ಪೆರ್ಲ: ಮಾನಸಿಕ ಒತ್ತಡ ಹಾಗೂ ಭಾವೋದ್ವೇಗ ಕಡಿಮೆಗೊಳಿಸುವುದರ ಜತೆಗೆ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಯೋಗ ಸಹಕಾರಿ ಎಂಬುದಾಗಿ ನಿವೃತ್ತ ಶಿಕ್ಷಕಿ ನಳಿನಿ ಸೈಪಂಗಲು ತಿಳಿಸಿದ್ದಾರೆ. ಅವರು ವಿಶ್ವ ಯೋಗ ದಿನಾಚರಣೆ ಅಂಗವಾಗಿ ಪೆರ್ಲ ಶ್ರೀ ಭಾರತೀ ಸದನದಲ್ಲಿ ನಡೆದ ಉಕ್ಕಿನಡ್ಕಾಸ್ ಆಯುರ್ವೇದ ಪ್ರಾಯೋಜಕತ್ವದಲ್ಲಿ ಮಹಿಳೆಯರಿಗಾಗಿ ಉಚಿತ ಯೋಗ ಸಪ್ತಾಹ ಶಿಬಿರ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಶ್ರೀಮಾತಾ ಯೋಗ ಕೇಂದ್ರದ ಸಹ ಪ್ರಾಯೋಜಕತ್ವದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಸಂದರ್ಭ ಮಹಿಳೆಯರ ಆರೋಗ್ಯ ಸಂರಕ್ಷಣೆ ಬಗ್ಗೆಯೂ ಮಾಹಿತಿ ನೀಡಲಾಯಿತು. ಆಯುರ್ವೇದ ತಜ್ಞೆ ಡಾ. ಸಪ್ನಾ ಜೆ. ಉಕ್ಕಿನಡ್ಕ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನಾಡಿದರು. ಶಿಕ್ಷಕಿ ಜಯಶ್ರೀ ಕೆ. ಅಡ್ಯನಡ್ಕ ಕಾರ್ಯಕ್ರಮ ನಿರೂಪಿಸಿದರು. ದಿವ್ಯಾ ಪಳ್ಳತ್ತಡ್ಕ ವಂದಿಸಿದರು. ಈ ಸಂದರ್ಭ ಶಿಬಿರಾರ್ಥಿಗಳಿಂದ ಯೋಗ ಪ್ರಾತ್ಯಕ್ಷಿಕೆ ನಡೆಯಿತು.

