HEALTH TIPS

ಕಪ್ಪು ಬಟ್ಟೆ ತೊಟ್ಟು ವಿಧಾನ ಸಭೆಗೆ ಆಗಮಿಸಿದ ಯುವ ಶಾಸಕರು; ವಿಧಾನಸಭೆಯಲ್ಲಿ ಪ್ರತಿಪಕ್ಷಗಳ ಪ್ರತಿಭಟನೆ; ಕಲಾಪ ಮುಂದೂಡಿಕೆ

                ತಿರುವನಂತಪುರ: ವಿಧಾನಸಭೆಯಲ್ಲಿ ಕಪ್ಪುಬಟ್ಟೆ ಧರಿಸಿದ ಯುವ ಶಾಸಕರು ಸರ್ಕಾರಕ್ಕೆ ಚುರುಕುಮುಟ್ಟಿಸಲೆತ್ನಿಸಿದರು. ವಿರೋಧ ಪಕ್ಷದ ಶಾಸಕರಾದ ಶಾಫಿ ಪರಂಬಿಲ್, ಅನ್ವರ್ ಸಾದತ್ ಮತ್ತು ಸನೀಶಕುಮಾರ್ ಕಪ್ಪು ಅಂಗಿ ಧರಿಸಿ ಬಂದಿದ್ದರು. 15ನೇ ವಿಧಾನಸಭೆಯ ಐದನೇ ಅಧಿವೇಶನದಲ್ಲಿ ಇಂತಹ ವಿನೂತನ ಪ್ರತಿಭಟನೆಗೆ ವಿಧಾನಸಭೆ ಸಾಕ್ಷಿಯಾಯಿತು. 

                   ಆದರೆ, ಪ್ರತಿಭಟನೆ ಹಿನ್ನೆಲೆಯಲ್ಲಿ ಸದನ ಕಲಾಪವನ್ನು ಮುಂದೂಡಿತು. ಪ್ರತಿಭಟನಾಕಾರರು ಫಲಕಗಳು ಮತ್ತು ಬ್ಯಾನರ್‍ಗಳನ್ನು ಎತ್ತಿ ಹಿಡಿದಿದ್ದÀರು.

              ಅಧಿವೇಶನದ  ಮೊದಲ ದಿನ ಕೇರಳ ಖಾಸಗಿ ಅರಣ್ಯ ತಿದ್ದುಪಡಿ ಮತ್ತು ಕೇರಳ ಸಹಕಾರ ಸಂಘದ ತಿದ್ದುಪಡಿ ಎಂಬ ಎರಡು ಮಸೂದೆಗಳು ಅಜೆಂಡಾದಲ್ಲಿದ್ದವು. ನಾಳೆಯಿಂದ ನಿಧಿ ಸಂಗ್ರಹದ ಮಾತುಕತೆ ಆರಂಭವಾಗಲಿದೆ. ಮುಂದಿನ ತಿಂಗಳು 27 ರವರೆಗೆ 23 ದಿನಗಳ ಕಾಲ ಅಧಿವೇಶನ  ಸೇರಲಿದೆ.

               ಏತನ್ಮಧ್ಯೆ, ರಾಹುಲ್ ಗಾಂಧಿ ಅವರ ವಯನಾಡ್ ಕಚೇರಿಯನ್ನು ಎಸ್‍ಎಫ್‍ಐ ಧ್ವಂಸಗೊಳಿಸುವುದು ಮತ್ತು ಚಿನ್ನ ಕಳ್ಳಸಾಗಣೆಯಲ್ಲಿ ಮುಖ್ಯಮಂತ್ರಿ ವಿರುದ್ಧ ಸ್ವಪ್ನಾ  ಬಹಿರಂಗ ಪಡಿಸಿರುವ ಗೌಪ್ಯಗಳು  ಸೇರಿದಂತೆ ವಿವಾದಾತ್ಮಕ ವಿಷಯಗಳ ಬಗ್ಗೆ ಪ್ರತಿಪಕ್ಷಗಳು ಚರ್ಚೆ ನಡೆಸಲಿವೆ. ವಿಧಾನ ಸಭೆ ಪ್ರವೇÀಶಿಸುವವರ ಮೇಲೆ ವ್ಯಾಪಕ ಪರ್ರಮಾಣದ ನಿಯಂತ್ರಣವೂ ಈ ಬಾರಿ ಇದೆ. 

              ಮಾಧ್ಯಮಗಳು ಸೇರಿದಂತೆ ಶಾಸಕಾಂಗದ ಮೇಲೆ ಕಟ್ಟುನಿಟ್ಟಿನ ನಿಯಂತ್ರಣ ಹೇರಲಾಗಿದ್ದು, ಸಚಿವರು ಮತ್ತು ವಿರೋಧ ಪಕ್ಷದ ನಾಯಕರ ಕಚೇರಿಗಳ ಪ್ರವೇಶಕ್ಕೆ ಇತರರಿಗೆ ನಿಷೇಧಿಸಲಾಗಿದೆ. ಮಾಧ್ಯಮ ಸಿಬ್ಬಂದಿಗೆ ಪ್ರವೇಶ ಮಾಧ್ಯಮ ಕೊಠಡಿಗೆ ಸೀಮಿತವಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries