HEALTH TIPS

ವಿಶ್ವ ಮಾದಕ ವಸ್ತು ವಿರೋಧಿ ದಿನ: ಜೂ. 26ರಂದು ಜಾಗೃತಿ ಕಾರ್ಯಕ್ರಮ

              ಕಾಸರಗೋಡು: ವಿಶ್ವ ಮಾದಕ ವಸ್ತು ವಿರೋಧಿ ದಿನಾಚರಣೆ ಅಂಗವಾಗಿ ಜಾಗೃತಿ ಕಾರ್ಯಕ್ರಮ ಜೂನ್ 26ರಂದು ಬೆಳಗ್ಗೆ 10ಕ್ಕೆ ಕಾಸರಗೋಡು ಸರ್ಕಾರಿ ಕಾಲೇಜು ಸಭಾಂಗಣದಲ್ಲಿ ಜರುಗಲಿದೆ. ಬಿಲ್ಡಪ್ ಕಾಸರಗೋಡು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಾಸರಗೋಡು ಸರ್ಕಾರಿ ಕಾಲೇಜು ಎನ್ನೆಸ್ಸೆಸ್ ಘಟಕ, ಮಾನವ ಹಕ್ಕುಗಳ ರಕ್ಷಣಾ ಮಿಷನ್, ಅಬಕಾರಿ ಇಲಾಖೆ, ರೋವರ್ ಸ್ಕೌಟ್ಸ್ ಮತ್ತು ರೇಂಜರ್ಸ್ ಜಂಟಿಯಾಗಿ ಕಾರ್ಯಕ್ರಮ ನಡೆಯುವುದು.

             ಗಡಿ ಜಿಲ್ಲೆಯ ಹಲವೆಡೆ ಸಮಾಜ ವಿರೋಧಿ ಚಟುವಟಿಕೆಗಳು ಹೆಚ್ಚುತ್ತಿದ್ದು, ಇವುಗಳಲ್ಲಿ  ಅಮಲು ಪದಾರ್ಥಗಳ ಬಳಕೆ ಅತ್ಯಂತ ಅಪಾಯಕಾರಿಯಾಗಿ ಮುಂದುವರಿಯುತ್ತಿದೆ. ಇದಕ್ಕೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಲು ಅನುಕೂಲವಾಗುವಂತೆ ಯೋಜನೆಗೆ ರೂಪು ನೀಡುವ ನಿಟ್ಟಿನಲ್ಲಿ ಕರ್ಯಕ್ರಮ ಆಯೋಜಿಸಲಾಗುತ್ತಿದೆ. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಕಾರ್ಯದರ್ಶಿ ಹಾಗೂ ಉಪ ನ್ಯಾಯಾಧೀಶರಾದ  ಬಿ. ಕರುಣಾಕರನ್ ಸಮಾರಂಭ ಉದ್ಘಾಟಿಸುವರು.  ಬಿಲ್ಡಪ್ ಕಾಸರಗೋಡು ಅಧ್ಯಕ್ಷ ಕೂಕ್ಕಲ್ ಬಾಲಕೃಷ್ಣನ್ ಅಧ್ಯಕ್ಷತೆ ವಹಿಸುವರು.   ಸಂಸ್ಥೆಯ ಪೆÇೀಷಕ ಹಾಗೂ ನಿವೃತ್ತ  ಉಪಕುಲಪತಿ ಡಾ. ಖಾದರ್ ಮಾಞËಡ್,  ಅಬ್ದುಲ್ ಖಾದಿರ್ ಸಲೀಂ ಸನಾ, ನಿವೃತ್ತ ಐ.ಜಿ. ಕೆ.ಮಧುಸೂದನನ್ ನಾಯರ್, ಪ್ರಮುಖ ಕೈಗಾರಿಕೋದ್ಯಮಿ ಎಂಟಿಪಿ ಮುಹಮ್ಮದ್ ಕುಞÂ, ಸರ್ಕಾರಿ ಕಾಲೇಜು ಪ್ರಾಂಶುಪಾಲ ಡಾ. ಎಂ. ರಮ ಮುಂತಾದವರು ಪಾಲ್ಗೊಳ್ಳುವರು.  ಸಮಾರಂಭದಲ್ಲಿ ರಾಜ್ಯ ಸ್ಕೌಟ್ಸ್ ಮತ್ತು ಗೈಡ್ಸ್ ಆಯುಕ್ತ ಅಜಿತ್ ಸಿ.ಕಳನಾಡ್ ಅವರನ್ನು ಸನ್ಮಾನಿಸಲಾಗುವುದು.  ಮಂಗಳೂರಿನ ಮಾದಕ ದ್ರವ್ಯ ಅಪರಾಧ ವಿಭಾಗ ಪೆÇಲೀಸ್ ಅಧಿಕಾರಿ ಶ್ರೀಲತಾ ಹಾಗೂ ಅಬಕಾರಿ ಪ್ರಿವೆಂಟಿವ್ ಆಫೀಸರ್  ಎನ್.ಜಿ.ರಘುನಾಥನ್ ಅವರು ತರಗತಿ ನಡೆಸುವರು.  ಕಾರ್ಯಕ್ರಮದ ಅಂಗವಾಗಿ "ಅಮಲು-ಯೌವನವನ್ನು ಕಿತ್ತು ತಿನ್ನುವ ಕ್ಯಾನ್ಸರ್" ಎಂಬ ವಿಷಯದಲ್ಲಿ ಪ್ರಬಂಧ ಸ್ಪರ್ಧೆ ಅಂದು ಬೆಳಿಗ್ಗೆ 9.30 ರಿಂದ 10.15 ರವರೆಗೆ ಕಾಲೇಜು ಸೆಮಿನಾರ್ ಹಾಲಿನಲ್ಲಿ ನಡೆಯಲಿದೆ. ಶಾಲಾ ಹಂತದಿಂದ 22 ವರ್ಷದೊಳಗಿನವರಿಗೆ ಭಾಗವಹಿಸಲು ಅವಕಾಶವಿದೆ. ಕನ್ನಡ, ಮಲಯಾಳ ಮತ್ತು ಇಂಗ್ಲಿಷ್‍ನಲ್ಲಿ ಸ್ಪರ್ಧೆ ನಡೆಯಲಿದ್ದು ಹೆಚ್ಚಿನ ಮಾಹಿತಿಗಾಗಿ ಮತ್ತು ನೋಂದಣಿಗಾಗಿ ಶ್ರೀ ಅನೂಪ್ ಕಳನಾಡ್ (ಉಪಾಧ್ಯಕ್ಷರು, ಆಡಳಿತ ಸಾರ್ವಜನಿಕ ಸಂಪರ್ಕಇಲಾಖೆ-ಬಿಲ್ಡ್ ಅಪ್ ಕಾಸರಗೋಡು ಸೊಸೈಟಿ) ಇವರನ್ನು ಮೊಬೈಲ್ ಸಂಖ್ಯೆ 9847023970 ರಲ್ಲಿ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries