ಯುವ ವಕೀಲೆ ಮೃತ ಸ್ಥಿತಿಯಲ್ಲಿ ಪತ್ತೆ; ನಿಗೂಢತೆ ಇದೆಯೆಂದ ಕುಟುಂಬ
0samarasasudhiಜೂನ್ 24, 2022
ಕೊಲ್ಲಂ: ಯುವ ವಕೀಲರೊಬ್ಬರು ತಮ್ಮ ಮನೆಯೊಳಗೆ ಶವವಾಗಿ ಪತ್ತೆಯಾಗಿದ್ದಾರೆ. ಕೊಟ್ಟಾರಕ್ಕರ ಕಡವತ್ತೂರಿನ ನಿವಾಸಿ ಅಷ್ಟಮಿ (25) ತನ್ನ ಮಲಗುವ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ.
ಆತ್ಮಹತ್ಯೆ ಎಂಬುದು ಪ್ರಾಥಮಿಕ ತೀರ್ಮಾನವಾಗಿದೆ. ಘಟನೆ ವೇಳೆ ಮನೆಯಲ್ಲಿ ಅಷ್ಟಮಿ ಒಬ್ಬರೇ ಇದ್ದರು. ಆತ್ಮಹತ್ಯೆಯ ಹಿಂದೆ ನಿಗೂಢವಿದೆ ಎಂದು ಕುಟುಂಬದವರು ಆರೋಪಿಸಿದ್ದಾರೆ. ಘಟನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.