HEALTH TIPS

ಇಂಡಿಯಾ ಮೇಡ್' ಪೆನ್ಸಿಲ್ ತಯಾರಿಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಕಾಶ್ಮೀರದ 'ಪೆನ್ಸಿಲ್ ವಿಲೇಜ್'!

              ಜಮ್ಮು-ಕಾಶ್ಮೀರ: ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಔಖೂ ಗ್ರಾಮ ಇಡೀ ದೇಶಕ್ಕೆ ಶಿಕ್ಷಣ ನೀಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಈ ಗ್ರಾಮವು 'ಪೆನ್ಸಿಲ್ ವಿಲೇಜ್' ಎಂದು ಹೆಸರುವಾಸಿಯಾಗಿದೆ. ದೇಶದ ಪೆನ್ಸಿಲ್ ತಯಾರಿಕಾ ಘಟಕಗಳಿಗೆ ಶೇ. 80 ರಿಂದ 90 ರಷ್ಟು ಕಚ್ಚಾ ವಸ್ತುಗಳನ್ನು ಪೂರೈಸುತ್ತದೆ.

             2021 ರಲ್ಲಿ ಪ್ರಧಾನಿ ನರೇಂದ್ರ ಮೋದಿ  ತಮ್ಮ 'ಮನ್ ಕಿ ಬಾತ್' ನಲ್ಲಿ ಈ ಯಶಸ್ಸಿನ ಕಥೆಯನ್ನು ಪ್ರಸ್ತಾಪಿಸಿದ ನಂತರ ಈ ಗ್ರಾಮ ಖ್ಯಾತಿ ಗಳಿಸಿತು.ದೇಶಾದ್ಯಂತ ವಿದ್ಯಾರ್ಥಿಗಳು ತಮ್ಮ ಮನೆಕೆಲಸವನ್ನು ಮಾಡಿದರೆ, ಟಿಪ್ಪಣಿಗಳನ್ನು ಸಿದ್ಧಪಡಿಸಿದರೆ, ಅದು ಪುಲ್ವಾಮಾದ ಜನರ ಕಠಿಣ ಪರಿಶ್ರಮದಿಂದಾಗಿ ಎಂದು ಅವರು ಹೇಳಿದ್ದರು.


            ಯುವ ಉದ್ಯಮಿ ಮಂಜೂರ್ ಅಹ್ಮದ್ ಅಲ್ಲಾಯ್ ಅವರು 2012 ರಲ್ಲಿ  ಜಮ್ಮುವಿನಲ್ಲಿರುವ ಹಿಂದೂಸ್ತಾನ್ ಪೆನ್ಸಿಲ್ ತಯಾರಿಕಾ  ಘಟಕಕ್ಕೆ ಭೇಟಿ ನೀಡಿದಾಗ ಗ್ರಾಮಕ್ಕೆ ಒಂದು ತಿರುವು ಸಿಕ್ಕಿತ್ತು. ಅಲ್ಲಿ ಅಧಿಕಾರಿಗಳನ್ನು ಭೇಟಿ ಮಾಡಿ, ಧೀರ್ಘ ಸಮಾಲೋಚನೆ ನಂತರ ಕಚ್ಚಾ ವಸ್ತುಗಳನ್ನು ಪೂರೈಸಲು ಮನವೊಲಿಸಿದ್ದರು.

              ಪೆನ್ಸಿಲ್ ಸ್ಲೇಟ್‌ಗಳು ಕಾಶ್ಮೀರದ ಪ್ರಸಿದ್ಧ ಪೋಪ್ಲರ್ ಮರಗಳಿಂದ ಮಾಡಲಾಗುತ್ತದೆ. ಅದರ ತೇವಾಂಶದ ಮಟ್ಟದಿಂದಾಗಿ ಪೆನ್ಸಿಲ್‌ಗಳನ್ನು ತಯಾರಿಸಲು ಇದು ಸೂಕ್ತವಾಗಿರುತ್ತದೆ. ಪೋಪ್ಲರ್ ಮರ ಕಣಿವೆಯಲ್ಲಿ ಉತ್ತಮವಾಗಿ ಬೆಳೆಯುತ್ತದೆ. ಅಲ್ಲಿನ ಸೂಕ್ತ ತೇವಾಂಶ  ಮತ್ತು  ಹವಾಮಾನ ಪರಿಸ್ಥಿತಿಗಳು ಮರ ಮೃದುವಾಗಿರಲು ಅನುವು ಮಾಡಿಕೊಡುತ್ತದೆ.

            2012 ಕ್ಕೂ ಮೊದಲು, ಪೋಪ್ಲರ್ ಮರದ ದಿಮ್ಮಿಗಳನ್ನು ಬ್ಯಾಂಡ್ಸಾದಲ್ಲಿ ಕತ್ತರಿಸಿ ಜಮ್ಮುವಿನ ಪೆನ್ಸಿಲ್ ಉತ್ಪಾದನಾ ಘಟಕಕ್ಕೆ ಸಾಗಿಸಲಾಯಿತು. ಆದಾಗ್ಯೂ, 2012 ರಿಂದ ಮಂಜೂರ್ ಮತ್ತು ಇತರ ಉದ್ಯಮಿಗಳು ಪಾಲಿಮರ್ ಚೀಲಗಳಲ್ಲಿ ಪೆನ್ಸಿಲ್ ಸ್ಲೇಟ್‌ಗಳನ್ನು ಹಿಮಾಚಲ ಪ್ರದೇಶದ ಉತ್ಪಾದನಾ ಘಟಕಕ್ಕೆ ಸಾಗಿಸುತ್ತಿದ್ದಾರೆ. ಇದು ಉತ್ಪಾದನಾ ಘಟಕದ ಕೆಲಸವನ್ನು ಸುಲಭಗೊಳಿಸಿದೆ ಮತ್ತು ಉತ್ಪಾದನೆಯನ್ನು ಹೆಚ್ಚಿಸಿದೆ. ಇಂದಿನ ದಿನಗಳಲ್ಲಿ ಸರಾಸರಿಯಲ್ಲಿ ಪ್ರತಿ  ಉತ್ಪಾದನಾ ಘಟಕವು ಎರಡು ದಿನಕ್ಕೊಮ್ಮೆ 300 ಬ್ಯಾಗ್‌ಗಳನ್ನು ಒಳಗೊಂಡಿರುವ ಸ್ಲೇಟ್‌ಗಳನ್ನು ಹಿಮಾಚಲ ಪ್ರದೇಶದ ತಯಾರಿಕಾ ಘಟಕಕ್ಕೆ ಸಾಗಿಸುತ್ತವೆ.

             ಈಗ ಪೆನ್ಸಿಲ್ ತಯಾರಿಕಾ ಘಟಕ ಸಿದ್ಧ ರೂಪದಲ್ಲಿ ಕಚ್ಚಾ ವಸ್ತುಗಳನ್ನು ಪಡೆಯುತ್ತದೆ. ಅವರು ಅದರಲ್ಲಿ ಬಣ್ಣ ಮತ್ತು ಸೀಸವನ್ನು ಹಾಕಬೇಕು ಮತ್ತು ಪೆನ್ಸಿಲ್‌ಗಳನ್ನು ಉತ್ಪಾದಿಸಲು ಇತರ ಕೆಲವು ಪ್ರಕ್ರಿಯೆಯನ್ನು ಕೈಗೊಳ್ಳಬೇಕು ಎಂದು ಝೀಲಂ ಆಗ್ರೋ ಇಂಡಸ್ಟ್ರೀಸ್ ಮಾಲೀಕ ಮಂಜೂರ್ ಹೇಳಿದರು.

            ಅಧಿಕಾರಿಗಳ ಪ್ರಕಾರ, ಕಾಶ್ಮೀರದಲ್ಲಿ 18 ಸ್ಲೇಟ್ ಕಾರ್ಖಾನೆಗಳಿವೆ ಮತ್ತು ಅವುಗಳಲ್ಲಿ 17 ಪುಲ್ವಾಮಾದಲ್ಲಿವೆ. ಅರ್ಧದಷ್ಟು ಸ್ಲೇಟ್ ಕಾರ್ಖಾನೆಗಳು ಔಖೂ ಗ್ರಾಮದಲ್ಲಿವೆ ಎಂದು ಮಂಜೂರ್ ಹೇಳಿದರು. “ನನ್ನ ಬಳಿ ಮೂರು ಘಟಕಗಳಿವೆ. ಗ್ರಾಮದಲ್ಲಿ ಇನ್ನೂ 3-5 ಘಟಕಗಳಿವೆ ಎಂದು ಹೇಳಿದರು. ಈ ಗ್ರಾಮವು ಸ್ಥಳೀಯ ಯುವಕರಿಗೆ ಉದ್ಯೋಗವನ್ನು ನೀಡುತ್ತಿದೆ. ಸುಮಾರು 250 ಕುಟುಂಬಗಳನ್ನು ಒಳಗೊಂಡಿರುವ ಗ್ರಾಮದಲ್ಲಿ 200 ಕ್ಕೂ ಹೆಚ್ಚು ಜನರು ಈ ಪೆನ್ಸಿಲ್ ಸ್ಲೇಟ್ ಕಾರ್ಖಾನೆಗಳಲ್ಲಿ ತಮ್ಮ ಜೀವನೋಪಾಯವನ್ನು ಗಳಿಸುತ್ತಿದ್ದಾರೆ

            ಪುಲ್ವಾಮಾದ ಮತ್ತೊಂದು ಸ್ಲೇಟ್ ತಯಾರಿಕೆ ಘಟಕದ ಮಾಲೀಕ ಹಾಜಿ ಅಬ್ದುಲ್ ಅಜೀಜ್ ಅಲ್ಲಾಯ್ ಮಾತನಾಡಿ, ನಾನು 10 ನೇ ತರಗತಿಯಲ್ಲಿ ಉತ್ತೀರ್ಣನಾಗಿದ್ದು, ನನ್ನ ಅಧ್ಯಯನವನ್ನು ಮುಂದುವರಿಸಲು ಸಾಧ್ಯವಾಗಲಿಲ್ಲ. ಆದರೆ ಪೆನ್ಸಿಲ್‌ಗಳಿಗೆ ಕಚ್ಚಾ ವಸ್ತುಗಳನ್ನು ಒದಗಿಸುವ ಮೂಲಕ ದೇಶದ ಮಕ್ಕಳಿಗೆ ಶಿಕ್ಷಣ ನೀಡುವಲ್ಲಿ ನನ್ನ ಪಾತ್ರವನ್ನು ನಿರ್ವಹಿಸುತ್ತಿದ್ದೇನೆ ಎಂದರು. 

            ಭಾರತವು ಮೊದಲು ಚೀನಾದಂತಹ ದೇಶಗಳಿಂದ ಮರದ ಸರಬರಾಜುಗಳನ್ನು ಆಮದು ಮಾಡಿಕೊಳ್ಳುತ್ತಿತ್ತು ಆದರೆ ಓಖೂ ಗ್ರಾಮ ಮತ್ತು ಕಣಿವೆಯ ಇತರ ಭಾಗಗಳಲ್ಲಿ ಸ್ಲೇಟ್ ಉತ್ಪಾದನಾ ಘಟಕಗಳನ್ನು ತೆರೆದ ನಂತರ, ದೇಶದ ಶೇಕಡಾ 90 ರಷ್ಟು ಪೆನ್ಸಿಲ್ ಬೇಡಿಕೆಗಳನ್ನು ಕಣಿವೆಯಿಂದ ಮಾತ್ರ ಪೂರೈಸಲಾಗುತ್ತದೆ.ಇದು ಗ್ರಾಮದ ಜನರ ಆರ್ಥಿಕ ಸಬಲೀಕರಣಕ್ಕೆ ಕಾರಣವಾಗುವುದಲ್ಲದೆ ಗ್ರಾಮದಲ್ಲಿ ಸಾಕ್ಷರತೆಯ ಪ್ರಮಾಣವೂ ಹೆಚ್ಚಿದೆ ಎಂದು ಅವರು ಹೇಳಿದರು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries