HEALTH TIPS

ಯೋಗ ಸಂದೇಶದೊಂದಿಗೆ ಲಡಾಖ್‍ಗೆ ಅಗ್ರಿಮಾ; ಅದೂ ಸೈಕಲ್ ನಲ್ಲಿ; ಯೋಗವನ್ನು ಕಲಿಸುವ ಮತ್ತು ಪ್ರಚಾರ ಮಾಡಲು ಏಕವ್ಯಕ್ತಿ ಪ್ರವಾಸ

                ಕೋಝಿಕ್ಕೋಡ್: ಯೋಗ ಪ್ರಚಾರಕ್ಕಾಗಿ ಲಡಾಕ್‍ಗೆ ಏಕಾಂಗಿ ಪ್ರವಾಸ ಕೈಗೊಂಡಿದ್ದಾರೆ ಅಗ್ರಮಾ ನಾಯರ್. ಅದೂ ಸೈಕಲ್ ಮೇಲೆ. ಕೇರಳೀಯ ಹುಡುಗಿ ಅಗ್ರಿಮಾ ನಾಯರ್ ಈ ಸವಾಲನ್ನು ಸ್ವೀಕರಿಸಿದ್ದಾರೆ. ಅಂತರಾಷ್ಟ್ರೀಯ ಯೋಗ ದಿನದಂದು ಕೊಚ್ಚಿಯಿಂದ ಆರಂಭವಾದ ಪ್ರಯಾಣ ಕೋಝಿಕ್ಕೋಡ್ ಮೂಲಕ ಸಾಗಿದೆ. ದಾರಿಯಲ್ಲಿ ಯೋಗದ ಬಗ್ಗೆ ಅರಿವು ಮೂಡಿಸುವುದು ಮತ್ತು ಕಲಿಸುವುದು ಅಗ್ರಿಮಾ ಅವರ ಪ್ರಯಾಣದ ಲಕ್ಷ್ಯ.

                 ಯೋಗದಿಂದ ಆರೋಗ್ಯ ಎಂಬ ಸಂದೇಶ ಸಾರುವುದೇ ಅಗ್ರಿಮಾರ ಪಯಣದ ಮೂಲೋದ್ದೇಶ. ಕೇರಳೀಯ ಮಹಿಳೆಯೊಬ್ಬರು ಯೋಗ ಸಂದೇಶದೊಂದಿಗೆ ಏಕಾಂಗಿಯಾಗಿ 3500 ಕಿ.ಮೀ.ಗೂ ಹೆಚ್ಚು ಸೈಕಲ್ ತುಳಿಯಲಿರುವುದು ಇದೇ ಮೊದಲು. ನಗರ ಮತ್ತು ಹಳ್ಳಿಗಳ ಮೂಲಕ ಪ್ರಯಾಣದ ಉದ್ದಕ್ಕೂ ಯೋಗ ತರಬೇತಿ ನೀಡಲಾಗುತ್ತದೆ. ಯುವ ಜನರಿಗೆ ಸಂದೇಶ ಸಾರುವ ಪ್ರಯತ್ನ ಇದಾಗಿದೆ.


                 ಲಡಾಕ್‍ಗೆ ತೆರಳಬೇಕು ಎಂದು ಯೋಚಿಸಿದಾಗ ಸೈಕ್ಲಿಂಗ್ ಪ್ರಾರಂಭಿಸಿದೆ ಎಂದು ಅಗ್ರಿಮಾ ಹೇಳುತ್ತಾರೆ. ಹಳ್ಳಿಗಳಲ್ಲಿ ಯೋಗ ಕಲಿಸಲು ಲಡಾಕ್ ಪ್ರಯಾಣಕ್ಕೆ ಜೋಡಿಸಿದೆ. ಯಾವುದೇ ಭರವಸೆಯಿಲ್ಲದೆ ಪ್ರಯಾಣ ಪ್ರಾರಂಭವಾಯಿತು. ಆದರೆ ನಂತರ ಅದು ಸಕಾರಾತ್ಮಕ ಅನುಭವವಾಗಿತ್ತು. ಒಬ್ಬಾಕೆ ಹುಡುಗಿ ಒಬ್ಬಂಟಿಯಾಗಿ ಪ್ರಯಾಣಿಸುತ್ತಾಳೆ ಎಂದು ತಿಳಿದಾಗ ಎಲ್ಲರೂ ಸಹಾಯ ಮಾಡಲು ಮುಂದೆ ಬಂದಿದ್ದಾರೆ ಎಮದು ಅಗ್ರಮಾ ತಿಳಿಸಿದ್ದಾರೆ. 

                  ಅಗ್ರಿಮಾ ಯೋಗ ಚಿಕಿತ್ಸೆಯಲ್ಲಿ ಸ್ನಾತಕೋತ್ತರ ಪದವಿ ಮತ್ತು ನರವಿಜ್ಞಾನದಲ್ಲಿ ಪಿಎಚ್‍ಡಿ ಪದವಿ ಪಡೆದಿದ್ದಾರೆ. ಪ್ರವಾಸದ ವೇಳೆ ಕೋಝಿಕ್ಕೋಡ್ ನಲ್ಲಿ ಅಗ್ರಿಮಾ ಅವರ ನೇತೃತ್ವದಲ್ಲಿ ನರವಿಜ್ಞಾನ ಮತ್ತು ಯೋಗದ ಕುರಿತು ತರಗತಿ ನಡೆಸಲಾಯಿತು. ಕೋಝಿಕ್ಕೋಡ್ ಪೌರಾಡಳಿತ  ಗೌರವ ಸಲ್ಲಿಸಿದೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries