HEALTH TIPS

ಕಾರಿನ ಗಾಜನ್ನು ಒರೆಸುತ್ತ ಫಾಸ್ಟ್ಯಾಗ್ ಹಣ ಕಬಳಿಸುವವರ ಹಾವಳಿ?; ಹೊರಬಿತ್ತು ಅಸಲಿಯತ್ತು.

 ನವದೆಹಲಿ: ಹೆದ್ದಾರಿಯಲ್ಲಿ ನಿಂತ ಕಾರನ್ನು ಒರೆಸುವ ನೆಪದಲ್ಲಿ ಬರುವ ಬಾಲಕರು ಕಾರಿನ ಗಾಜಿನ ಮೇಲಿರುವ ಫಾಸ್ಟ್ಯಾಗ್​ ಸ್ಟಿಕ್ಕರ್ ಮೇಲೆ ಕೈಯಾಡಿಸುತ್ತ ಅದರಲ್ಲಿನ ಪ್ರಿಪೇಯ್ಡ್ ವ್ಯಾಲೆಟ್​ ಹಣ ಕಬಳಿಸುತ್ತಿದ್ದಾರೆ ಎಂದು ಹೇಳಲಾದ ವಿಡಿಯೋ ಇತ್ತೀಚೆಗೆ ವೈರಲ್ ಆಗಿತ್ತು.

ಆದರೆ ಇದೀಗ ಅದರ ಕುರಿತ ಅಸಲಿಯತ್ತು ಹೊರಬಿದ್ದಿದೆ.

ಬಾಲಕನೊಬ್ಬ ಕಾರಿನ ಗಾಜನ್ನು ಒರೆಸುತ್ತ ಅದರ ಮೇಲಿನ ಫಾಸ್ಟ್ಯಾಗ್​ ಸ್ಟಿಕ್ಕರ್ ಮೇಲೆ ಕೈಯಾಡಿಸಿದ್ದನ್ನು ನೋಡಿ ಅನುಮಾನಗೊಂಡ ಕಾರುಸವಾರನೊಬ್ಬ ಆತನನ್ನು ಪ್ರಶ್ನಿಸಿದ್ದ. ಆಗ ಓಡಲಾರಂಭಿಸಿದ್ದ ಬಾಲಕನನ್ನು ಆತ ಅಟ್ಟಿಸಿಕೊಂಡು ಹೋಗಿದ್ದರೂ ಸಿಕ್ಕಿರಲಿಲ್ಲ. ಆ ಬಾಲಕ ಫಾಸ್ಟ್ಯಾಗ್ ಹಣ ಕಬಳಿಸಲು ಮುಂದಾಗಿದ್ದ, ಅಂಥ ದೊಡ್ಡ ವಂಚನಾ ಜಾಲವೇ ಇದೆ ಎಂದು ಹೇಳಿಕೊಂಡಿದ್ದ ವಿಡಿಯೋ ವೈರಲ್ ಆಗಿತ್ತು.


ಈ ಹಿನ್ನೆಲೆಯಲ್ಲಿ ಫ್ಯಾಕ್ಟ್​ಚೆಕ್​ ಮಾಡಿದ್ದ ಪ್ರೆಸ್ ಇನ್​ಫಾರ್ಮೇಷನ್​ ಬ್ಯೂರೋ (ಪಿಐಬಿ) ಅಸಲಿಯತ್ತು ಹೊರಹಾಕಿದೆ. ಈ ಕುರಿತು ಪರಿಶೀಲನೆ ನಡೆಸಿದ್ದು, ಅದು ಫೇಕ್​ ವಿಡಿಯೋ ಎಂದು ಪಿಐಬಿ ಹೇಳಿದೆ. ಅಂಥ ಟ್ರಾನ್​ಸ್ಯಾಕ್ಷನ್​ ಸಾಧ್ಯವಿಲ್ಲ, ಅದು ಓಪನ್​ ಇಂಟರೆನ್​​ನಲ್ಲಂತೂ ಅಸಾಧ್ಯ. ಪ್ರತಿ ಟೋಲ್ ಪ್ಲಾಜಾ ಕೂಡ ನಿಗದಿತ ಬ್ಯಾಂಕ್​ ಮತ್ತು ಜಿಯೋ ಕೋಡ್ ಹೊಂದಿರುವ ಯುನಿಕ್ ಕೋಡ್ ಒಳಗೊಂಡಿರುತ್ತದೆ. ಇದು ನ್ಯಾಷನಲ್ ಇಲೆಕ್ಟ್ರಿಕ್​ ಟೋಲ್ ಕಲೆಕ್ಷನ್ ಸಿಸ್ಟಮ್​ ಮೂಲಕ ಮ್ಯಾಪಿಂಗ್ ಆಗುತ್ತಿರುತ್ತದೆ. ಟೋಲ್​ ಫಾಸ್ಟ್ಯಾಗ್ ಪ್ರಿಪೇಯ್ಡ್​ ವ್ಯಾಲೆಟ್ ಪಾವತಿ ಸುರಕ್ಷಿತ, ಈಗ ಹರಿದಾಡುತ್ತಿರುವ ವಿಡಿಯೋ ಫೇಕ್ ಎಂದು ಪಿಐಬಿ ಹೇಳಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries