HEALTH TIPS

ದಾಖಲೆ ಬರೆದ ಡಿ ಕಾಕ್-ರಾಹುಲ್ ಜೋಡಿ; ಐಪಿಎಲ್ ಇತಿಹಾಸದಲ್ಲೇ ಗರಿಷ್ಠ ಆರಂಭಿಕ ಜೊತೆಯಾಟ!

           ಮುಂಬೈ: ಐಪಿಎಲ್ ಇತಿಹಾಸದಲ್ಲಿಯೇ ಲಖನೌ ಸೂಪರ್ ಜೈಂಟ್ಸ್ ತಂಡ ಕ್ವಿಂಟನ್ ಡಿ ಕಾಕ್-ಕೆಎಲ್ ರಾಹುಲ್ ಜೋಡಿ ಅಪೂರ್ವ ದಾಖಲೆ ನಿರ್ಮಿಸಿದೆ.

     ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ  ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಲಖನೌ ಸೂಪರ್ ಜೈಂಟ್ಸ್ 2 ರನ್ ಗಳ ವಿರೋಚಿತ ಜಯ ದಾಖಲಿಸಿದೆ. ಈ ಗೆಲುವಿಗೆ ತಂಡದ ಆರಂಭಿಕ ಜೋಡಿ ಕ್ವಿಂಟನ್ ಡಿ ಕಾಕ್-ಕೆಎಲ್ ರಾಹುಲ್ ಜೋಡಿಯ ದಾಖಲೆಯ ಜೊತೆಯಾಟ ಕಾರಣ. ನಾಯಕ ಕೆ.ಎಲ್. ರಾಹುಲ್ ಹಾಗೂ ಕ್ವಿಂಟನ್ ಡಿ ಕಾಕ್ ಮುರಿಯದ ಮೊದಲ ವಿಕೆಟ್‌ಗೆ 210 ರನ್ ಪೇರಿಸಿ ನೂತನ ದಾಖಲೆ ನಿರ್ಮಿಸಿದ್ದಾರೆ. 


           ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಡಿ ಕಾಕ್ ಹಾಗೂ ರಾಹುಲ್ ಜೋಡಿ ಮೊದಲ ವಿಕೆಟ್‌ಗೆ 210 ರನ್‌ಗಳ ಜೊತೆಯಾಟದಲ್ಲಿ ಭಾಗಿಯಾಗಿ ಅಬ್ಬರಿಸಿದರು.  ಇದು ಐಪಿಎಲ್ ಇತಿಹಾಸದಲ್ಲೇ ಮೊದಲ ವಿಕೆಟ್‌ಗೆ ದಾಖಲಾದ ಗರಿಷ್ಠ ಜೊತೆಯಾಟದ ದಾಖಲೆಯಾಗಿದೆ.  ಹಾಗೆಯೇ ಒಂದೇ ಒಂದು ವಿಕೆಟ್ ಕಳೆದುಕೊಳ್ಳದೇ ಸಂಪೂರ್ಣ 20 ಓವರ್‌ ಬ್ಯಾಟಿಂಗ್ ಮಾಡಿದ ದಾಖಲೆಗೆ ಲಖನೌ ಪಾತ್ರವಾಗಿದೆ. 

          ಯಾವುದೇ ವಿಕೆಟ್‌ಗೆ ದಾಖಲಾದ ಮೂರನೇ ಗರಿಷ್ಠ ಜೊತೆಯಾಟದ ದಾಖಲೆ ಇದಾಗಿದೆ. 2016ರಲ್ಲಿ ಆರ್‌ಸಿಬಿಯ ವಿರಾಟ್ ಕೊಹ್ಲಿ ಹಾಗೂ ಎಬಿ ಡಿವಿಲಿಯರ್ಸ್ 229 ರನ್‌ಗಳ ಜೊತೆಯಾಟ ಕಟ್ಟಿದ್ದರು. 70 ಎಸೆತಗಳನ್ನು ಎದುರಿಸಿದ ಡಿ ಕಾಕ್ ತಲಾ 10 ಬೌಂಡರಿ ಹಾಗೂ ಸಿಕ್ಸರ್ ನೆರವಿನಿಂದ 140 ರನ್ ಗಳಿಸಿ ಔಟಾಗದೆ ಉಳಿದರು.  ಈ ಮೂಲಕ ಐಪಿಎಲ್ ಇನ್ನಿಂಗ್ಸ್‌ವೊಂದರಲ್ಲಿ ಮೂರನೇ ಗರಿಷ್ಠ ವೈಯಕ್ತಿಕ ರನ್ ದಾಖಲಿಸಿದ ಗೌರವಕ್ಕೆ ಪಾತ್ರರಾದರು. ಈ ಪಟ್ಟಿಯಲ್ಲಿ ಮುನ್ನಡೆಯಲ್ಲಿರುವ ಕ್ರಿಸ್ ಗೇಲ್, 2013ರಲ್ಲಿ ಅಜೇಯ 175 ರನ್ ಗಳಿಸಿದ್ದರು.  ಒಟ್ಟಾರೆಯಾಗಿ ಐಪಿಎಲ್‌ನಲ್ಲಿ ಡಿ ಕಾಕ್, ಎರಡನೇ ಶತಕದ ಸಾಧನೆ ಮಾಡಿದರು. 

          ಡಿ ಕಾಕ್‌ಗೆ ತಕ್ಕ ಸಾಥ್ ನೀಡಿದ ರಾಹುಲ್ 51 ಎಸೆತಗಳಲ್ಲಿ ನಾಲ್ಕು ಸಿಕ್ಸರ್ ಹಾಗೂ ಮೂರು ಬೌಂಡರಿ ನೆರವಿನಿಂದ 68 ರನ್ ಗಳಿಸಿ ಅಜೇಯರಾಗುಳಿದರು. ಈ ಮೂಲಕ ಐಪಿಎಲ್‌ನಲ್ಲಿ ಸತತ ಮೂರನೇ ಬಾರಿಗೆ 500ಕ್ಕೂ ಹೆಚ್ಚು ರನ್ ಗಳಿಸಿದ ಸಾಧನೆ ಮಾಡಿದರು. 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries