ಕುಂಬಳೆ: ಪುತ್ತಿಗೆ ಮುಗು ನಿವಾಸಿ ಅಬೂಬಕ್ಕರ್ ಸಿದ್ದೀಕ್ ಅವರ ಅಪಹರಣ ಹಾಗೂ ಕೊಲೆಯ ಹಿಂದೆ ರವಿ ಪೂಜಾರಿಯ ಕೈವಾಡವಿದೆ ಎಂದು ಹೇಳಲಾಗುತ್ತಿದೆ. ಸಿಸಿಟಿವಿ ದೃಶ್ಯಾವಳಿಗಳಲ್ಲಿ ಸಿದ್ದಿಕ್ ಆಸ್ಪತ್ರೆಗೆ ದಾಖಲಾಗಿರುವುದು ಕಂಡುಬಂದಿದೆ. ಕಾರಿನಲ್ಲಿದ್ದ ಇಬ್ಬರು ವ್ಯಕ್ತಿಗಳು ಅಬೂಬಕರ್ ಸಿದ್ದಿಕ್ ಅವರನ್ನು ಆಸ್ಪತ್ರೆಗೆ ಸಾಗಿಸಿ ಪರಾರಿಯಾಗಿದ್ದಾರೆ. ಸಿದ್ದಿಕ್ ನನ್ನು ಆಸ್ಪತ್ರೆಗೆ ಕರೆದೊಯ್ದು ನಂತರ ಕಾರನ್ನು ಸ್ಟಾರ್ಟ್ ಮಾಡಿ ಮುಂದೆ ಸಾಗಲು ಪ್ರಯತ್ನಿಸಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ.
ಪೋಲೀಸರ ಪ್ರಕಾರ, ಆರೋಪಿಗಳು ಸಿದ್ದಿಕ್ ನನ್ನು ಆಸ್ಪತ್ರೆಯಲ್ಲಿ ಬಿಟ್ಟು ಪರಾರಿಯಾಗಿದ್ದಾರೆ. ಥಳಿಸಿ ಸಾಯಿಸಿದ ಆರೋಪಿಗಳು ಆಸ್ಪತ್ರೆಗೆ ಸಾಗಿಸಿದ್ದಾರೆ. ಪ್ರಕರಣದಲ್ಲಿ ಎಂಟು ಆರೋಪಿಗಳನ್ನು ಪೋಲೀಸರು ಗುರುತಿಸಿದ್ದಾರೆ. ಭಾನುವಾರ ಮಾತನಾಡಲಿದೆ ಎಂದು ಹೇಳಿ ಸಿದ್ದಿಕ್ ನನ್ನು ಗುಂಪೆÇಂದು ಕಾರಿನಲ್ಲಿ ಕರೆದುಕೊಂಡು ಹೋಗಿತ್ತು.
ಸಿದ್ದಿಕ್ ನ ಮೈಮೇಲೆ ಇರಿತ ಮತ್ತು ಥಳಿಸಿದ ಗಾಯಗಳಾಗಿವೆ. ಚಿಂತಾಜನಕ ಸ್ಥಿತಿಯಲ್ಲಿದ್ದ ಸಿದ್ದಿಕ್ ನ ಸಹೋದರ ಅನ್ವರ್ ಅವರನ್ನೂ ಆರೋಪಿಗಳು ಆಸ್ಪತ್ರೆಗೆ ಕೊಂಡೊಯ್ದು ಪರಾರಿಯಾಗಿದ್ದಾರೆ. ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅನ್ವರ್ ಹೇಳಿಕೆಯನ್ನು ಮಂಗಳೂರಿಗೆ ತೆರಳಿ ಕುಂಬಳೆ ಪೋಲೀಸರು ದಾಖಲಿಸಿಕೊಂಡಿದ್ದಾರೆ.


