ನವದೆಹಲಿ: ಮುಂಬರುವ ಜುಲೈ ತಿಂಗಳಲ್ಲಿ ಬ್ಯಾಂಕ್ ಕೆಲಸಗಳಿದ್ದರೆ ಆದಷ್ಟು ಬೇಗ ಮುಗಿಸಿಕೊಳ್ಳಿ, ಏಕೆಂದರೆ ಬರುವ ತಿಂಗಳು ಬಹುತೇಕ ದಿನ ಬ್ಯಾಂಕ್ಗಳಿಗೆ ರಜೆ ಇರಲಿದೆ.
0
samarasasudhi
ಜೂನ್ 27, 2022
ನವದೆಹಲಿ: ಮುಂಬರುವ ಜುಲೈ ತಿಂಗಳಲ್ಲಿ ಬ್ಯಾಂಕ್ ಕೆಲಸಗಳಿದ್ದರೆ ಆದಷ್ಟು ಬೇಗ ಮುಗಿಸಿಕೊಳ್ಳಿ, ಏಕೆಂದರೆ ಬರುವ ತಿಂಗಳು ಬಹುತೇಕ ದಿನ ಬ್ಯಾಂಕ್ಗಳಿಗೆ ರಜೆ ಇರಲಿದೆ.
ಬ್ಯಾಂಕುಗಳಿಗೆ ಆಯಾ ಪ್ರದೇಶಕ್ಕನುಗುಣವಾಗಿ ರಜೆ ನೀಡಲಾಗುತ್ತಿದೆ.
ಜುಲೈ ತಿಂಗಳಲ್ಲೇ 5 ಭಾನುವಾರ, ಎರಡನೇ ಹಾಗೂ ಕೊನೇ ಶನಿವಾರ ಮತ್ತು ಜುಲೈ 11 ರಂದು ಈದ್ ಇರುವುದರಿಂದ ದೇಶಾದ್ಯಂತ ಬ್ಯಾಂಕ್ಗಳಿಗೆ ಒಟ್ಟು 8 ದಿನ ರಜೆ ಇರಲಿದೆ. ಈ ನಡುವೆ ಉತ್ತರ ಭಾರತದಲ್ಲಿ ಅಗರ್ತಲ, ಶಿಲ್ಲಾಂಗ್ ಗ್ಯಾಂಗ್ಟಕ್ ಸೇರಿದಂತೆ ಹಲವು ನಗರಗಳಲ್ಲಿ ಇನ್ನೂ ಒಂದು ವಾರಗಳ ಕಾಲ ಪ್ರತ್ಯೇಕ ರಜೆಗಳು ಸೇರಿವೆ.
ಸದ್ಯಕ್ಕೆ ದೇಶಾದ್ಯಂತ ಒಟ್ಟು 8 ದಿನ ಬ್ಯಾಂಕ್ಗಳಿಗೆ ರಜೆ ಇದ್ದು, ಏನೇ ಕೆಲಸವಿದ್ದರೂ ರಜೆಗೂ ಮುನ್ನ ಮುಗಿಸಿಕೊಳ್ಳುವುದು ಒಳ್ಳೆಯದು.