ಪೆÇ್ರೀಟೋಕಾಲನ್ನು ಅಭಿವೃದ್ಧಿಪಡಿಸಲು ಪ್ರಯೋಗಾಲಯಗಳ ನಡುವೆ ಅನುಭವಗಳನ್ನು ಹಂಚಿಕೊಳ್ಳುವ ಅಗತ್ಯವಿದೆ ಎಂದು ತಿಳಿಸಿದರು. ಟಿಶ್ಯೂ ಕಲ್ಚರ್ ಪೆÇ್ರೀಟೋಕಾಲ್‍ನ ಬೆಳವಣಿಗೆಯು ಜರ್ಮ್‍ಪ್ಲಾಸಂನ ಸಂರಕ್ಷಣೆಯನ್ನು ಬಲಪಡಿಸುತ್ತದೆ ಎಂದು ಅಂತಾರಾಷ್ಟ್ರೀಯ ತೆಂಗಿನ ಜೆನೆಟಿಕ್ ನೆಟ್‍ವರ್ಕ್‍ನ ಸಂಯೋಜಕಿ ಎರ್ಲೀನ್ ಮನೋಹರ್ ತಿಳಿಸಿದರು. 

                ಐಸಿಎಆರ್-ಸಿಪಿಸಿಆರ್‍ಐನ ತೆಂಗಿನ ಅಂಗಾಂಶ ಕೃಷಿ ಕಾರ್ಯಕ್ರಮದ ಕುರಿತಾದ ವಿವರವನ್ನು ಸಿಪಿಸಿಆರ್‍ಐ ನಿರ್ದೇಶಕಿ ಡಾ. ಅನಿತಾ ಕರುಣ್ ಅವರು ತಮ್ಮ ಮುಖ್ಯ ಭಾಷಣದಲ್ಲಿ ಪ್ರಸ್ತುತಪಡಿಸಿದರು. ಹಿರಿಯ ವಿಜ್ಞಾನಿಗಳಾದ ಡಾ.ಎಂ.ಕೆ.ರಾಜೇಶ್ ಸ್ವಾಗತಿಸಿದರು. ಡಾ.ವಿ.ನೀರಲ್ ವಂದಿಸಿದರು.

              ಕಾರ್ಯಾಗಾರದಲ್ಲಿ 24 ಸಾಗರೋತ್ತರ ಪ್ರತಿನಿಧಿಗಳು ಮತ್ತು 12 ಭಾರತೀಯ ಪ್ರತಿನಿಧಿಗಳು ಭಾಗವಹಿಸಿದ್ದರು. ಡಾ. ಬಾರ್ಟ್ ಪ್ಯಾನಿಸ್ (ಬೆಲ್ಜಿಯಂ), ಡಾ. ಕ್ರಿಸ್ಟೆಟಾ ಕ್ಯುಟೊ (ಫಿಲಿಪೈನ್ಸ್), ಡಾ. ಕ್ವಾಂಗ್ ನ್ಗುಯೆನ್ (ವಿಯೆಟ್ನಾಂ), ಡಾ. ವಿಜಿತ ವಿಧಾನರಾಚಿ (ಶ್ರೀಲಂಕಾ), ವಿನ್ಸೆಂಟ್ ಜಾನ್ಸನ್ (ಫ್ರಾನ್ಸ್) ಸಿಪಿಸಿಆರ್‍ಐಯಿಂದ ಡಾ. ಅನಿತಾ ಕರುಣ್ ಮತ್ತು ಡಾ. ಶರೀಫಾ   ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries